ನವದೆಹಲಿ, ಅಕ್ಟೋಬರ್ 21: ಹೂಡಿಕೆದಾರರ ನೆಚ್ಚಿನ ಗೋಲ್ಡ್ ಬಾಂಡ್ ಯೋಜನೆ ಸವರನ್ ಗೋಲ್ಡ್ ಬಾಂಡ್‌ನ ಹೊಸ ಚಂದಾದಾರಿಕೆ ಅಕ್ಟೋಬರ್ 25 ರಿಂದ ಆರಂಭಗೊಳ್ಳಲಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಮುಂದುವರೆದ ಸರಣಿಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗುರುವಾರದಂದು ಪ್ರಕಟಿಸಿದೆ.
ಸವರನ್ ಗೋಲ್ಡ್ ಬಾಂಡ್ ಯೋಜನೆಯ ದರಗಳನ್ನು ರಿಸರ್ವ್ ಬ್ಯಾಂಕ್ ಇಂಡಿಯಾ (ಆರ್‌ಬಿಐ) ಪ್ರಕಟಿಸುತ್ತದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ವೆಬ್‌ಸೈಟ್‌ನಲ್ಲಿ ಕಳೆದ ವಾರ ಚಿನ್ನದ ದರದ ಆಧಾರದ ಮೇಲೆ ಆರ್‌ಬಿಐ ಸವರನ್ ಗೋಲ್ಡ್ ಬಾಂಡ್ ದರವನ್ನು ನಿಗದಿಪಡಿಸುತ್ತದೆ. ಆರ್‌ಬಿಐ ಈ ಬಾರಿ ಪ್ರತಿ ಗ್ರಾಂ ಚಿನ್ನಕ್ಕೆ 4,647 ರಿಂದ 5,000 ರೂ ಒಳಗೆ ಬೆಲೆ ನಿಗದಿಪಡಿಸುವ ಸಾಧ್ಯತೆಯಿದೆ.
ಸವರನ್ ಗೋಲ್ಡ್ ಬಾಂಡ್ 2021-22 ಸರಣಿಯನ್ನು ನಾಲ್ಕು ಕಂತುಗಳನ್ನು ಪ್ರಕಟಿಸಲಾಗುತ್ತದೆ. ಅಕ್ಟೋಬರ್ 2021(ಸರಣಿ VII ಅ.25ರಿಂದ ಆರಂಭ, ಅ.29ಕ್ಕೆ ಮುಕ್ತಾಯ), ಮಾರ್ಚ್ 2022 ಅವಧಿಯೊಳಗೆ 10 ಬಾರಿ ಹೂಡಿಕೆ ಅವಕಾಶವನ್ನು ಒದಗಿಸಲಾಗುತ್ತದೆ. ನವೆಂಬರ್ 2ರಂದು ಬಾಂಡ್ ನೀಡಿಕೆ ಮುಕ್ತಾಯವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ.
ಕನಿಷ್ಠ ಹೂಡಿಕೆಯು 1 ಗ್ರಾಂ ಆಗಿದೆ
ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯು 1 ಗ್ರಾಂ ಆಗಿದ್ದು, ಆರ್ಥಿಕ ವರ್ಷದಲ್ಲಿ ಅರ್ಹ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕೆಜಿವರೆಗೆ ಚಿನ್ನವನ್ನು ಪಡೆಯಬಹುದು. ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಹಣಕಾಸು ವರ್ಷದಲ್ಲಿ 20 ಕಿ.ಗ್ರಾಂ ವರೆಗೆ ಖರೀದಿಸಬಹುದು.
ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ?
ಸವರನ್ ಗೋಲ್ಡ್ ಬಾಂಡ್‌ಗಳನ್ನು ಖರೀದಿಸಲು ನಿಮ್ಮ ಬ್ಯಾಂಕ್ ಅಥವಾ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ(CCI)ವನ್ನು ನೀವು ಸಂಪರ್ಕಿಸಬಹುದು. ಇದಲ್ಲದೆ, ಆಯ್ದ ಅಂಚೆ ಕಚೇರಿಗಳ ಮೂಲಕವೂ ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ ಇದನ್ನು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್ಇ) ಯಿಂದಲೂ ಖರೀದಿಸಬಹುದು.
ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಬಡ್ಡಿ ದರ
ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಶೇಕಡಾ 2.5 ರಷ್ಟು ಬಡ್ಡಿ ಲಭ್ಯವಿದೆ. ಇದರಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕವಾಗಿ ಶೇಕಡಾ 2.5ರಷ್ಟು ಬಡ್ಡಿಯನ್ನು ಸಹ ನೀಡಲಾಗುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಸವರನ್ ಗೋಲ್ಡ್ ಬಾಂಡ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ, ಅವನಿಗೆ ಪ್ರತಿ ವರ್ಷ 2500 ರೂ. ಬಡ್ಡಿ ಸಿಗಲಿದ್ದು, 8 ವರ್ಷಗಳವರೆಗೆ ಲಭ್ಯವಿದೆ. ಇನ್ನು ಸವರನ್ ಗೋಲ್ಡ್ ಬಾಂಡ್‌ನ ಮುಕ್ತಾಯ ಅವಧಿ 8 ವರ್ಷಗಳು ಮಾತ್ರ. ಆದಾಗ್ಯೂ, ಹೂಡಿಕೆದಾರರಿಗೆ 5 ವರ್ಷಗಳ ನಂತರ ಅದನ್ನು ಮಾರಾಟ ಮಾಡುವ ಸ್ವಾತಂತ್ರ್ಯವಿದೆ.
ಆರ್ಥಿಕ ಉಳಿತಾಯವಾಗಿ ಪರಿವರ್ತಿಸುವ ಉದ್ದೇಶ
ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾಂಡ್‌ಗಳನ್ನು ಬ್ಯಾಂಕುಗಳ ಮೂಲಕ (ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪಾವತಿ ಬ್ಯಾಂಕ್‌ಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಆಯ್ದ ಅಂಚೆ ಕಚೇರಿಗಳು ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಿಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.
ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಮತ್ತು ಗೃಹ ಉಳಿತಾಯವನ್ನು ಚಿನ್ನದ ಖರೀದಿಗಾಗಿ ಆರ್ಥಿಕ ಉಳಿತಾಯವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಯೋಜನೆಯನ್ನು ನವೆಂಬರ್ 2015 ರಲ್ಲಿ ಆರಂಭಿಸಲಾಯಿತು.
More From GoodReturns

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications