For Quick Alerts
ALLOW NOTIFICATIONS  
For Daily Alerts

100 ವರ್ಷ ಹಳೆಯ ಸೊಸ್ಯೊ ಬಿವರೇಜ್‌ನ ಶೇ.50ರಷ್ಟು ಷೇರು ಸ್ವಾಧೀನಕ್ಕೆ ರಿಲಯನ್ಸ್ ಸಜ್ಜು

|

ಸುಮಾರು 100 ವರ್ಷ ಹಳೆಯದಾದ ಸೊಸ್ಯೊ ಹಜೂರಿ ಬಿವರೇಜಸ್ ಪ್ರೈವೇಟ್ ಲಿಮಿಟೆಡ್‌ನ ಶೇ 50ರಷ್ಟು ಈಕ್ವಿಟಿ ಪಾಲನ್ನು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಖರೀದಿ ಮಾಡುವುದಾಗಿ ರಿಲಯನ್ಸ್ ಘೋಷಣೆ ಮಾಡಿದೆ.

ಗುಜರಾತ್‌ನಲ್ಲಿ ಪ್ರಧಾನ ಕಚೇರಿ ಇರುವ ಸೊಸ್ಯೊ ಹಜೂರಿ ಬಿವರೇಜಸ್ ಪ್ರೈವೇಟ್ ಲಿಮಿಟೆಡ್‌ 'ಸೊಸ್ಯೊ' ಅಡಿಯಲ್ಲಿ ಪಾನೀಯ ವ್ಯಾಪಾರ ಹೊಂದಿದೆ ಮತ್ತು ನಿರ್ವಹಿಸುತ್ತದೆ. ಈ ಸಂಸ್ಥೆಯ ಶೇಕಡ 50ರಷ್ಟು ಪಾಲನ್ನು ರಿಲಯನ್ಸ್ ಖರೀದಿ ಮಾಡಿದರೆ ಬಾಕಿ ಪಾಲನ್ನು ಹಜೂರಿ ಕುಟುಂಬವು ಹೊಂದಿರುತ್ತದೆ.

ಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳ

ಈಗಾಗಲೇ ರಿಲಯನ್ಸ್ ಹಲವಾರು ಸಂಸ್ಥೆಗಳ ಷೇರನ್ನು ಖರೀದಿ ಮಾಡಿದೆ. ಮೆಟ್ರೋ ಎಜಿ'ಸ್ ಇಂಡಿಯಾದ ಷೇರನ್ನು ಕೂಡಾ ಖರೀದಿ ಮಾಡಲಿದೆ. ಇನ್ನು ಯುಎಸ್ ಮೂಲದ ಎಕ್ಸಿನ್ ಟೆಕ್ನಾಲಜೀಸ್‌ನಲ್ಲಿ ಶೇಕಡ 23ರಷ್ಟು ಪಾಲನ್ನು ಖರೀದಿ ಮಾಡಿದೆ. ಹೀಗೆಯೇ ಹಲವಾರು ಸಂಸ್ಥೆಗಳಲ್ಲಿ ಷೇರನ್ನು ರಿಲಯನ್ಸ್ ತನ್ನದಾಗಿಸಿದೆ. ಸೊಸ್ಯೊ ಹಜೂರಿ ಬಿವರೇಜಸ್ ಬಗ್ಗೆ ನಾವು ತಿಳಿಯೋಣ ಮುಂದೆ ಓದಿ..

 ಸೊಸ್ಯೊ ಹಜೂರಿ ಬಿವರೇಜಸ್ ಬಗ್ಗೆ ಮಾಹಿತಿ

ಸೊಸ್ಯೊ ಹಜೂರಿ ಬಿವರೇಜಸ್ ಬಗ್ಗೆ ಮಾಹಿತಿ

ಸೊಸ್ಯೊ ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ಸ್ (CSD) ಮತ್ತು ಜ್ಯೂಸ್‌ಗಳಲ್ಲಿ ಸುಮಾರು 100 ವರ್ಷಗಳ ಪರಂಪರೆಯನ್ನು ಹೊಂದಿರುವ ಭಾರತೀಯ ಬ್ರ್ಯಾಂಡ್ ಆಗಿದೆ. 1923ರಲ್ಲಿ ಅಬ್ಬಾಸ್ ಅಬ್ದುಲ್ ರಹೀಮ್ ಹಜೂರಿ ಸ್ಥಾಪಿಸಿದ ಕಂಪನಿಯು ದೇಶೀಯ ತಂಪು ಪಾನೀಯಗಳ ಮಾರುಕಟ್ಟೆಯಲ್ಲಿನ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಅಬ್ಬಾಸ್ ಹಜೂರಿ ಮತ್ತು ಅವರ ಮಗ ಅಲಿ ಅಸ್ಗರ್ ಹಜೂರಿ ನಿರ್ವಹಿಸುವ ಎಸ್ಎಚ್‌ಬಿಪಿಎಲ್ ಸೊಸ್ಯೊ, ಕಾಶ್ಮೀರಾ, ಲೆಮಿ, ಜಿನ್ಲಿಮ್, ರನ್ನರ್, ಓಪನರ್, ಹಜೂರಿ ಸೋಡಾ ಮತ್ತು ಸೇಯು ಸೇರಿದಂತೆ ಹಲವಾರು ಪಾನೀಯ ಬ್ರಾಂಡ್‌ಗಳನ್ನು ಹೊಂದಿದೆ. 100 ಬಗ್ಗೆಯ ವಿವಿಧ ರುಚಿಯ ಪಾನೀಯಗಳನ್ನು ಹೊಂದಿದೆ.

 ಇಶಾ ಅಂಬಾನಿ ಹೇಳುವುದೇನು?

ಇಶಾ ಅಂಬಾನಿ ಹೇಳುವುದೇನು?

ಈ ಹೂಡಿಕೆ ಕುರಿತು ಮಾತನಾಡಿದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ, "ಈ ಹೂಡಿಕೆಯು ಸ್ಥಳೀಯ ಪರಂಪರೆಯ ಬ್ರ್ಯಾಂಡ್‌ಗಳನ್ನು ಸಶಕ್ತಗೊಳಿಸುವ ಮತ್ತು ಅವುಗಳಿಗೆ ಹೊಸ ಬೆಳವಣಿಗೆ ಅವಕಾಶ ನೀಡಲು ಸಹಾಯವಾಗಲಿದೆ. ಶತಮಾನದಷ್ಟು ಹಳೆಯದಾದ ಸೊಸ್ಯೊದ ಪಾರಂಪರಿಕ ಪಾನೀಯ ಬ್ರ್ಯಾಂಡ್‌ಗಳ ದೇಸಿ ಶಕ್ತಿಯನ್ನು ನಮ್ಮ ಗ್ರಾಹಕ ಬ್ರ್ಯಾಂಡ್‌ಗೆ ನಾವು ಸ್ವಾಗತಿಸುತ್ತೇವೆ. ನಮ್ಮಲ್ಲಿರುವ ಗ್ರಾಹಕ ಜ್ಞಾನ ಹಾಗೂ ರೀಟೇಲ್ ವಿತರಣಾ ಸಾಮರ್ಥ್ಯಗಳು ಸೊಸ್ಯೊದ ಬೆಳವಣಿಗೆ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ಹೊಂದಿದ್ದೇವೆ," ಎಂದು ತಿಳಿಸಿದ್ದಾರೆ.

 ರಿಲಯನ್ಸ್ ಸಂಸ್ಥೆ ಹೇಳುವುದೇನು?

ರಿಲಯನ್ಸ್ ಸಂಸ್ಥೆ ಹೇಳುವುದೇನು?

ಸ್ಥಳೀಯವಾಗಿ ಭಾರತೀಯ ಗ್ರಾಹಕರನ್ನು ಸೆಳೆಯುವ ಬ್ರ್ಯಾಂಡ್‌ಗಳು ಮತ್ತು ಉತ್ತಮ ಮೌಲ್ಯವನ್ನು ನೀಡುವ ಉತ್ಪನ್ನಗಳ ಸಬಲೀಕರಣಗೊಳಿಸುವ ಗುರಿಯನ್ನು ಆರ್‌ಸಿಪಿಎಲ್ ಹೊಂದಿದೆ. ಕಂಪನಿಯು ಪ್ರಸ್ತುತ ಪಾನೀಯ ಬ್ರ್ಯಾಂಡ್ 'ಕ್ಯಾಂಪಾ' ಮತ್ತು ಪ್ಯಾಕ್ ಮಾಡಲಾದ ಗ್ರಾಹಕ ಉತ್ಪನ್ನಗಳ ಬ್ರ್ಯಾಂಡ್ 'ಇಂಡಿಪೆಂಡೆನ್ಸ್' ಅನ್ನು ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಿದೆ. ಇದರೊಂದಿಗೆ ಸೊಸ್ಯೊ ಕೂಡಾ ಸೇರ್ಪಡೆಯಾಗಲಿದೆ ಎಂದು ಸಂಸ್ಥೆಯು ಹೇಳಿದೆ.

 ಸೊಸ್ಯೊ ಹಜೂರಿ ಸಂಸ್ಥೆಯ ಮಾಲೀಕರು ಹೇಳಿದ್ದು ಹೀಗೆ

ಸೊಸ್ಯೊ ಹಜೂರಿ ಸಂಸ್ಥೆಯ ಮಾಲೀಕರು ಹೇಳಿದ್ದು ಹೀಗೆ

ಇನ್ನು ಈ ಬಗ್ಗೆ ಮಾತನಾಡಿದ ಸೊಸ್ಯೊ ಹಜೂರಿ ಬಿವರೇಜಸ್ ಅಧ್ಯಕ್ಷ ಅಬ್ಬಾಸ್ ಹಜೂರಿ, "ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್‌ಗಳೊಂದಿಗೆ ಈ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೆ ನಾವು ಸಂತೋಷಪಡುತ್ತೇವೆ. ಇದು ಸೊಸ್ಯೊ ತನ್ನ ವ್ಯಾಪ್ತಿಯನ್ನು ಶೀಘ್ರವಾಗಿ ಹೆಚ್ಚಿಸಲು ಸಹಾಯ ಮಾಡಲಿದೆ. ನಾವು ಜೊತೆಯಾಗಿ ಸೊಸ್ಯೊದ ವಿಶಿಷ್ಟ ರುಚಿಯ ಪಾನೀಯ ಉತ್ಪನ್ನಗಳನ್ನು ಭಾರತದ ಎಲ್ಲ ಗ್ರಾಹಕರಿಗೆ ತಲುಪುವಂತೆ ಮಾಡುತ್ತೇವೆ. ಪಾನೀಯಗಳಲ್ಲಿ ಸುಮಾರು 100 ವರ್ಷಗಳ ನಮ್ಮ ಪ್ರಯಾಣದಲ್ಲಿ ಇದು ನಿರ್ಣಾಯಕ ಕ್ಷಣವಾಗಿದೆ," ಎಂದಿದ್ದಾರೆ.

English summary

Reliance to acquire 50 Percent Stake in 100 Years old Sosyo Hajoori Beverages

Reliance Consumer Products Limited said it will acquire 50% equity stake in Gujarat-headquartered, 100 Years old beverages firm Sosyo Hajoori Beverages (SHBPL).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X