ಚಲಾವಣೆಯಲ್ಲಿ ಹೆಚ್ಚುತ್ತಿರುವ ಬ್ಯಾಂಕ್ ನೋಟುಗಳನ್ನು ಗಮನದಲ್ಲಿ ಇರಿಸಿಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದಿಂದ ರಾಜಸ್ಥಾನದ ಜೈಪುರದಲ್ಲಿ ಆಟೋಮೆಟೆಡ್ ಬ್ಯಾಂಕ್ ನೋಟ್ ಪ್ರೊಸೆಸಿಂಗ್ ಸೆಂಟರ್ (ABPC) ಅನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕರೆನ್ಸಿ ನೋಟುಗಳ ಸ್ವೀಕೃತಿ, ಸಂಗ್ರಹ ಹಾಗೂ ರವಾನೆಯನ್ನು ಇಲ್ಲಿಂದ ಮಾಡಲಾಗುವುದು.
ಬ್ಯಾಂಕ್ ಗಳ ಶಾಖೆಗಳು, ಕರೆನ್ಸಿ ಚೆಸ್ಟ್ ಗಳಿಂದ (ಸಿಸಿ) ಬರುವ ನೋಟುಗಳ ಪ್ರಕ್ರಿಯೆ, ಬಳಕೆ ಅಸಾಧ್ಯ ಎನಿಸುವ ಕೊಳೆಯಾದ ನೋಟುಗಳನ್ನು ABPCಯಿಂದ ಸ್ವೀಕರಿಸಿದ ನಂತರ ಆಟೋಮೆಟೆಡ್ ಬಗೆಯಲ್ಲಿ ಇಲ್ಲಿ ನಾಶಪಡಿಸಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ನಿಂದ ತಿಳಿಸಲಾಗಿದೆ.
2001ರ ಮಾರ್ಚ್ ನಿಂದ 2019ರ ಮಾರ್ಚ್ ಮಧ್ಯೆ ಚಲಾವಣೆಯಲ್ಲಿನ ಬ್ಯಾಂಕ್ ನೋಟುಗಳ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಇನ್ನು ಮುದ್ರಣಾಲಯದಿಂದ ಪೂರೈಕೆ ಆಗುವ ಬ್ಯಾಂಕ್ ನೋಟುಗಳ ಪ್ರಮಾಣ 2001ರ ಮಾರ್ಚ್ ನಿಂದ 2019ರ ಮಾರ್ಚ್ ಮಧ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇನ್ನಷ್ಟು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಮುದ್ರಣಾಲಯದಿಂದ ಬರುವ ಹೊಸ ನೋಟುಗಳನ್ನು ಆಟೋಮೆಟೆಡ್ ಆಗಿ ಸ್ವೀಕರಿಸುವುದು ಮತ್ತು ಸಂಗ್ರಹ ಮಾಡುವುದು ಈ ಆಟೋಮೆಟೆಡ್ ಬ್ಯಾಂಕ್ ನೋಟ್ ಪ್ರೊಸೆಸಿಂಗ್ ಸೆಂಟರ್ (ABPC) ಸ್ಥಾಪನೆಯ ಮುಖ್ಯ ಉದ್ದೇಶ. ಆ ನಂತರ ಆ ಹೊಸ ನೋಟುಗಳನ್ನು ಈಗಾಗಲೇ ಗುರುತಿಸಲಾದ ಕರೆನ್ಸಿ ಚೆಸ್ಟ್ ಗಳಿಗೆ ಆಟೋಮೆಟೆಡ್ ರಿಟ್ರೀವಲ್ ಹಾಗೂ ರವಾನೆ ಮಾಡಲಾಗುತ್ತದೆ.
2024- 25ರ ಸಾಲಿಗೆ ದಿನದ ಲೆಕ್ಕದಲ್ಲಿ ಸರಾಸರಿ 1,883 ಮಿಲಿಯನ್ ತುಂಡು ಹೊಸ ನೋಟುಗಳನ್ನು ಜೈಪುರದ ABPCನಲ್ಲಿ ಸಂಗ್ರಹಿಸಿಡಬಹುದಾಗಿದ್ದು, 2039- 40ರ ಹೊತ್ತಿಗೆ 27,757 ಮಿಲಿಯನ್ ತುಂಡು ನೋಟುಗಳನ್ನು ಸಂಗ್ರಹಿಸಬಹುದಾಗಿದೆ.
ಆರ್ ಬಿಐನಿಂದ ನಾಲ್ಕು ಮುದ್ರಣಾಲಯದಿಂದ ಬ್ಯಾಂಕ್ ನೋಟುಗಳನ್ನು ಹಾಗೂ ನಾಲ್ಕು ಟಂಕಸಾಲೆಯಿಂದ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಅವುಗಳನ್ನು ದೇಶದಾದ್ಯಂತ ಇರುವ ಬ್ಯಾಂಕ್ ನ 19 ವಿತರಣೆ ಕೇಂದ್ರದಲ್ಲಿ ಸ್ವೀಕರಿಸಲಾಗುತ್ತದೆ. ಅಲ್ಲಿಂದ ಮುಂದೆ ಆರ್ ಬಿಐ ಜತೆ ಒಪ್ಪಂದ ಮಾಡಿಕೊಂಡಿರುವ ಷೆಡ್ಯೂಲ್ಡ್ ಬ್ಯಾಂಕ್ ಗಳ ಮೂಲಕ 3300 ಕರೆನ್ಸಿ ಚೆಸ್ಟ್ ಗಳ ಸಹಾಯದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತದೆ.
ಕರೆನ್ಸಿ ಚೆಸ್ಟ್ ಗಳು ಸಂಗ್ರಹಾಗಾರಗಳಂತೆ ಇರುತ್ತವೆ. ಅಲ್ಲಿ ಸಂಗ್ರಹವಾದಂಥದ್ದು ವಿವಿಧ ಬ್ಯಾಂಕ್ ಶಾಖೆಗಳು/ಎಟಿಎಂ ನೆಟ್ ವರ್ಕ್ ಗಳ ಮೂಲಕ ಸಾರ್ವಜನಿಕರಿಗೆ ವಿತರಣೆ ಆಗುತ್ತದೆ.
ಇನ್ನು ಚಲಾವಣೆಗೆ ಉಪಯುಕ್ತ ಅಲ್ಲ ಎಂದು ಹಿಂಪಡೆದ ನೋಟುಗಳನ್ನು ಕರೆನ್ಸಿ ವೆರಿಫಿಕೇಷನ್ ಅಂಡ್ ಪ್ರೊಸೆಸಿಂಗ್ ಸಿಸ್ಟಮ್ ಮೂಲಕ ಪರಿಶೀಲನೆ ನಡೆಸಿ, ನಾಶಪಡಿಸಲಾಗುತ್ತದೆ.
More From GoodReturns

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಉಳಿತಾಯದ ಹಣಕ್ಕೆ ಈಗ ಕಾದಿದೆ ಅಚ್ಚರಿ!

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?



Click it and Unblock the Notifications