4.5 ಲಕ್ಷದಷ್ಟು ಇರುವ ನಮ್ಮ ಸಿಬ್ಬಂದಿಯನ್ನು ಯಾರನ್ನೂ ಕೆಲಸದಿಂದ ತೆಗೆಯಲ್ಲ. ಆದರೆ ಈ ವರ್ಷ ಯಾವುದೇ ವೇತನ ಹೆಚ್ಚಳ ನೀಡದಿರುವುದಕ್ಕೆ ನಿರ್ಧಾರ ಮಾಡಿದ್ದೇವೆ ಎಂದು ಭಾರತದ ಪ್ರಮುಖ ಸಾಫ್ಟ್ ವೇರ್ ರಫ್ತು ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತಿಳಿಸಿದೆ. ಕೊರೊನಾದ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಕಾರಣಕ್ಕೆ ಹಲವು ಕಂಪೆನಿಗಳಲ್ಲಿ ಸಿಬ್ಬಂದಿ ಕಡಿತ, ವೇತನ ಕಡಿತ ಸೇರಿ ವಿವಿಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಇನ್ನು ಹೊಸದಾಗಿ 40 ಸಾವಿರ ಮಂದಿಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಈಗಾಗಲೇ ಆಫರ್ ನೀಡಿದ್ದು, ಆ ಮಾತಿಗೆ ಬಗ್ಗೆ ಬದ್ಧವಾಗಿದ್ದೇವೆ ಎನ್ನಲಾಗಿದೆ. ಅಂದ ಹಾಗೆ, ಕೆಲವು ಬ್ಲ್ಯೂ ಚಿಪ್ ಕಂಪೆನಿಗಳು ಹೊಸ ನೇಮಕಾತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಹೇಳಿವೆ.
ಜನವರಿ- ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಕಂಪೆನಿ ಪ್ರಕಟಿಸಿದ್ದು, ಆರೋಗ್ಯಕರವಾದ ಏರಿಕೆ ದಾಖಲಿಸಿದೆ. ಆದರೆ ಹೊಸ ಆರ್ಥಿಕ ವರ್ಷದ ಮೊದಲ ಎರಡು ತ್ರೈ ಮಾಸಿಕವು ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಬಹಳ ಕಷ್ಟವಿದೆ. ಆದಾಯವು ಇಳಿಕೆ ಆಗಬಹುದು ಎನ್ನಲಾಗಿದೆ.

"ನಮ್ಮ ಕಂಪೆನಿಯಿಂದ ನೀಡಿದ್ದ ಪ್ರತಿ ಜಾಬ್ ಆಫರ್ ನೂ ಮಾನ್ಯ ಮಾಡುತ್ತೇವೆ. ಯಾರನ್ನೂ ಉದ್ಯೋಗದಿಂದ ತೆಗೆಯುವುದಿಲ್ಲ" ಎಂದು ಟಿಸಿಎಸ್ ಸಿಇಒ ಹಾಗೂ ಎಂ.ಡಿ. ರಾಜೇಶ್ ಗೋಪಿನಾಥನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಾನವ ಸಂಪನ್ಮೂಲ ವಿಭಾಗದಿಂದ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ, ಹೊಸಬರಿಗೆ ನಲವತ್ತು ಸಾವಿರ ಜಾಬ್ ಆಫರ್ ನೀಡಿದ್ದೇವೆ. ಈ ವರ್ಷದ ಮುಂಬರುವ ದಿನಗಳಲ್ಲಿ ಅವರು ಕಂಪೆನಿಗೆ ಸೇರ್ಪಡೆಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಈ ವರ್ಷದ ಜೂನ್ ತನಕ ಕಾಲೇಜುಗಳು, ವಿಶ್ವವಿದ್ಯಾಲಯಗಳು ಇರುತ್ತವೆ. ಆ ನಂತರ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ. ಆದರೆ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಮಾಡದಿರಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications