ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗ ಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ಶುಕ್ರವಾರದಂದು ಸಿಂಗಾಪೂರ್ ಮೂಲದ ಹೂಡಿಕೆಯ ಕಂಪೆನಿ ಜಿಐಸಿಯಿಂದ 5512.5 ಕೋಟಿ ರುಪಾಯಿಯನ್ನು ಹೂಡಿಕೆ ಮಾಡಲಿದೆ. ಆ ಮೂಲಕ 1.22% ಷೇರಿನ ಪಾಲನ್ನು ತನ್ನದಾಗಿಸಿಕೊಳ್ಳಲಿದೆ.
ಭಾರತದ ರೀಟೇಲ್ ಬದಲಾವಣೆಯ ಕಥೆಗೆ ಜಿಐಸಿ ಗ್ಲೋಬಲ್ ನೆಟ್ ವರ್ಕ್ ಮತ್ತು ಅದರ ದೀರ್ಘಾವಧಿ ಸಹಭಾಗಿತ್ವವು ಬೆಲೆ ಕಟ್ಟಲಾಗದಂಥದ್ದು. ಭಾರತದ ಸಾಮರ್ಥ್ಯಕ್ಕೆ ಹಾಗೂ ನಮ್ಮ ಸ್ಟ್ರಾಟೆಜಿಗೆ ಪ್ರಬಲವಾದ ನಿದರ್ಶನ ಇದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
ಜಿಐಸಿ ಸಿಇಒ ಲಿಮ್ ಚೌ ಕಿಯಾಟ್ ಮಾತನಾಡಿ, ರಿಲಯನ್ಸ್ ರೀಟೇಲ್ ನ ವ್ಯಾಪಕವಾದ ಪೂರೈಕೆ ಜಾಲವನ್ನು ಬಳಸಿಕೊಳ್ಳುತ್ತದೆ. ಇದರ ಜತೆ ಪ್ರಬಲವಾದ ಸಾಗಾಟ ವ್ಯವಸ್ಥೆ, ಡೇಟಾ ಮೂಲಸೌಕರ್ಯ ಕೂಡ ಇದೆ. ಇವೆಲ್ಲವೂ ಸೇರಿ ಗ್ರಾಹಕರಿಗೆ ಹಾಗೂ ಷೇರುದಾರರಿಗೆ ಮೌಲ್ಯ ನೀಡುತ್ತದೆ ಎಂದಿದ್ದಾರೆ.

ಜಾಗತಿಕ ಮಟ್ಟದ ಪರ್ಯಾಯ ಆಸ್ತಿ ಕಂಪೆನಿ ಟಿಪಿಜಿಯಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ 1837.5 ಕೋಟಿ ಹೂಡಿಕೆ ಮಾಡಲಿದೆ. ಆ ಮೂಲಕ 0.41% ಷೇರನ್ನು ತನ್ನದಾಗಿಸಿಕೊಳ್ಳಲಿದೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ಗೆ ಹರಿದುಬರುತ್ತಿರುವ ಏಳನೇ ಹೂಡಿಕೆ ಇದೆ. ಪ್ರೀ ಮನಿ ಈಕ್ವಿಟಿ ಮೌಲ್ಯವು 4.285 ಲಕ್ಷ ಕೋಟಿ ರುಪಾಯಿ ಆಗುತ್ತದೆ ಎಂದು ರಿಲಯನ್ಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಂಪೆನಿಯು ಈ ಹಿಂದೆ ರಿಲಯನ್ಸ್ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 4546.8 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿತ್ತು. ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಈ ತನಕ 7.28% ಷೇರನ್ನು ಮಾರಾಟ ಮಾಡಿ, 32,197.5 ಕೋಟಿ ರುಪಾಯಿಯನ್ನು ಸಂಗ್ರಹಿಸಲಾಗಿದೆ.


Click it and Unblock the Notifications