ಬೆಂಗಳೂರು, ಫೆಬ್ರವರಿ 5: ಸೋಮವಾರ ಮಣಿಯಾಚಿ ರೈಲು ನಿಲ್ದಾಣದ ಬಳಿ ಚೆನ್ನೈನಿಂದ ತಿರುನೆಲ್ವೇಲಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಮೇಲೆ ಕಲ್ಲು ತೂರಾಟ ನಡೆದಿದ್ದು, ರೈಲಿನ ಕೋಚ್‌ನ ಗಾಜುಗಳು ಒಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ 9 ಬೋಗಿಗಳಿಗೆ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೈಲ್ವೇ ಮೂಲಗಳ ಪ್ರಕಾರ, ಚೆನ್ನೈನಿಂದ ಎಂದಿನಂತೆ ಹೊರಡುತ್ತಿದ್ದ ವಂದೇ ಭಾರತ್ ರೈಲು ಇಂದು ಮುಂಜಾನೆ ಮಣಿಯಾಚಿ ನಿಲ್ದಾಣವನ್ನು ದಾಟುತ್ತಿದ್ದಾಗ ಕೆಲ ದುಷ್ಕರ್ಮಿಗಳು ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ನ ಕಿಟಕಿ ಮತ್ತು ಕಿಟಕಿಯ ಗಾಜು ಎಕ್ಸಿಕ್ಯೂಟಿವ್ ಚೇರ್ ಒಡೆದಿವೆ. ಮಾಹಿತಿ ಪಡೆದ ರೈಲ್ವೆ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಚೆನ್ನೈ-ತಿರುನೆಲ್ವೇಲಿ ವಂದೇ ಭಾರತ್ ರೈಲು ನಗರಗಳ ನಡುವೆ 650 ಕಿಮೀ ದೂರವನ್ನು 7 ಗಂಟೆ 50 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ರೈಲು ತಿರುನಲ್ವೇಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 1.50ಕ್ಕೆ ಚೆನ್ನೈ ಎಗ್ಮೋರ್ ರೈಲು ನಿಲ್ದಾಣವನ್ನು ತಲುಪುತ್ತದೆ. ಮಧ್ಯಾಹ್ನ 2.50ಕ್ಕೆ ಚೆನ್ನೈ ಎಗ್ಮೋರ್‌ನಿಂದ ಹೊರಟು ಬೆಳಗ್ಗೆ 10.40ಕ್ಕೆ ತಿರುನಲ್ವೇಲಿ ತಲುಪುತ್ತದೆ. ಈ ರೈಲು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ ಮತ್ತು ತಾಂಬರಂ, ವಿಲ್ಲುಪುರಂ, ತಿರುಚ್ಚಿ, ದಿಂಡಿಗಲ್, ಮಧುರೈ ಮತ್ತು ವಿರುಧುನಗರ ಎಂಬ 6 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಕರ್ನಾಟಕದಲ್ಲೂ ಘಟನೆ:
ದಾವಣಗೆರೆ ರೈಲು ನಿಲ್ದಾಣದ ಬಳಿ ಶನಿವಾರ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದ ಘಟನೆ ಕಳೆದ ವರ್ಷ ನಡೆದಿತ್ತು. ಚೇರ್ ಕಾರ್ ಒಂದರ ಕಿಟಕಿಯ ಹೊರ ಭಾಗಕ್ಕೆ ಹಾನಿಯಾಗಿ, ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ.ಮಧ್ಯಾಹ್ನ 3.30-4ರ ನಡುವೆ ದಾವಣಗೆರೆಯಿಂದ ರೈಲು ಹೊರಟ ಸ್ವಲ್ಪ ಹೊತ್ತಿನಲ್ಲೇ ಕಲ್ಲು ತೂರಾಟ ನಡೆದಿತ್ತು. ಯಾವುದೇ ಗಾಯಗಳಾಗಿಲ್ಲ ಮತ್ತು ರೈಲು ಸೇವೆಗೆ ಯಾವುದೇ ತೊಂದರೆಯಾಗಿರಲಿಲ್ಲ.


Click it and Unblock the Notifications