ಬಲಿತು ನಿಂತ ಬೆಳ್ಳಿ ಬೆಲೆ; ಈಗ ಕೇಜಿಗೆ 53 ಸಾವಿರ ರುಪಾಯಿಗೂ ಹೆಚ್ಚು

ಈ ವರ್ಷದಲ್ಲಿ ತುಂಬ ಒಳ್ಳೆ ರಿಟರ್ನ್ಸ್ ಕೊಟ್ಟ ಲೋಹಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದ ಬೆಳ್ಳಿ ಇದೀಗ ಚಿನ್ನವನ್ನೂ ಮೀರಿಸಿದೆ. MCXನಲ್ಲಿ ಬೆಳ್ಳಿಯ ಸೆಪ್ಟೆಂಬರ್ ತಿಂಗಳ ಕಾಂಟ್ರ್ಯಾಕ್ಟ್ 3.28% ಏರಿಕೆ ಕಂಡು, ಕೇಜಿಗೆ 53,048 ರುಪಾಯಿ ಮುಟ್ಟಿದೆ. ಕೊರೊನಾ ಕಾರಣಕ್ಕೆ ಬೆಳ್ಳಿ ಗಣಿಗಾರಿಕೆ ಮೇಲೆ ಪ್ರಭಾವ ಬೀರಿದೆ.

ಇನ್ನು ಹೂಡಿಕೆ ಕಾರಣಕ್ಕೆ, ಕೈಗಾರಿಕೆಗಳಿಗೆ ಖರೀದಿ ಮಾಡುವ ಪ್ರಮಾಣ ಹೆಚ್ಚಾಗಿರುವುದರಿಂದ ಭಾರತದಲ್ಲಿ 7 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗಿದೆ. ಸೋಲಾರ್ ಚಿಪ್ ಗಳು, ಕೇಬಲ್ ಗಳು, ರಿನೀವಬಲ್ ಎನರ್ಜಿ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಳ್ಳಿಯ ದರ ಅಟ್ಟಕ್ಕೆ ಏರಿದೆ.

ಈಗಿನಿಂದ 2030ರ ಮಧ್ಯದಲ್ಲಿ 888 ಮಿಲಿಯನ್ ಔನ್ಸ್ ಬೆಳ್ಳಿಯ ಅಗತ್ಯ ಕಂಡುಬರಬಹುದು ಎಂಬ ಒಂದು ಅಂದಾಜಿದೆ. ಇನ್ನು ಸಿಲ್ವರ್ ಇನ್ ಸ್ಟಿಟ್ಯೂಟ್ ನಿರೀಕ್ಷೆಯ ಪ್ರಕಾರ, 2009ರಿಂದ ಈಚೆಗೆ 2020ರಲ್ಲಿ ಬೆಳ್ಳಿಯ ಪೂರೈಕೆಯಲ್ಲಿ ಜಾಗತಿಕ ಮಟ್ಟದಲ್ಲೇ ಇಳಿಕೆ ಆಗಿದೆ.

ಬಲಿತು ನಿಂತ ಬೆಳ್ಳಿ ಬೆಲೆ; ಈಗ ಕೇಜಿಗೆ 53 ಸಾವಿರ ರುಪಾಯಿಗೂ ಹೆಚ್ಚು

2020ರ ದ್ವಿತೀಯಾರ್ಧದಲ್ಲಿ ಬೆಳ್ಳಿಯ ಬೆಲೆ 57 ಸಾವಿರ ರುಪಾಯಿ ಮಟ್ಟಕ್ಕೆ ಹೋಗಬಹುದು ಎಂಬ ಅಂದಾಜಿದೆ. ಒಂದು ವೇಳೆ ಕೊರೊನಾ ಅನಿಶ್ಚಿತತೆ ಹೀಗೇ ಮುಂದುವರಿದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಲೆ ಔನ್ಸ್ ಗೆ (28.34 ಗ್ರಾಮ್) 20ರಿಂದ 22 ಅಮೆರಿಕನ್ ಡಾಲರ್ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+