ದೇಶದಲ್ಲಿ ಆರ್ಥಿಕತೆ ಮಂದಗತಿಯ ನಡುವೆಯು ರಿಯಲ್ ಎಸ್ಟೇಟ್ ಬಂಡವಾಳ ಹೂಡಿಕೆಯು 9 ಪರ್ಸೆಂಟ್‌ನಷ್ಟು ಹೆಚ್ಚಳಗೊಂಡಿದ್ದು, ದೇಶಿ ರಿಯಲ್ ಎಸ್ಟೇಟ್ ವಲಯದಲ್ಲಿ 43,780 ಕೋಟಿ ರುಪಾಯಿಗೂ ಅಧಿಕ ಹೂಡಿಕೆಯಾಗಿದೆ.
ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಕೊಲಿಯರ್ಸ್ ತನ್ನ ವರದಿಯಲ್ಲಿ ಭಾರತದ ರಿಯಲ್ ಎಸ್ಟೇಟ್ ವಲಯದ ಹೂಡಿಕೆ ಬಗ್ಗೆ ಮಾಹಿತಿ ಪ್ರಕಟಿಸಿದೆ. ವಿದೇಶಗಳಿಂದ ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳವಾಗಿರುವುದರಿಂದ ರಿಯಲ್ ಎಸ್ಟೇಟ್ ವಲಯದ ಹೂಡಿಕೆ ಪ್ರಮಾಣ 9 ಪರ್ಸೆಂಟ್‌ನಷ್ಟು ಹೆಚ್ಚಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2019ರಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣವು 8.7 ಪರ್ಸೆಂಟ್ ನಷ್ಟು ಏರಿಕೆಯಾಗಿದೆ. ಈ ಮೂಲಕ 6.2 ಬಿಲಿಯನ್ ಅಮೆರಿಕನ್ ಡಾಲರ್ (43,780 ಕೋಟಿ ರುಪಾಯಿ) ಹೂಡಿಕೆ ಮಾಡಲಾಗಿದೆ. ಒಟ್ಟಾರೆ ಬಂಡವಾಳದಲ್ಲಿ ವಿದೇಶಿ ನಿಧಿಗಳ(Foreign funds) ಪಾಲು 78 ಪರ್ಸೆಂಟ್‌ನಷ್ಟಿದೆ.
2020ರಲ್ಲಿ ರಿಯಲ್ ಎಸ್ಟೇಟ್ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಲಿದೆ ಎಂದು ಅಂದಾಜಿಸಿದ್ದು, 6.5 ಬಿಲಿಯನ್ ಅಮೆರಿಕನ್ ಡಾಲರ್ (46,170 ಕೋಟಿ ರುಪಾಯಿ) ಬಂಡವಾಳ ಹರಿವು ಬರಲಿದೆ ಎಂದು ಕೊಲಿಯರ್ಸ ಅಂದಾಜಿಸಿದೆ.
ಕಚೇರಿ ನಿರ್ಮಾಣ ಕ್ಷೇತ್ರವು 46 ಪರ್ಸೆಂಟ್‌ನಷ್ಟು ಹೂಡಿಕೆಯನ್ನು ಆಕರ್ಷಿಸಿದ್ದು, ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ 20,000 ಕೋಟಿ ರುಪಾಯಿ. ಅದರಲ್ಲೂ ಮುಂಬೈ, ದೆಹಲಿ, ಬೆಂಗಳೂರು ಅತಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಆಕರ್ಷಣೆಯಾಗಿದೆ.


Click it and Unblock the Notifications