ಹೂಡಿಕೆದಾರರ ನೆಚ್ಚಿನ ಗೋಲ್ಡ್ ಬಾಂಡ್ ಯೋಜನೆ ಸವರನ್ ಗೋಲ್ಡ್ ಬಾಂಡ್‌ನ ನಾಲ್ಕನೇ ಚಂದಾದಾರಿಕೆ ಇಂದಿಗೆ ಅಂದರೆ ಜುಲೈ 12ಕ್ಕೆ ಮುಕ್ತಾಯಗೊಳ್ಳಲಿದೆ. ಜುಲೈ 12ರಂದು ಪ್ರಾರಂಭವಾಗಿದ್ದ ಯೋಜನೆಯ ಅಂತಿಮ ದಿನ ಇಂದು ಆಗಿದ್ದು, ಖರೀದಿಗೆ ಕೊನೆಯ ಅವಕಾಶವಿದೆ.
ಜುಲೈ 12 ರಿಂದ ಐದು ದಿನಗಳವರೆಗೆ ಚಂದಾದಾರಿಕೆಗಾಗಿ ತೆರೆಯುವ ಸವರನ್ ಗೋಲ್ಡ್ ಬಾಂಡ್ ಯೋಜನೆ 2021-22ರ ವಿತರಣಾ ದರವನ್ನು ಪ್ರತಿ ಗ್ರಾಂಗೆ, 4,807 ಎಂದು ಆರ್‌ಬಿಐ ನಿಗದಿಪಡಿಸಿತ್ತು.
10 ಗ್ರಾಂಗೆ ರಿಯಾಯಿತಿ ಸಿಗಲಿದೆ
ಆರ್‌ಬಿಐ ಸವರನ್ ಗೋಲ್ಡ್ ಬಾಂಡ್ ದರವನ್ನು ಪ್ರತಿ ಗ್ರಾಂಗೆ 4,807 ಮತ್ತು ಹತ್ತು ಗ್ರಾಂಗೆ 48070 ರೂ. ಎಂದು ಘೋಷಿಸಿದೆ. ಮತ್ತೊಂದೆಡೆ, ಚಿನ್ನದ ದರ ನಿನ್ನೆ ಹತ್ತು ಗ್ರಾಂಗೆ 48,424 ಕ್ಕೆ ಮುಚ್ಚಿದೆ. ಹೀಗಾಗಿ 10 ಗ್ರಾಂಗೆ 354 ರೂ.ಗಳ ರಿಯಾಯಿತಿ ಸಿಗುತ್ತದೆ. ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯುವುದು ಹೇಗೆ ಎಂದು ತಿಳಿಯಿರಿ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ರಿಯಾಯಿತಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ನಾಮಮಾತ್ರ ಮೌಲ್ಯಕ್ಕಿಂತ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಅರ್ಜಿಯ ವಿರುದ್ಧ ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ. ಪ್ರತಿ ಗ್ರಾಂಗೆ 50 ರೂಪಾಯಿಯಂತೆ, 10 ಗ್ರಾಂಗೆ 500 ರೂಪಾಯಿ ರಿಯಾಯಿತಿ ನೀಡಲಾಗುವುದು
ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ?
ಸವರನ್ ಗೋಲ್ಡ್ ಬಾಂಡ್‌ಗಳನ್ನು ಖರೀದಿಸಲು ನಿಮ್ಮ ಬ್ಯಾಂಕ್ ಅಥವಾ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ನೀವು ಸಂಪರ್ಕಿಸಬಹುದು. ಇದಲ್ಲದೆ, ಆಯ್ದ ಅಂಚೆ ಕಚೇರಿಗಳ ಮೂಲಕವೂ ಸವರನ್ ಗೋಲ್ಡ್ ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ ಇದನ್ನು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್ಇ) ಯಿಂದಲೂ ಖರೀದಿಸಬಹುದು.
ಸವರನ್ ಗೋಲ್ಡ್ ಬಾಂಡ್ ಶೇ. 2.5 ರಷ್ಟು ಬಡ್ಡಿ
ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಶೇಕಡಾ 2.5 ರಷ್ಟು ಬಡ್ಡಿ ಲಭ್ಯವಿದೆ. ಇದರಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕವಾಗಿ ಶೇಕಡಾ 2.5ರಷ್ಟು ಬಡ್ಡಿಯನ್ನು ಸಹ ನೀಡಲಾಗುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಸವರನ್ ಗೋಲ್ಡ್ ಬಾಂಡ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ, ಅವನಿಗೆ ಪ್ರತಿ ವರ್ಷ 2500 ರೂ. ಬಡ್ಡಿ ಸಿಗಲಿದ್ದು, 8 ವರ್ಷಗಳವರೆಗೆ ಲಭ್ಯವಿದೆ. ಇನ್ನು ಸವರನ್ ಗೋಲ್ಡ್ ಬಾಂಡ್‌ನ ಮುಕ್ತಾಯ ಅವಧಿ 8 ವರ್ಷಗಳು ಮಾತ್ರ. ಆದಾಗ್ಯೂ, ಹೂಡಿಕೆದಾರರಿಗೆ 5 ವರ್ಷಗಳ ನಂತರ ಅದನ್ನು ಮಾರಾಟ ಮಾಡುವ ಸ್ವಾತಂತ್ರ್ಯವಿದೆ.
More From GoodReturns

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications