For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಮತ್ತೊಂದು ದಾಖಲೆ, ದೇಶದ ಅತಿದೊಡ್ಡ ಕಂಪನಿ ಪಟ್ಟ

|

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ಮತ್ತೊಂದು ದಾಖಲೆ ಬರೆದಿದೆ. ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಅನ್ನು ಹಿಂದಿಕ್ಕುವ ಮೂಲಕ ಭಾರತದ ನಂಬರ್ 1 ಕಂಪನಿಯಾಗಿ ಹೊರಹೊಮ್ಮಿದೆ.

ಫಾರ್ಚೂನ್ ಇಂಡಿಯಾ 500ರ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸಿದ ಕಂಪನಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ನಂಬರ್ 1 ಸ್ಥಾನ ಪಡೆದಿರುವ ರಿಲಯನ್ಸ್ ಭಾರತದ ಅತಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದ್ದು, ಐಒಸಿಯನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

ರಿಲಯನ್ಸ್ ಮತ್ತೊಂದು ದಾಖಲೆ, ದೇಶದ ಅತಿದೊಡ್ಡ ಕಂಪನಿ ಪಟ್ಟ

ರಿಲಯನ್ಸ್ ಇಂಡಸ್ಟ್ರೀಸ್ 2018-19ರಲ್ಲಿ 5.81 ಲಕ್ಷ ಕೋಟಿ ರುಪಾಯಿ ವಹಿವಾಟು ನಡೆಸಿದೆ. ಆದರೆ ಐಒಸಿಯ ವಹಿವಾಟು ವಾರ್ಷಿಕ 5.36 ಲಕ್ಷ ಕೋಟಿಯಷ್ಟಿದೆ. ಇದರ ಜೊತೆಗೆ 2019ರಲ್ಲೂ ಅತ್ಯಧಿಕ ಲಾಭಾಂಶಗಳಿಸಿದ ಕಂಪನಿ ಎಂಬ ಹೆಗ್ಗಳಿಕೆಗೂ ರಿಲಯನ್ಸ್ ಇಂಡಸ್ಟ್ರೀಸ್ ಭಾಜನವಾಗಿದೆ. ಈ ಮೂಲಕ ಕಳೆದ 10 ವರ್ಷಗಳಲ್ಲಿ ಐಒಸಿ ಹೊರತುಪಡಿಸಿ ನಂಬರ್ 1 ಸ್ಥಾನ ಪಡೆದ ಮೊದಲ ಕಂಪನಿಯಾಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, 2018-19ರ ಹಣಕಾಸಿನ ವರ್ಷದಲ್ಲಿ ಕುಸಿತ ಕಂಡಿತ್ತು. ಇದೀಗ 2ನೇ ಸ್ಥಾನ ಪಡೆದಿದ್ದು, ನಂತರದ ಸ್ಥಾನದಲ್ಲಿ ಎಸ್‌ಬಿಐ, ಟಾಟಾ ಮೋಟಾರ್ಸ್, ಭಾರತ್ ಪೆಟ್ರೋಲಿಯಂ ಲಿಮಿಟೆಡ್‌ ಸ್ಥಾನ ಪಡೆದಿವೆ.

ರಿಲಯನ್ಸ್ ದಾಖಲೆ: ಷೇರು ಮಾರುಕಟ್ಟೆ ಮೌಲ್ಯ 10,00,000 ಕೋಟಿರಿಲಯನ್ಸ್ ದಾಖಲೆ: ಷೇರು ಮಾರುಕಟ್ಟೆ ಮೌಲ್ಯ 10,00,000 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಭಾರತೀಯ ಷೇರುಮಾರುಕಟ್ಟೆಯಲ್ಲಿ ಕಳೆದ ನವೆಂಬರ್ 28ರಂದು ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಭಾರತದ ಷೇರು ಮಾರುಕಟ್ಟೆಯಲ್ಲಿ 10 ಲಕ್ಷ ಕೋಟಿ ಬಂಡವಾಳ ಮೌಲ್ಯವನ್ನು ತಲುಪಿದ ಮೊದಲ ಕಂಪನಿ ಎಂದು ದಾಖಲೆ ಬರೆದಿತ್ತು.

English summary

Reliance Industries Become Number 1 Company Of India

Reliance industries ended state owned indian oil corporation's after 10 years and become india's largest company
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X