ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಹೊಸ ಯೋಜನೆಯನ್ನು ಆರಂಭಿಸಲು ಮುಂದಾಗಿದೆ. ಆರ್‌ಬಿಐ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮೆಷಿನ್ ಅನ್ನು ಆರಂಭ ಮಾಡುವುದಾಗಿ ಬುಧವಾರ ಘೋಷಣೆ ಮಾಡಿದೆ. ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್ನಲ್ಲಿ ಫೋನ್ಪೇ ಮೂಲಕ ಪಾವತಿಗೆ ಅವಕಾಶ ಕಲ್ಪಿಸಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಬಹುದು.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತನ್ನ ಮಾನೆಟರಿ ಪಾಲಿಸಿ ಕಮೀಟಿ ಸಭೆಯ ಬಳಿಕ ಬುಧವಾರ ಈ ಘೋಷಣೆಯನ್ನು ಮಾಡಿದ್ದಾರೆ. ಕಾಯಿನ್‌ಗಳನ್ನು ವಿತರಣೆ ಮಾಡುವ ನಿಟ್ಟಿನಲ್ಲಿ ಮತ್ತು ಜನರಿಗೆ ಕಾಯಿನ್‌ಗಳು ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಆರ್‌ಬಿಐ ಈ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮೆಷಿನ್ ಅನ್ನು ಆರಂಭಿಸಿದೆ ಎಂದು ಗವರ್ನರ್ ತಿಳಿಸಿದ್ದಾರೆ.
ಹಾಗೆಯೇ ಈ ವೆಂಡಿಂಗ್ ಮೆಷಿನ್‌ನಿಂದಾಗಿ ಜನರು ಪ್ರತಿ ಬಾರಿಯೂ ಬ್ಯಾಂಕ್ ಹೋಗುವುದು, ಬ್ಯಾಂಕ್ಗಳಲ್ಲಿ ಕಾಯಬೇಕಾಗಿ ಬರುವುದು ತಪ್ಪಲಿದೆ. ಈ ವೆಂಡಿಂಗ್ ಮೆಷಿನ್‌ನಿಂದಲೇ ಜನರು ಹಣ ಪಡೆಯಬಹುದಾಗಿದೆ. ಆದರೆ ಇದು ಪ್ರಾಯೋಗಿಕ ಯೋಜನೆಯಾಗಿದೆ. ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಪ್ರಯೋಗದ ಯಶಸ್ಸಿನ ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಮೊದಲು ಎಲ್ಲಿ ಆರಂಭಿಸಲಾಗುತ್ತದೆ?
"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರಂಭದಲ್ಲಿ ಈ ಪ್ರಾಯೋಗಿಕ ಯೋಜನೆಯಾದ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮೆಷಿನ್ ಅನ್ನು 12 ನಗರಗಳಲ್ಲಿ ಆರಂಭ ಮಾಡಲಿದೆ. ಯುಪಿಐ ಮೂಲಕ ಬ್ಯಾಂಕ್ ನೋಟ್‌ಗಳನ್ನು ಪಡೆಯಲು ಇದು ಸಹಾಯಕವಾಗಲಿದೆ. ಈ ಯೋಜನೆ ಯಾವ ರೀತಿ ಇರಲಿದೆ ಎಂಬುವುದನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿವರಿಸಿದ್ದಾರೆ.
ವಿದೇಶದಿಂದ ಬಂದವರಿಗೆ ಯುಪಿಐ ವಹಿವಾಟಿಗೆ ಅವಕಾಶ
ಯುಪಿಐ ಪ್ರಸ್ತುತ ದೇಶದಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಡಿಜಿಟಲ್ ಪಾವತಿಯಲ್ಲಿ ಯುಪಿಐ ಪ್ರಸ್ತುತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಭಾರತಕ್ಕೆ ಬಂದ ಎಲ್ಲ ಪ್ರವಾಸಿಗರು ಭಾರತದಲ್ಲಿ ಇರುವ ಸಂದರ್ಭದಲ್ಲಿ ಯುಪಿಐ ವಹಿವಾಟನ್ನು ಮಾಡಲು ಅವಕಾಶ ನೀಡುವ ಬಗ್ಗೆ ನಾವು ಚಿಂತನೆ ನಡೆಸುತ್ತಿಲ್ಲ. ಆದರೆ ಈ ಯುಪಿಐ ವಹಿವಾಟು ನಡೆಸಲು ಜಿ-20 ದೇಶದ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ನಿರ್ದಿಷ್ಟ ವಿಮಾನ ನಿಲ್ದಾಣದಿಂದ ಬಂದವರಿಗೆ ಈ ಅವಕಾಶವನ್ನು ನೀಡಲಾಗುತ್ತದೆ.
ಜಿ20 ಸದಸ್ಯರ ರಾಷ್ಟ್ರಗಳ ಜನರಿಗೆ ಯುಪಿಐ ವ್ಯವಸ್ಥೆಯ ಸೌಲಭ್ಯ ದೊರೆಯುವಂತೆ ಮಾಡಲಾಗುವುದು. ಸದಸ್ಯ ರಾಷ್ಟ್ರಗಳ ಜನರು ಭಾರತಕ್ಕೆ ಬಂದಾಗ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಯುಪಿಐ ಮೂಲಕವೇ ಪಾವತಿ ಮಾಡಬಹುದು ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.


Click it and Unblock the Notifications