ಅಮೆರಿಕ ಮೂಲದ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ RRVLನಲ್ಲಿ 7,500 ಕೋಟಿ ರುಪಾಯಿ (1.02 ಬಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬುಧವಾರ ಘೋಷಣೆ ಮಾಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯನ್ನು ಮುಕೇಶ್ ಅಂಬಾನಿ ಮುನ್ನಡೆಸುತ್ತಿದ್ದಾರೆ. ಈ ಹೂಡಿಕೆಯು ಆರ್ ಆರ್ ವಿಎಲ್ ಪ್ರೀ- ಮನಿ ಈಕ್ವಿಟಿ ಮೌಲ್ಯ 4.21 ಲಕ್ಷ ಕೋಟಿ ಮಾಡುತ್ತದೆ. ಸಿಲ್ವರ್ ಲೇಕ್ ಮಾಡಲಿರುವ ಹೂಡಿಕೆಗೆ ಆರ್ ಆರ್ ವಿಎಲ್ ನಲ್ಲಿ 1.75% ಈಕ್ವಿಟಿ ಷೇರಿನ ಪಾಲು ದೊರೆಯುತ್ತದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ನ ಎರಡನೇ ಅಂಗಸಂಸ್ಥೆಯಲ್ಲಿ ಸಿಲ್ವರ್ ಲೇಕ್ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ.
ಇದಕ್ಕೂ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 1.35 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು ಸಿಲ್ವರ್ ಲೇಕ್. ಅಂದ ಹಾಗೆ ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ಆರ್ ಆರ್ ವಿಎಲ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ಎಂಎಸ್ ಎಂಇ ವಲಯಕ್ಕೆ ನೆರವು ನೀಡುವ ಉದ್ದೇಶ ಕೂಡ ಸಂಸ್ಥೆಗೆ ಇದೆ.

ಸಿಲ್ವರ್ ಲೇಕ್ ಒಟ್ಟಾರೆ ಆಸ್ತಿ ಮೌಲ್ಯವು 60 ಬಿಲಿಯನ್ ಅಮೆರಿಕನ್ ಡಾಲರ್ ದಾಟುತ್ತದೆ. ಈಗಾಗಲೇ ಏರ್ ಬಿಎನ್ ಬಿ, ಅಲಿಬಾಬ, ಆಲ್ಫಾಬೆಟ್ ನ ವೆರಿಲಿ ಮತ್ತು ಮೇಯ್ಮೋ ಯೂನಿಟ್ಸ್, ಡೆಲ್ ಟೆಕ್ನಾಲಜೀಸ್, ಟ್ವಿಟ್ಟರ್ ಸೇರಿದಂತೆ ಇತರ ಜಾಗತಿಕವಾದ ಟೆಕ್ನಾಲಜಿ ಕಂಪೆನಿಗಳಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದೆ.
ಆಗಸ್ಟ್ ತಿಂಗಳಲ್ಲಿ ರಿಲಯನ್ಸ್ ನಿಂದ ಫ್ಯೂಚರ್ ಸಮೂಹದ ರೀಟೇಲ್, ಹೋಲ್ ಸೇಲ್ ಹಾಗೂ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ವ್ಯವಹಾರವನ್ನು 338 ಕೋಟಿ ಅಮೆರಿಕನ್ ಡಾಲರ್ ಗೆ ಖರೀದಿ ಮಾಡಲಾಗಿದೆ.


Click it and Unblock the Notifications