ಬೆಂಗಳೂರು, ಏಪ್ರಿಲ್ 7: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿನ ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರಂಭವಾಗಿರುವ ಸ್ವರ್ಣಭಾರತಿ ಸಹಕಾರ ಬ್ಯಾಂಕ್ 1.56 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ದೇಶದಲ್ಲಿ ಸಾಂಕ್ರಾಮಿಕ ಮತ್ತು ವಿವಿಧ ಕಾರಣಗಳಿಂದಾಗಿ ಎದುರಾಗಿದ್ದ ಸಾಮಾಜಿಕ-ಆರ್ಥಿಕ ಸಂಕಷ್ಟದ ನಡುವೆಯೂ 2021-2022ನೇ ಸಾಲಿನಲ್ಲಿ 1 ಕೋಟಿ 56 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಪಿ.ಎಲ್. ವೆಂಕಟರಾಮರೆಡ್ಡಿ ತಿಳಿಸಿದ್ದಾರೆ.
ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ 24ನೇ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ಡಾ. ಪಿ.ಎಲ್. ವೆಂಕಟರಾಮರೆಡ್ಡಿಯವರು ಮಾತನಾಡಿ, ಈ ಸಾಲಿನಲ್ಲಿ ಅತ್ಯುತ್ತಮ ಪ್ರಗತಿಯನ್ನು ಬ್ಯಾಂಕ್ ಸಾಧಿಸಿದೆ. ಕಳೆದ ಸಾಲಿನಲ್ಲಿ 103.63 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದ ಬ್ಯಾಂಕ್, 2021-2022ನೇ ಸಾಲಿನಲ್ಲಿ 156.77 ಲಕ್ಷ ರೂಪಾಯಿಗಳ ಲಾಭ ಗಳಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ ಎಂದು ಹೇಳಿದರು.

ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ಬೆಂಗಳೂರು ನಗರದಲ್ಲಿ ಗ್ರಾಹಕರ ಸ್ನೇಹಿಯಾದ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 172.87 ಕೋಟಿ ರೂ.ಗೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ.
ನೆಟ್ ಎನ್‌ಪಿಎ ಶೇಡಕಾ 1.59ಕ್ಕೆ ಇಳಿಕೆಯಾಗಿದ್ದು, 1.56 ಕೋಟಿ ರೂ.ಗಳಷ್ಟು ಲಾಭವನ್ನು ಗಳಿಸಿದೆ. ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಬ್ಯಾಂಕು "ಎ" ಶ್ರೇಣಿಯನ್ನು ಪಡೆದು ಸಾರ್ವಜನಿಕರ ವಿಶ್ವಾಸ ಗಳಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ತಿಬ್ಬೇಗೌಡ, ಮಾಜಿ ಅಧ್ಯಕ್ಷ ಟಿ.ಎನ್. ಚೌಡಪ್ಪನವರು, ನಿರ್ದೇಶಕರಾದ ಕೆ. ನರಸಿಂಹ ಮೂರ್ತಿ, ಟಿ.ಸತೀಶ್ ಬಾಬು, ಆರ್.ಹರೀಶ್, ಡಾ.ಲತಾ ನಾರಾಯಣ್, ಕೆ. ನಾರಾಯಣಸ್ವಾಮಿ, ಬಿ. ನಾಗರಾಜ, ಜಿ.ಎಂ. ರವೀಂದ್ರ, ಡಿ.ಬಿ. ಶರತ್ ಕುಮಾರ್, ಸಿ. ವೆಂಕಟೇಶ್, ಎನ್. ನಾಗರಾಜ್, ಜೆ.ಕೆ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.


Click it and Unblock the Notifications