ತಮಿಳುನಾಡು ಸರ್ಕಾರ ವಿರ್ಮಾನ ನಿಲ್ದಾಣ ನಿರ್ಮಾಣ ಕಾರ್ಯದ್ಲಲಿ ಚರುಕು ಆಗಿ ಕಾರ್ಯನಿರ್ವಹಿಸುತ್ತಿದೆ. ಈಗಗಲೇ ಹೊಸೂರಿನಲ್ಲಿ ವಿಮಾನ ನಿಲ್ದಾಣ ಕಾರ್ಯಗಳು ಪ್ರಗತಿಯಲ್ಲಿ ಇರುವ ಸಂದರ್ಭದಲ್ಲಿ ಮತ್ತೋಂದು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಹೌದು, ತಮಿಳುನಾಡು ಸರ್ಕಾರವು ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಐದು ಸ್ಥಳಗಳನ್ನು ಪರೀಶೀಲನೆಯನ್ನು ಕೂಡ ಮಾಡುತ್ತಿದೆ. ಸೂಕ್ತ ಸ್ಥಳವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ಹಣಕಾಸು ಸಚಿವ ತಂಗಮ್ ತೆನ್ನರಸು ಅವರು ಈ ಹಿಂದೆ ದಕ್ಷಿಣ ತಮಿಳುನಾಡಿನ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು ಎಂದು ಮಾಹಿತಿಯನ್ನು ತಿಳಿಸಿದ್ದರು.ಈ ಘೋಷಣೆಯ ನಂತರ, ಐದು ಸ್ಥಳಗಳನ್ನು ಗುರುತಿಸಲಾಗಿದೆ. ಗುರುತಿಸಲಾದ ಐದು ಸ್ಥಳಗಳಲ್ಲಿ ಶೀಘ್ರದಲ್ಲೇ ಮೂರನ್ನು ಆಯ್ಕೆ ಮಾಡಲಾಗುವುದು.
ಪೂರ್ವ ಕಾರ್ಯಸಾಧ್ಯತಾ ವರದಿ
ರಾಮೇಶ್ವರಂನಲ್ಲಿ ವಿಮಾನ ನಿಲ್ದಾಣ ನಿರ್ಮಾದ ಸ್ಥಳಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (Airports Authority of India) ಅಧಿಕಾರಿಗಳು ಭೇಟಿ ನೀಡಿ ಸ್ಥಳದ ಕುರಿತು ಸಾಧಕ-ಬಾಧಕಗಳ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಿದೆ. ವರದಿಯ ಆಧಾರದ ಮೇಲೆ, ಮುಂದಿನ ವರ್ಷದ ವೇಳೆಗೆ ಸರ್ಕಾರವು ಒಂದು ಸ್ಥಳವನ್ನು ನಿರ್ಧರಿಸುವ ಸಾಧ್ಯತೆಯಿದೆ ಇದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಸುಮಾರು 700 ಎಕರೆ ಭೂಮಿ ಬೇಕು
ರಾಮೇಶ್ವರಂ ವಿಮಾನ ನಿಲ್ದಾಣ ನಿರ್ಮಾಣವನ್ನು ಮಾಡಲು ಅಂದಾಜಿನ ಪ್ರಕಾರ, ಸುಮಾರು 700 ಎಕರೆ ಭೂಮಿ ಬೇಕಾಗುತ್ತದೆ. ಒಂದು ರನ್‌ವೇ ಹೊಂದಿರುವ ಮತ್ತು ಕೋಡ್ ಸಿ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ವಿಮಾನ ನಿಲ್ದಾಣವನ್ನು ನಿರ್ಮಿಸುವ ಆಲೋಚನೆ ಇದೆ ಈ ಬಗ್ಗೆ ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಕಾರ್ಯಸಾಧ್ಯತಾ ವರದಿ ಸಿದ್ಧವಾದ ಬಳಿಕ, ಆಯಾ ಪ್ರದೇಶಗಳಲ್ಲಿನ ಕಟ್ಟಡಗಳ ಎತ್ತರ ಮತ್ತು ವಿಮಾನ ಹಾರಾಟದ ಕಾರ್ಯಾಚರಣೆಗಳ ಸಾಧ್ಯತೆಯನ್ನು ಪರಿಶೀಲಿಸಲು ಅಡಚಣೆ ಮಿತಿ ಮೇಲ್ಮೈಗಳ ಸಮೀಕ್ಷೆಗಳನನ್ನು ಕೂಡ ನಡೆಸಲಾಗುತ್ತದೆ.
ದಕ್ಷಿಣ ತಮಿಳುನಾಡು ವಿಭಾಗದ ಭಾರತೀಯ ಪ್ರಯಾಣ ಏಜೆಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಎಸ್.ಪಿ. ರಾಜೇಂದ್ರನ್ ಅವರ ಪ್ರಕಾರ, ರಾಮೇಶ್ವರಂಗೆ ವರ್ಷವಿಡೀ ಪ್ರವಾಸಿಗರು ಬರುತ್ತಾರೆ. ರಾಜ್ಯ ಮಾತ್ರವಲ್ಲದೆ ಉತ್ತರ ಭಾರತದಿಂದಲೂ ಅನೇಕ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ಮಧುರೈಗೆ ವಿಮಾನದಲ್ಲಿ ಬಂದು, ಅಲ್ಲಿಂದ ಮೂರು ಗಂಟೆಗಳ ರಸ್ತೆಯ ಮೂಲಕ ರಾಮೇಶ್ವರಂ ತಲುಪುತ್ತಾರೆ ಎಂದು ಅವರು ಹೇಳಿದ್ದಾರೆ.
ರಾಮನಾಥಸ್ವಾಮಿ ದೇವಸ್ಥಾನ ಮತ್ತು ಧನುಷ್ಕೋಡಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅನೇಕ ಜನರು ವಾರಣಾಸಿಗೆ ತೆರಳಿ, ನಂತರ ರಾಮೇಶ್ವರಕ್ಕೆ ಬಂದು ತಮ್ಮ ಆಧ್ಯಾತ್ಮಿಕ ಯಾತ್ರೆಯನ್ನು ಪೂರ್ಣಗೊಳಿಸುತ್ತಾರೆ. ರಾಮೇಶ್ವರಂಗೆ ವಿಮಾನ ಸಂಪರ್ಕ ಕಲ್ಪಿಸಿದರೆ, ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
ವಿಮಾನ ನಿಲ್ದಾಣ ನಿರ್ಮಾಣವಾದರೆ, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದು ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಹತ್ತಿರದ ವಿಮಾನ ನಿಲ್ದಾಣದಿಂದ ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದ ದೀರ್ಘಾವಧಿಯಲ್ಲಿ ಹೂಡಿಕೆಗಳು ಹೆಚ್ಚಾಗಬಹುದು. ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಸಾಧ್ಯವಾಗುತ್ತದೆ.


Click it and Unblock the Notifications