ಟಾಟಾ ಗ್ರೂಪ್ ಎರಡನೇ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಬಳಿಕ ಟಾಟಾ ಗ್ರೂಪ್ ಸ್ಟಾಕ್ ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಬಿಎಸ್‌ಇಯಲ್ಲಿ ಮಧ್ಯಾಹ್ನ 2:10 ಕ್ಕೆ ಶೇಕಡ 4.19 ರಷ್ಟು ಕುಸಿತವನ್ನು ಕಂಡಿದೆ. ಷೇರುಗಳು ಕುಸಿದು 1701.10 ರೂಪಾಯಿಗೆ ತಲುಪಿದೆ.
ಕಂಪನಿಯ ತೆರಿಗೆ ಬಳಿಕದ ಲಾಭವು ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 58 ರಷ್ಟು ಕುಸಿದು 221.26 ಕೋಟಿ ರೂಪಾಯಿಗೆ ತಲುಪಿದೆ. ಇದಕ್ಕೂ ಮೊದಲು, ಟಾಟಾ ಕಮ್ಯುನಿಕೇಷನ್ಸ್ ತೆರಿಗೆಯ ನಂತರದ ಲಾಭವನ್ನು ಒಂದು ವರ್ಷದ ಹಿಂದೆ 534.26 ಕೋಟಿ ರೂಪಾಯಿ ಎಂದು ಘೋಷಿಸಲಾಗಿತ್ತು.

ನಿವ್ವಳ ಲಾಭ ಕುಸಿತವಾದರೂ ಕೂಡಾ ಟಾಟಾ ಕಮ್ಯುನಿಕೇಷನ್ಸ್ ಆದಾಯವು 4872.5 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ ಆದಾಯವು 4430.74 ಕೋಟಿ ರೂಪಾಯಿ ಆಗಿದೆ. ಆದಾಯವು ಶೇಕಡ 10 ರಷ್ಟು ಏರಿಕೆಯಾಗಿದೆ.
ಕಂಪನಿಯ ದತ್ತಾಂಶ ವ್ಯವಹಾರವು ಕಂಪನಿಯ ಆದಾಯದ ಬೆಳವಣಿಗೆಗೆ ಸಹಾಯಕವಾಗಿದೆ. ಕಂಪನಿಯ ಆದಾಯವು ಶೇಕಡ 14.1 ರಷ್ಟು ಹೆಚ್ಚಳವಾಗಿ 3,995 ಕೋಟಿ ರೂಪಾಯಿಗಳಿಗೆ ತಲುಪಿದೆ.
"ಈ ತ್ರೈಮಾಸಿಕದಲ್ಲಿ ದೃಢವಾದ ಶೇಕಡ 14 ರಷ್ಟು ಆದಾಯದ ಬೆಳವಣಿಗೆ ಕಂಡು ಬಂದಿದೆ ಎಂದು ಈ ತ್ರೈಮಾಸಿಕದಲ್ಲಿ ಘೋಷಿಸಲು ನಾವು ಸಂತೋಷಪಡುತ್ತೇವೆ. ಒಟ್ಟಾರೆಯಾಗಿ, ನಾವು ದೀರ್ಘಾವಧಿಯ ಅವಕಾಶಗಳ ಬಗ್ಗೆ ವಿಶ್ವಾಸ ಹೊಂದಿದ್ದೇವೆ. ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ," ಎಂದು
ಟಾಟಾ ಕಮ್ಯುನಿಕೇಷನ್ಸ್ ಸ್ಟಾಕ್ ರಿಟರ್ನ್
ಬಿಎಸ್‌ಇಯಲ್ಲಿ ಟಾಟಾ ಕಮ್ಯುನಿಕೇಷನ್ಸ್ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ ಪ್ರತಿ ಷೇರಿಗೆ 1,709 ರೂಪಾಯಿ ಆಗಿದೆ. ಇದರ 52 ವಾರಗಳ ಗರಿಷ್ಠ ಬೆಲೆ ಪ್ರತಿ ಷೇರಿಗೆ 1956.85 ರೂಪಾಯಿ, 52 ವಾರಗಳ ಕನಿಷ್ಠ ಮಟ್ಟ ಪ್ರತಿ ಷೇರಿಗೆ 1157.10 ರೂಪಾಯಿ ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 48,541.20 ಕೋಟಿ ರೂಪಾಯಿ ಆಗಿದೆ.
ಟಾಟಾ ಕಮ್ಯುನಿಕೇಷನ್ಸ್ ಷೇರುಗಳು ಕಳೆದ 1 ವಾರದಲ್ಲಿ ಶೇಕಡ 1.29 ರಷ್ಟು ಕುಸಿದಿದೆ. ಕಳೆದ 3 ತಿಂಗಳ ಅವಧಿಯಲ್ಲಿ ಸ್ಟಾಕ್ ಶೇಕಡ 3 ರಷ್ಟು ಕುಸಿದಿದೆ. ಕಳೆದ 1 ವರ್ಷದಲ್ಲಿ ಶೇಕಡ 10 ರಷ್ಟು ಏರಿಕೆಯಾಗಿದೆ. ಕಳೆದ 2 ವರ್ಷಗಳಲ್ಲಿ ಶೇಕಡ 6.80 ರಷ್ಟು ಗಳಿಸಿದೆ. ಕಳೆದ 3 ವರ್ಷಗಳಲ್ಲಿ, ಟಾಟಾ ಕಮ್ಯುನಿಕೇಷನ್ಸ್ ಷೇರು ಶೇಕಡ 61 ಜಿಗಿದಿದೆ.


Click it and Unblock the Notifications