For Quick Alerts
ALLOW NOTIFICATIONS  
For Daily Alerts

RBIನಿಂದ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಇಳಿಕೆ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದ್ದಾರೆ. ರೆಪೋ ದರವನ್ನು (ವಾಣಿಜ್ಯ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪಡೆದ ಸಾಲಕ್ಕೆ ನೀಡುವ ಬಡ್ಡಿ ದರ ನಿರ್ಧಾರ ಆಗುವುದು ರೆಪೋ ದರದ ಮೇಲೆ) 40 ಬೇಸಿಸ್ ಪಾಯಿಂಟ್ ಕಡಿತ ಮಾಡಿದ್ದು, 4.4 ಪರ್ಸೆಂಟ್ ನಿಂದ 4 ಪರ್ಸೆಂಟ್ ಗೆ ಇಳಿಕೆ ಮಾಡಲಾಗಿದೆ.

ಇನ್ನು ರಿವರ್ಸ್ ರೆಪೋ ದರವನ್ನು (ವಾಣಿಜ್ಯ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಪಡೆದ ಮೊತ್ತಕ್ಕೆ ನೀಡುವ ಬಡ್ಡಿ) 3.35 ಪರ್ಸೆಂಟ್ ಗೆ ಇಳಿಸಲಾಗಿದೆ. ಸತತವಾಗಿ ರೆಪೋ ಹಾಗೂ ರಿವರ್ಸ್ ರೆಪೋ ದರ ಇಳಿಕೆ ಮಾಡುತ್ತಿರುವುದರಿಂದ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಆಗುತ್ತದೆ.

RBIನಿಂದ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಇಳಿಕೆ

ಅದೇ ರೀತಿ ಗ್ರಾಹಕರು ಬ್ಯಾಂಕ್ ಗಳಲ್ಲಿ ಇಡುವ ಡೆಪಾಸಿಟ್ ಮೇಲಿನ ಬಡ್ಡಿ ದರ ಕೂಡ ಕಡಿಮೆ ಆಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ನಗದು ಚಲಾವಣೆ ಹೆಚ್ಚಾಗಬೇಕು ಎಂಬ ಪ್ರಯತ್ನದ ಭಾಗವಾಗಿ ಬಡ್ಡಿ ದರವನ್ನು ಇಳಿಕೆ ಮಾಡಲಾಗುತ್ತಿದೆ. ಇದರಿಂದ ಸಾಲಕ್ಕೆ ಕಟ್ಟುವ ಇಎಂಐ ಕಡಿಮೆ ಆಗುತ್ತದೆ.

English summary

RBI Reduced Repo Rate By 40 Basis Point

RBI governor Shakthikanth Das Friday announced Repo rate cut by 40 basis point. By this interest on Bank loan will become cheaper.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X