ಸೂಪರ್ ಸ್ಟಾರ್ ಕಿಚ್ಚ ಸುದೀಪ್, ಭಾರತದ ಅತಿದೊಡ್ಡ ಸ್ಕಿಲ್ ಗೇಮಿಂಗ್ ಪ್ಲಾಟ್‍ಫಾರಂ ರಮ್ಮಿಸರ್ಕಲ್.ಕಾಮ್‍ಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ತನ್ನ ಬ್ರಾಂಡ್ ಸಂಪರ್ಕವನ್ನು ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳಕ್ಕೆ ವಿಸ್ತರಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು, "ರಮ್ಮಿಸರ್ಕಲ್ ಜತೆ ಗುರುತಿಸಿಕೊಳ್ಳಲು ನನಗೆ ಅತೀವ ಸಂತಸವಾಗುತ್ತಿದೆ. ಏಕೆಂದರೆ ಇದು ಸವಾಲುಗಳನ್ನು ಯೋಜನಾಬದ್ಧವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ ಹಾಗೂ ಇದು ಕುತೂಹಲಕರ ಆಟವಾಗಿದೆ. ರಮ್ಮಿಸರ್ಕಲ್ ಟೀಮ್ ಜತೆ ಮುಂಬೈನಲ್ಲಿ ಈ ತಿಂಗಳ ಆರಂಭದಲ್ಲಿ ಶೂಟಿಂಗ್‍ನಲ್ಲಿ ಪಾಲ್ಗೊಂಡದ್ದು ಸಂತೋಷದಾಯಕ ಅನುಭವ" ಎಂದು ಬಣ್ಣಿಸಿದರು.
ಮಾರುಕಟ್ಟೆ ಏಜೆನ್ಸಿಯಾದ ಏಷ್ಯನ್ ಅಬ್ಸಲ್ಯೂಟ್ ಹೇಳುವಂತೆ, ಇಂಗ್ಲಿಷ್ ಭಾಷೆಯನ್ನಾಡುವ ಗೇಮರ್ ಗಳು ಶೇಕಡ 27ರಷ್ಟು ಮಾತ್ರ ಇದ್ದು, ಶೇಕಡ 73ರಷ್ಟು ಮಂದಿ ಸ್ಥಳೀಯ ಭಾಷೆಗಳನ್ನು ಮಾತನಾಡುವವರು.

"ಆನ್ಲೈನ್ ರಮ್ಮಿ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಒಂದು ಕೌಶಲ ಹಾಗೂ ಇನ್ನೊಂದು ಮನೋರಂಜನೆ. ಸುದೀಪ್ ಅವರು ಅತ್ಯದ್ಭುತ ನಟ ಹಾಗೂ ಶ್ರೇಷ್ಠ ಮನೋರಂಜಕ ವ್ಯಕ್ತಿ. ನಮ್ಮ ಆಟವನ್ನು ಪ್ರಚಾರ ಮಾಡಲು ಅವರಿಗಿಂತ ಉತ್ತಮರನ್ನು ಹುಡುಕುವುದು ಸಾಧ್ಯವೇ ಇಲ್ಲ" ಎಂದು ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಭವೀನ್ ಪಾಂಡ್ಯ, ಅಭಿಪ್ರಾಯಪಟ್ಟರು.
ಇದು ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಗೇಮಿಂಗ್ ಉದ್ಯಮದ ಭಾಗವಾಗಿದ್ದು, ನಾಸ್ಕಾಂ ವರಿದಿಯ ಪ್ರಕಾರ ಭಾರತದ ಮೊಬೈಲ್ ಗೇಮ್ಸ್ ಮಾರುಕಟ್ಟೆ $628 ಮಿಲಿಯನ್ ಬಳಕೆದಾರರನ್ನು ತಲುಪುವ ನಿರೀಕ್ಷೆ ಇದೆ ಮತ್ತು 2020ರ ವೇಳೆಗೆ ಇದರ ಮೌಲ್ಯ 110 ಕೋಟಿ ಡಾಲರ್ ಇದೆ, ಇದು 2016ರಲ್ಲಿ $290 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಭಾರತ ಡೌನ್‍ಲೋಡ್ ವಿಷಯದಲ್ಲಿ ದೊಡ್ಡದಾಗಿದೆ.


Click it and Unblock the Notifications