For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ಮತ್ತೊಮ್ಮೆ ತೀವ್ರ ಕುಸಿತ ಕಂಡ ರುಪಾಯಿ!

|

ಭಾರತೀಯ ಕರೆನ್ಸಿ ಮೌಲ್ಯವನ್ನು 82ರ ಗಡಿ ದಾಟಿದ್ದು, ಇಳಿಮುಖವಾಗುವ ಲಕ್ಷಣಗಳು ಕಂಡು ಬಂದಿಲ್ಲ. ಸೋಮವಾರ(ಅ.10) ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಮತ್ತೊಮ್ಮ್ಮೆ 39 ಪೈಸೆ ಕುಸಿತ ಕಂಡ ರುಪಾಯಿ ಸದ್ಯಕ್ಕೆ ಯುಎಸ್ ಡಾಲರ್ ಎದುರು 82.72 ನಂತೆ ವ್ಯವಹಾರ ಕಾಣುತ್ತಿದೆ.

ರುಪಾಯಿ ಅಪಮೌಲ್ಯ ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ಶುಕ್ರವಾರದಂದು ಮಾರುಕಟ್ಟೆ ಆರಂಭದಲ್ಲೇ ಕುಸಿತ ಕಂಡಿದ್ದ ರುಪಾಯಿ ಮತ್ತೆ ಮೇಲಕ್ಕೇರಿಲ್ಲ. ಯುಎಸ್ ಡಾಲರ್ ಎದುರು ರುಪಾಯಿ ಭಾರಿ ಕುಸಿತ ಕಂಡು, ಪ್ರತಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 82.30 ರು ದಾಟಿತ್ತು, ಇಂದು ಇನ್ನಷ್ಟು ಕುಸಿತ ಕಾಣುತ್ತಿದೆ.

ಹೀರೋ ಎಕ್ಸ್‌ಟ್ರೀಮ್ 160 ಆರ್ 100 ಮಿಲಿಯನ್ ಎಡಿಷನ್ ಬೈಕ್ ಬಿಡುಗಡೆಹೀರೋ ಎಕ್ಸ್‌ಟ್ರೀಮ್ 160 ಆರ್ 100 ಮಿಲಿಯನ್ ಎಡಿಷನ್ ಬೈಕ್ ಬಿಡುಗಡೆ

ಈ ನಡುವೆ ಇಂದು ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 650 ಪಾಯಿಂಟ್‌ಗಳು ಅಥವಾ 1.12% 57,541 ಪಾಯಿಂಟ್‌ಗಳಿಗೆ ಕುಸಿದಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 50 200 ಪಾಯಿಂಟ್‌ಗಳನ್ನು ಅಥವಾ 1.12% ನಷ್ಟು 17,120 ಕ್ಕೆ ಕುಸಿದಿದೆ.

ಡಾಲರ್ ಎದುರು ಮತ್ತೊಮ್ಮೆ ತೀವ್ರ ಕುಸಿತ ಕಂಡ ರುಪಾಯಿ!

ಐಟಿ ಷೇರುಗಳು, ರೂಪಾಯಿಯಲ್ಲಿ ಕೆಲವು ಲಾಭಗಳನ್ನು ಕಂಡರೂ ಕುಸಿತ ಕಾಣುತ್ತಿದೆ. ನಷ್ಟ ಅನುಭವಿಸಿದ ಷೇರುಗಳ ಪೈಕಿ ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಟಿಸಿಎಸ್ ಸೇರಿವೆ. ಎರಡನೆಯದು ಇಂದು ಪ್ರಮುಖ ಸಂಸ್ಥೆಗಳು ತ್ರೈಮಾಸಿಕ ಫಲಿತಾಂಶಗಳನ್ನು ಘೋಷಿಸಲು ಸಿದ್ಧವಾಗಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿಯಿಂದ ಕೇವಲ ಎರಡು ಷೇರುಗಳ ಲಾಭ ಕಂಡಿದ್ದು, ಕ್ರಮವಾಗಿ ಕೋಲ್ ಇಂಡಿಯಾ ಮತ್ತು ಪವರ್‌ಗ್ರಿಡ್ ಕಾರ್ಪೊರೇಷನ್ ಎಂದು ಹೆಸರಿಸಬಹುದು.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು.

ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ ನೂರರ ಗಡಿಯನ್ನು ದಾಟಿತ್ತು. ಈ ಸಮಯಕ್ಕೆ ಕುಗ್ಗಿ 97.78 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮ ತ್ತು ಡೀಸೆಲ್ ದರವನ್ನು ನೀಡುತ್ತವೆ.

ಒಪೆಕ್ ತೈಲ ಉತ್ಪಾದನೆ ಕಡಿತಕ್ಕೆ ಮುಂದಾಗಿರುವುದು, ರಷ್ಯಾ -ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿರುವುದು ಕಚ್ಚಾತೈಲ ಬೆಲೆ ಮತ್ತೊಮ್ಮೆ 100 ಪ್ರತಿ ಬ್ಯಾರೆಲ್ ದಾಟುವ ಸಾಧ್ಯತೆಯಿದೆ ಎಂದು ಸಿಆರ್ ಫೊರೆಕ್ಸ್ ತಿಳಿಸಿದೆ. ವಿವಿಧ ದೇಶಗಳ ಕರೆನ್ಸಿ ವಿನಿಮಯ ದರ ತಿಳಿಯಲು ಕ್ಲಿಕ್ ಮಾಡಿ

English summary

Rupee slides to a new low: depreciates 39 paise to 82.72, a fresh low

Rupee fell 39 paise to 82.72, a new low against the US Dollar in the early trade on Monday, October 10, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X