For Quick Alerts
ALLOW NOTIFICATIONS  
For Daily Alerts

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ RRVLನಲ್ಲಿ ಹೆಚ್ಚುವರಿ 1,875 ಕೋಟಿ ಹೂಡಿಕೆ

|

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ಹೆಚ್ಚುವರಿಯಾಗಿ 1,875 ಕೋಟಿ ರುಪಾಯಿ ಹೂಡಿಕೆ ಆಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರದಂದು ಘೋಷಣೆ ಮಾಡಿವೆ.

ಈ ಮೂಲಕ ಸಿಲ್ವರ್ ಲೇಕ್ ಮತ್ತು ಅದರ ಸಹ ಹೂಡಿಕೆದಾರರು ರಿಲಯನ್ಸ್ ರೀಟೇಲ್ ನಲ್ಲಿ ಮಾಡುವ ಸರಾಸರಿ ಹೂಡಿಕೆ ಮೊತ್ತ 9,375 ಕೋಟಿ ರುಪಾಯಿ ಆಗುತ್ತದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 2.13% ಈಕ್ವಿಟಿ ಪಾಲು ಖರೀದಿ ಆದಂತಾಗುತ್ತದೆ. ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ.

ಸಿಲ್ವರ್ ಲೇಕ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ 100 ಕೋಟಿ USD ಹೂಡಿಕೆ ಮಾತುಕತೆಸಿಲ್ವರ್ ಲೇಕ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ 100 ಕೋಟಿ USD ಹೂಡಿಕೆ ಮಾತುಕತೆ

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಇದೆ.

ಸಿಲ್ವರ್ ಲೇಕ್ ಸಹ ಹೂಡಿಕೆದಾರರು RRVLನಲ್ಲಿ 1,875 ಕೋಟಿ ಹೂಡಿಕೆ

ಸಿಲ್ವರ್ ಲೇಕ್ ಒಟ್ಟಾರೆ ಆಸ್ತಿ ಮೌಲ್ಯವು 60 ಬಿಲಿಯನ್ ಅಮೆರಿಕನ್ ಡಾಲರ್ ದಾಟುತ್ತದೆ. ಈಗಾಗಲೇ ಏರ್ ಬಿಎನ್ ಬಿ, ಅಲಿಬಾಬ, ಆಲ್ಫಾಬೆಟ್ ನ ವೆರಿಲಿ ಮತ್ತು ವೇಯ್ಮೋ ಯೂನಿಟ್ಸ್, ಡೆಲ್ ಟೆಕ್ನಾಲಜೀಸ್, ಟ್ವಿಟ್ಟರ್ ಸೇರಿದಂತೆ ಇತರ ಜಾಗತಿಕ ಟೆಕ್ನಾಲಜಿ ಕಂಪೆನಿಗಳಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದೆ.

English summary

Silver Lake Co Investors Will Invest Additional 1875 Crore In Reliance Retail Ventures Limited

Silver lake co investors will invest additional 1875 crore rupees, announced by Reliance Industries and RRVL on Wednesday. Here is the more details about deal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X