ಭಾರತದಲ್ಲಿ ಬೈಕ್- ಸ್ಕೂಟರ್ ಗಳನ್ನು ಬಾಡಿಗೆಗೆ ನೀಡುವ "ಬೌನ್ಸ್" ಈಗ ಸಬ್ ಸ್ಕ್ರಿಪ್ಷನ್ ಮತ್ತು ದಿನದ ಬಾಡಿಗೆ ಯೋಜನೆಗಳ ಜತೆಗೆ ಬಳಕೆಯಾಗಿರುವ ಸ್ಕೂಟರ್, ಬೈಕ್ ಗಳನ್ನು ತನ್ನ ವೆಬ್ ಸೈಟ್ ನಲ್ಲಿ ಮಾರಾಟ ಮಾಡಲು ಆರಂಭಿಸಿದೆ. ಈಗಾಗಲೇ ಬಳಕೆ ಆಗಿರುವ (ಸೆಕೆಂಡ್ ಹ್ಯಾಂಡ್) ಈ ದ್ವಿಚಕ್ರ ವಾಹನಗಳ ಬೆಲೆ 13,000 ರುಪಾಯಿಯಿಂದ ಶುರುವಾಗುತ್ತದೆ.
ಐದು ವರ್ಷಕ್ಕಿಂತ ಈಚಿನ ಬೈಕ್- ಸ್ಕೂಟರ್ ಗಳಿವು. ನಲವತ್ತು ಸಾವಿರ ಕಿ.ಮೀ.ಗಿಂತ ಕಡಿಮೆ ಓಡಿರುವ, ಹಳದಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಹೊಂದಿರುವ ಹೋಂಡಾ ಡಿಯೋ ಮಾರಾಟಕ್ಕಿದೆ. ಮನೆ ಬಾಗಿಲಿಗೆ ನೋಂದಣಿ ನೆರವು ಸಹ ಒದಗಿಸಲಾಗುತ್ತದೆ. ಈ ಸ್ಕೂಟರ್ ಬೆಲೆ 22 ಸಾವಿರ ರುಪಾಯಿ ನಿಗದಿ ಮಾಡಲಾಗಿದೆ.
ಎಂಜಿನ್ ಮೇಲೆ ಆರು ತಿಂಗಳ ವಾರಂಟಿ
ಈ ಸ್ಕೂಟರ್ ಗಳ ಎಂಜಿನ್ ಮೇಲೆ ಆರು ತಿಂಗಳ ವಾರಂಟಿ ಸಹ ಬೌನ್ಸ್ ನೀಡುತ್ತಿದೆ. ಈ ಬಳಕೆಯಾದ ವಾಹನಗಳ ಮೇಲೆ ಬೌನ್ಸ್ ಬ್ರ್ಯಾಂಡಿಂಗ್ ಗಳು ಯಾವುದೂ ಇಲ್ಲ. ಒಂದು ವೇಳೆ ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಹದಿನೈದು ದಿನದೊಳಗೆ ಸ್ಕೂಟರ್ ಬದಲಾಯಿಸಿಕೊಳ್ಳಬಹುದು.
ಹಾರ್ಲೆ ಡೇವಿಡ್ಸನ್ ಬೈಕ್ ಮಾರಾಟಕ್ಕೆ ಇದೆ
ಬೆಂಗಳೂರಿನವರೇ ಖರೀದಿ ಮಾಡಿದ ಉಚಿತ ಶಿಪ್ಪಿಂಗ್ ವ್ಯವಸ್ಥೆ ಇದೆ. ಡಿಯೋ ಖರೀದಿ ಮಾಡಬೇಕು ಎಂದಿರುವ ಗ್ರಾಹಕರು ಇನ್ಷೂರೆನ್ಸ್ ಗಾಗಿ 3 ಸಾವಿರ ರುಪಾಯಿ ಪಾವತಿಸಬೇಕು. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ಸಹ ಇದೆ. 57,300 ಕಿ.ಮೀ. ಓಡಿರುವ ಈ ಬೈಕ್ ಗೆ 1.50 ಲಕ್ಷ ರುಪಾಯಿಯನ್ನು ಬೌನ್ಸ್ ಕೇಳುತ್ತಿದೆ. ಇದಕ್ಕೆ ಉಚಿತ ನೋಂದಣಿ ಮಾಡಿಸಿಕೊಡುವ ಭರವಸೆ ನೀಡುತ್ತಿದ್ದು, 10 ದಿನದೊಳಗೆ ಡೆಲಿವರಿ ನೀಡುತ್ತದೆ.
ಇಎಂಐ ಆಯ್ಕೆಗಳು ಇವೆ
ಅರ್ಹತೆ ಆಧಾರದ ಮೇಲೆ ಈ ಬೈಕ್ ಹಾಗೂ ಸ್ಕೂಟರ್ ಗಳಿಗೆ ಇಎಂಐ ಆಯ್ಕೆಗಳು ಸಹ ಇವೆ. ವೈಯಕ್ತಿಕ ಖರೀದಿದಾರರು, ಕಂಪೆನಿಗಳು ಸಹ ಇವುಗಳನ್ನು ಖರೀದಿಸಬಹುದು. ಟಿವಿಎಸ್ ಸ್ಕೂಟಿ ಜೆಸ್ಟ್ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿವೆ. ಇವುಗಳನ್ನು ಖರೀದಿ ಮಾಡಿದ ಗ್ರಾಹಕರು, ಆ ನಂತರ ಬಾಡಿಗೆಗೆ ಸಹ ಬಿಡಬಹುದು. ಸಬ್ ಸ್ಕ್ರಿಪ್ಷನ್ ಗೆ ನೀಡಬಹುದು. ಈ ಮೂಲಕ ಆದಾಯ ಗಳಿಸುವ ಅವಕಾಶವೂ ಇದೆ ಎಂದು ತಿಳಿಸಲಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications