ರೆಪೋ ದರ ಕಡಿತಗೊಳಿಸಿದ ಆರ್‌ಬಿಐ, 5.15 ರಿಂದ 4.4ಕ್ಕೆ ಇಳಿಕೆ: ಬ್ಯಾಂಕ್‌ ಸಾಲದ ಬಡ್ಡಿ ದರ ಇಳಿಕೆ

ಕೊರೊನಾವೈರಸ್‌ನಿಂದಾಗಿ ದೇಶಪೂರ್ತಿ 21 ದಿನಗಳ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೋ ಬಡ್ಡಿ ದರಗಳನ್ನು 5.1 ರಿಂದ 4.4ಕ್ಕೆ ಇಳಿಕೆ ಮಾಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ 75 ಬಿಪಿಎಸ್ ಪಾಯಿಂಟ್ಸ್‌ಗಳನ್ನು ಕಡಿಮೆ ಮಾಡಲಾಗಿದೆ ಎಂದಿದ್ದಾರೆ.

ಕೊರೊನಾವೈರಸ್ ವಿರುದ್ಧ ಆರ್ಥಿಕತೆ ಕಾಪಾಡಲು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿರುವ ಆರ್‌ಬಿಐ, ಕೊರೊನಾ ವೈರಸ್‌ನಿಂದಾಗಿ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಆಗುತ್ತಿದೆ ಎಂದಿದ್ದಾರೆ, ಅಲ್ಲದೆ ಪ್ರಸ್ತುತ ಸ್ಥಿತಿಗತಿಗಳನ್ನು ಗಮನಿಸಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.

ರೆಪೋ ದರ ಕಡಿತಗೊಳಿಸಿದ ಆರ್‌ಬಿಐ, ಬ್ಯಾಂಕ್ ಸಾಲಗಾರರಿಗೆ  ರಿಲೀಫ್

ಕಚ್ಛಾತೈಲ ಬೆಲೆಯು ಕಡಿಮೆಯಾಗಿರುವುದು ನಮಗೆ ಅನುಕೂಲವಾಗಿದೆ. ಆರ್ಥಿಕ ಸ್ಥಿರತೆ ಕಾಪಾಡಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಆರ್‌ಬಿಐ ಸಣ್ಣ ಉದ್ದಿಮೆಗಳ ನಷ್ಟದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ರೆಪೋ ದರದಲ್ಲಿ ಇಳಿಕೆಯ ಜೊತೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಒಂದು ವರ್ಷದ ಮಟ್ಟಿಗೆ ಸಿಆರ್‌ಆರ್ 3 ಪರ್ಸೆಂಟ್‌ನಷ್ಟು ಕಡಿತಗೊಳಿಸಲಾಗಿದೆ. ಜೊತೆಗೆ ರಿವರ್ಸ್ ರೆಪೋ ದರವನ್ನು 90 ಬೇಸಿಸ್ ಪಾಯಿಂಟ್‌ ಕಡಿಮೆ ಮಾಡಿದೆ

ರೆಪೋ ದರ ಕಡಿತಗೊಳಿಸಿರುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವವರಿಗೆ ಅನುಕೂಲವಾಗಲಿದೆ. ರೆಪೋ ದರ ಇಳಿಕೆಯಿಂದ ಬಡ್ಡಿ ದರವೂ ಕೂಡ ಇಳಿಕೆಯಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+