ಕೋವಿಡ್ 19 ಹೆಚ್ಚುತ್ತಿದೆ. ದೆಹಲಿ, ಮುಂಬೈ ಸೇರಿದಂತೆ ಇತರ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಈ ಮಧ್ಯೆ ಡಿಸೆಂಬರ್ ಮೂವತ್ತೊಂದನೇ ತಾರೀಕಿನ ತನಕ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಅಮಾನತು ಮಾಡಿ, ಬುಧವಾರ ಡಿಜಿಸಿಎಯಿಂದ ಘೋಷಿಸಲಾಗಿದೆ.
ಆದರೆ, ಡಿಜಿಸಿಎಯಿಂದ ನಿರ್ದಿಷ್ಟವಾದ ಅನುಮತಿ ದೊರೆತಿರುವ ಮಾರ್ಗದಲ್ಲಿ ಆಯ್ದ ಅಂತರರಾಷ್ಟ್ರೀಯ ವಿಮಾನ ಹಾರಾಟ ಮುಂದುವರಿಯಲಿದೆ.
"26-6-2020ರಂದು ಹೊರಡಿಸಿದ ಆದೇಶದ ಸುತ್ತೋಲೆಗೆ ಭಾಗಶಃ ಬದಲಾವಣೆ ಮಾಡಿದ್ದು, ಸಕ್ಷಮ ಪ್ರಾಧಿಕಾರವು ಸುತ್ತೋಲೆಯ ಅವಧಿಯನ್ನು ವಿಸ್ತರಣೆ ಮಾಡಿದೆ. ಭಾರತದಿಂದ ತೆರಳುವ ಹಾಗೂ ಭಾರತಕ್ಕೆ ಬರುವ ನಿಗದಿತ ವೇಳಾಪಟ್ಟಿಯ ಪ್ರಯಾಣಿಕರ ವಾಣಿಜ್ಯ ವಿಮಾನ ಸೇವೆಗಳನ್ನು ಅಮಾನತು ಮಾಡಿ, ಡಿಸೆಂಬರ್ 31, 2020ರ 23.59 ತನಕ ವಿಸ್ತರಿಸಲಾಗಿದೆ," ಎಂದು ತಿಳಿಸಲಾಗಿದೆ.

ದೇಶೀಯ ವಿಮಾನ ಸೇವೆಗಳು ದೊರೆಯುತ್ತಿದ್ದು, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಹಾರಾಟ ನಡೆಸಲಾಗುತ್ತಿದೆ. ಲಾಕ್ ಡೌನ್ ನಿರ್ಬಂಧ ತೆರವು ಮಾಡಿದ ಮೇಲೆ ನಿಧಾನಕ್ಕೆ ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಹಿಂದಿನ ಸ್ಥಿತಿಗೆ ಬರುತ್ತಿದೆ.


Click it and Unblock the Notifications