ಸವರನ್ ಗೋಲ್ಡ್ ಬಾಂಡ್ (ಎಸ್ ಜಿಬಿ) ಸಬ್ ಸ್ಕ್ರಿಪ್ಷನ್ ಇಂದಿನಿಂದ (ಸೋಮವಾರ, ಡಿಸೆಂಬರ್ 28, 2020) ಆರಂಭವಾಗಲಿದೆ. ಮುಂದಿನ ಸಿರೀಸ್ ಸವರನ್ ಗೋಲ್ಡ್ ಬಾಂಡ್ ಗಳ ದರವನ್ನು ಗ್ರಾಮ್ ಗೆ 5000 ರುಪಾಯಿಯಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿ ಮಾಡಿದೆ. ಆನ್ ಲೈನ್ ಮೂಲಕ ಅಪ್ಲೈ ಮಾಡುವ ಹಾಗೂ ಡಿಜಿಟಲ್ ಆಗಿ ಪಾವತಿ ಮಾಡುವವರಿಗೆ 50 ರುಪಾಯಿ ರಿಯಾಯಿತಿ ದೊರೆತು, ಗ್ರಾಮ್ ಗೆ ರು. 4950 ಆಗುತ್ತದೆ.
ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಬಗ್ಗೆ ನಿಮಗೆ ಗೊತ್ತಿರಬೇಕಾದ 10 ಸಂಗತಿಗಳಿವು:
* ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2020-21, ಸಿರೀಸ್ IXರ ಸಬ್ ಸ್ಕ್ರಿಪ್ಷನ್ ಜನವರಿ 1ನೇ ತಾರೀಕಿಗೆ ಕೊನೆಯಾಗುತ್ತದೆ.
* ಬಾಂಡ್ ಸಬ್ ಸ್ಕ್ರಿಪ್ಷನ್ ಗೂ ಮುನ್ನಾ ಕಳೆದ ವಾರದ ಮೂರು ಬಿಜಿನೆಸ್ ಡೇಸ್ (ಡಿಸೆಂಬರ್ 22ರಿಂದ 24ನೇ ತಾರೀಕು) 999 ಶುದ್ಧತೆಯ ಚಿನ್ನದ ದರವನ್ನು ಗಣನೆಗೆ ತೆಗೆದುಕೊಂಡು, ಸರಳ ಸರಾಸರಿ ಮುಕ್ತಾಯ ದರದ ಆಧಾರದಲ್ಲಿ (ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ ಅಸೋಸಿಯೇಷನ್ ಲಿ.) ಬಾಂಡ್ ದರವನ್ನು ನಿಗದಿ ಮಾಡಲಾಗುತ್ತದೆ.
* ಸವರನ್ ಗೋಲ್ಡ್ ಬಾಂಡ್ 2020-21 ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಭಾರತ ಸರ್ಕಾರದ ಪರವಾಗಿ ವಿತರಣೆ ಮಾಡುತ್ತದೆ.
* ಗೋಲ್ಡ್ ಬಾಂಡ್ ಗಳ ಮೆಚ್ಯೂರಿಟಿ ಅವಧಿ ಎಂಟು ವರ್ಷಗಳಾಗಿದ್ದು, ಐದು ವರ್ಷದ ನಂತರ ಹೊರಬರಬಹುದು.

* ಗ್ರಾಮ್ ಗಳ ಗುಣಕದಲ್ಲಿ ಬಾಂಡ್ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಕನಿಷ್ಠ ಹೂಡಿಕೆ 1 ಗ್ರಾಮ್ ಆಗಿದ್ದು, ಗರಿಷ್ಠ 4 ಕೇಜಿ ತನಕ ಸಬ್ ಸ್ಕ್ರಿಪ್ಷನ್ ಅವಕಾಶ ಇದೆ.
* ಗೋಲ್ಡ್ ಬಾಂಡ್ ಗಳು ಹೂಡಿಕೆದಾರರಿಗೆ ವಾರ್ಷಿಕವಾಗಿ 2.5% ಬಡ್ಡಿ ನೀಡುತ್ತವೆ.
* ಈ ಬಾಂಡ್ ಗಳ ಸಬ್ ಸ್ಕ್ರಿಪ್ಷನ್ ವೈಯಕ್ತಿಕ, ಹಿಂದೂ ಅವಿಭಕ್ತ ಕುಟುಂಬ (ಎಚ್ ಯುಎಫ್), ಟ್ರಸ್ಟ್ ಗಳು, ವಿಶ್ವವಿದ್ಯಾಲಯಗಳು ಮತ್ತು ಚಾರಿಟಬಲ್ ಸಂಸ್ಥೆಗಳಿಗೆ ಮಾತ್ರ ಸೀಮಿತ.
* ಗೋಲ್ಡ್ ಬಾಂಡ್ ಗಳನ್ನು ಬ್ಯಾಂಕ್ ಗಳ ಮೂಲಕ (ಸಣ್ಣ ಹಣಕಾಸು ಬ್ಯಾಂಕ್ ಮತ್ತು ಪೇಮೆಂಟ್ ಬ್ಯಾಂಕ್ ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ನಿರ್ದಿಷ್ಟ ಅಂಚೆ ಕಚೇರಿಗಳು, ನೋಂದಾಯಿತ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ (ಎನ್ ಎಸ್ ಇ ಮತ್ತು ಬಿಎಸ್ ಇ) ಮಾರಲಾಗುತ್ತದೆ.
* ಚಿನ್ನದ ಗಟ್ಟಿ ಸ್ವರೂಪ ಅಲ್ಲದ್ದರಲ್ಲಿ ಹೂಡಿಕೆ ಮಾಡುವುದಕ್ಕೆ ಸವರನ್ ಗೋಲ್ಡ್ ಬಾಂಡ್ ಪರಿಣಾಮಕಾರಿ ವಿಧಾನ.
* ಫಿಸಿಕಲ್ ಗೋಲ್ಡ್ ಬೇಡಿಕೆಯನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದೊಂದಿಗೆ 2015ರ ನವೆಂಬರ್ ನಲ್ಲಿ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಆರಂಭಿಸಲಾಯಿತು.


Click it and Unblock the Notifications