ಅರ್ಬನ್ ಲ್ಯಾಡರ್ ನಲ್ಲಿ RRVLನಿಂದ ಶೇಕಡಾ 96ರಷ್ಟು ಷೇರು ಖರೀದಿ

ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನಿಂದ ಅರ್ಬನ್ ಲ್ಯಾಡರ್ಸ್ ಈಕ್ವಿಟಿ ಷೇರುಗಳನ್ನು ನಗದು ಮೊತ್ತ 182.12 ಕೋಟಿ ರುಪಾಯಿಗೆ ಖರೀದಿ ಮಾಡಿದೆ. ಇಷ್ಟು ಮೊತ್ತಕ್ಕೆ ಅರ್ಬನ್ ಲ್ಯಾಡರ್ ಈಕ್ವಿಟಿ ಷೇರು ಹೂಡಿಕೆ ಶೇಕಡಾ 96ರಷ್ಟಾಗುತ್ತದೆ.

ರಿಲಯನ್ಸ್ ರೀಟೇಲ್ ನಿಂದ ಅರ್ಬನ್ ಲ್ಯಾಡರ್ ನಲ್ಲಿ ಶೇಕಡಾ 100ರಷ್ಟು ಷೇರು ಖರೀದಿಗೆ ಆಯ್ಕೆ ಇದೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ನಿಂದ 75 ಕೋಟಿ ರುಪಾಯಿ ಹೂಡಿಕೆ ಮಾಡುವ ಪ್ರಸ್ತಾವ ಇರಿಸಿದೆ. ಇನ್ನಷ್ಟು ಹೂಡಿಕೆ 2023ರ ಡಿಸೆಂಬರ್ ನೊಳಗೆ ಪೂರ್ಣವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಭಾರತದಲ್ಲಿ ಫೆಬ್ರವರಿ 17, 2012ರಂದು ಅರ್ಬನ್ ಲ್ಯಾಡರ್ ಇನ್ ಕಾರ್ಪೊರೇಟ್ ಆಗಿದೆ. ಮನೆಗಳಿಗಾಗಿ ಪೀಠೋಪಕರಣ ಹಾಗೂ ಡೆಕೋರ್ ಉತ್ಪನ್ನಗಳ ವ್ಯವಹಾರವನ್ನು ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಮಾಡುತ್ತಿದೆ. ಭಾರತದಾದ್ಯಂತ ಹಲವು ನಗರಗಳಲ್ಲಿ ರೀಟೇಲ್ ಮಳಿಗೆಗಳ ಜಾಲ ಇದೆ.

ಅರ್ಬನ್ ಲ್ಯಾಡರ್ ನಲ್ಲಿ RRVLನಿಂದ ಶೇಕಡಾ 96ರಷ್ಟು ಷೇರು ಖರೀದಿ

ಅರ್ಬನ್ ಲ್ಯಾಡರ್ ಆಡಿಟೆಡ್ ವಹಿವಾಟು 2019, 2018 ಹಾಗೂ 2017ರಲ್ಲಿ ಕ್ರಮವಾಗಿ 434 ಕೋಟಿ ರು., 151.22 ಕೋಟಿ ರು. ಹಾಗೂ 50.61 ಕೋಟಿ ರು. ಇತ್ತು. ಈ ಹೂಡಿಕೆಗೆ ಸರ್ಕಾರ ಅಥವಾ ಯಾವುದೇ ನಿಯಂತ್ರಕರ ಅನುಮತಿ ಅಗತ್ಯ ಇಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+