ಕೊರೊನಾ ಎಫೆಕ್ಟ್: ವಿಮಾನ ತೈಲದಲ್ಲಿ ಬೆಲೆ ಇಳಿದು, ಹಡಗುಗಳಿಗೆ ಆ ಪದಾರ್ಥಗಳೇ ಬಳಕೆ

ವಿಮಾನಗಳಿಗೆ ಬಳಸುತ್ತಾರಲ್ಲ ಆ ತೈಲ ವಿಪರೀತ ದುಬಾರಿ. ಆದರೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದರವು ಅಗ್ಗವಾಗಿದೆ. ಸಾಮಾನ್ಯವಾಗಿ ಸೀಮೆ ಎಣ್ಣೆಯನ್ನು ಪರಿಷ್ಕರಣೆ ಮಾಡಿದ ಮೇಲೆ ವಿಮಾನ ತೈಲವಾಗುತ್ತದೆ. ಅದನ್ನೇ ಮತ್ತಷ್ಟು ಕಡಿಮೆ ಪ್ರಮಾಣದ ಸಲ್ಫರ್ ತೈಲವಾಗಿ ಹಡಗುಗಳಿಗೆ ಬಳಸಲಾಗುತ್ತದೆ. ಅಂದಹಾಗೆ ವಿಮಾನ ಯಾನಕ್ಕೆ ತೈಲ ಬಳಕೆ ತುಂಬ ಕಡಿಮೆ ಆಗುತ್ತಿರುವ ಸಂದರ್ಭ ಇದು.

ಸಾಮಾನ್ಯವಾಗಿ ಬಳಸುವುದಕ್ಕಿಂತ ಹೆಚ್ಚಿನ ಡೀಸೆಲ್ ಹಾಗೂ ವ್ಯಾಕ್ಯೂಮ್ ಗ್ಯಾಸ್ ಆಯಿಲ್ ಕೂಡ ಹಡಗುಗಳಿಗೆ ಬಳಸಲಾಗುತ್ತದೆ. ಕೇವಲ ಒಂದು ವರ್ಷದ ಹಿಂದೆ ಈ ಬದಲಾವಣೆಯನ್ನು ಯೋಚಿಸುವುದಕ್ಕೆ ಕೂಡ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊರೊನಾ ಬಿಕ್ಕಟ್ಟಿನಿಂದ ವಿಮಾನ ಯಾನಕ್ಕೆ ಪೆಟ್ಟು ಬಿತ್ತು. ಇನ್ನು ಅಂತರರಾಷ್ಟ್ರೀಯ ವಿಮಾನ ಯಾನ ಒಕ್ಕೂಟ, ಇನ್ನು ನಾಲ್ಕು ವರ್ಷಗಳ ಕಾಲ ವಿಮಾನ ಯಾನ ವ್ಯವಹಾರ ಕೊರೊನಾದ ಹಿಂದಿನ ಸ್ಥಿತಿಗೆ ಮರಳುವುದು ಕಷ್ಟ ಎನ್ನುತ್ತಿದೆ.

ಬೆಲೆಯ ದೃಷ್ಟಿಯಿಂದ ಇದು ದುಬಾರಿ ಆಗಬಹುದು ಎಂಬ ಕಾರಣಕ್ಕೆ ಪ್ರೀಮಿಯಂನಿಂದ VLSFO (very-low sulfur fuel oil)ಗೆ ತರಲು ವಿಮಾನ ತೈಲದ ಕಾಂಪೊನೆಂಟ್ ಗಳನ್ನು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಿಂಗಪೂರದಲ್ಲಿ ಬೆರೆಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಯಾವಾಗ ವಿಮಾನದ ತೈಲವು ಅಗ್ಗವಾಯಿತೋ ಆಗ ಮತ್ತೆ ಆ ಬದಲಾವಣೆ ವೇಗ ಪಡೆಯಿತು ಎನ್ನುತ್ತಾರೆ.

ವಿಮಾನ ತೈಲದಲ್ಲಿ ಬೆಲೆ ಇಳಿದು, ಹಡಗುಗಳಿಗೆ ಆ ಪದಾರ್ಥಗಳೇ ಬಳಕೆ

ಆರ್ಥಿಕತೆಯು ಸಂಪೂರ್ಣ ಛಿಧ್ರವಾದ ಸ್ಥಿತಿಯಲ್ಲಿದ್ದಾಗ ನಾವು ಸಾಮಾನ್ಯವಾಗಿ ಹೆಚ್ಚು ದುಬಾರಿ ಪದಾರ್ಥಗಳನ್ನು ಒಗ್ಗೂಡಿಸಿ VLSFO ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಜನವರಿಯಲ್ಲಿ ಸಿಂಗಪೂರದಲ್ಲಿ ವಿಮಾನ ತೈಲ ದರವು $ 70 ಇದ್ದದ್ದು, ಮೇ ಆರಂಭದ ಹೊತ್ತಿಗೆ $ 20 ತಲುಪಿ, ಆ ನಂತರ $ 41ಗೆ ಚೇತರಿಕೆ ಕಂಡಿತು.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ VLSFO ದರವು 54% ಕಡಿಮೆ ದರ ಇದೆ. ವಿಮಾನ ಹಾಗೂ ರಸ್ತೆ ಸಾರಿಗೆ ತೈಲಕ್ಕೆ ಬೇಡಿಕೆ ಕಡಿಮೆ ಆಗಿದ್ದು, ಹಡಗು ತೈಲದ ಪದಾರ್ಥಗಳು ದೊರೆಯುವುದಕ್ಕೆ ಕಾರಣವಾಗಿದೆ ಎಂದು ಅಂತರರಾಷ್ಟ್ರೀಯ ಬಂಕರ್ ಇಂಡಸ್ಟ್ರಿ ಅಸೋಸಿಯೇಷನ್ ನಿರ್ದೇಶಕ ಉನ್ನಿ ಐನೆಮೊ ಹೇಳಿದ್ದಾರೆ.

ವಿಮಾನ ತೈಲ ದರವು ಕಡಿಮೆ ಆಗಿರುವುದರಿಂದ ಹಡಗು ಉದ್ಯಮಕ್ಕೆ ಬೇಕಾದ ತೈಲ ದರ ತಗ್ಗಲು ಕಾರಣವಾಗಿದೆ. ಆದರೆ ಆ ಸಮಿಶ್ರಣವು ಸಮಸ್ಯೆಗೆ ಕಾರಣವಾಗುತ್ತದೆ. ಟ್ರೇಡಿಂಗ್ ಹೌಸ್ ಗಳು ಮತ್ತು ರೀಫೈನರ್ ಗಳು ವಿವಿಧ ಬಗೆಯ ತೈಲಗಳನ್ನು ಖರೀದಿಸಿ, ಎರಡು ವಿಭಿನ್ನ ತೈಲಗಳನ್ನು ಮಿಶ್ರಣಕ್ಕಾಗಿ ಡಿಸ್ಟಿಲರಿಗಳಿ ಕಳುಹಿಸಿ, ಹಡಗುಗಳಿಗೆ ಬಳಸಲಾಗುತ್ತದೆ. ಇನ್ನು ನೇರವಾಗಿ ಸೀಮೆ ಎಣ್ಣೆ ಬಳಸಿದಲ್ಲಿ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+