ಉದ್ಯೋಗ ನೇಮಕಾತಿಗೆ ಲಂಚವನ್ನು ಪಡೆಯುವ ಆರೋಪದಲ್ಲಿ ಸುದ್ದಿಯಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹೊಸ ನೇಮಕಾತಿಯನ್ನು ಮಾಡುವ ನಿರ್ಧಾರವನ್ನು ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಕಂಪನಿಯು 40,000 ಕ್ಯಾಂಪಸ್ ನೇಮಕಾತಿ ಮಾಡಲಿದೆ ಎಂದು ಟಿಸಿಎಸ್ ಸಿಒಒ ಎನ್ ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.
"ನಾವು ಸಾಮಾನ್ಯವಾಗಿ 35,000 ರಿಂದ 40,000 ಜನರನ್ನು ನೇಮಿಸಿಕೊಳ್ಳುತ್ತೇವೆ. ಆ ಯೋಜನೆಗಳು ಹಾಗೇ ಇವೆ. ಯಾವುದೇ ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಮಾಡುವುದಿಲ್ಲ. ನಾವು ನಮ್ಮ ಸ್ವಂತ ಬಳಕೆಯನ್ನು ಸುಧಾರಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದೇವೆ," ಎಂದು ತಿಳಿಸಿದರು.

ಇನ್ನು ಎರಡನೇ ತ್ರೈಮಾಸಿಕ ವರದಿಯಲ್ಲಿ ಇನ್ಫೋಸಿಸ್ ಸಿಎಫ್‌ಒ ನಿಲಂಜನ್ ರಾಯ್, ಕಳೆದ ವರ್ಷ 50,000 ಫ್ರೆಶರ್‌ಗಳನ್ನು ಸೇರಿಸಲಾಗಿದೆ. ಬೇಡಿಕೆ ಹೆಚ್ಚಾಗುವವರೆಗೆ ಕ್ಯಾಂಪಸ್‌ಗಳಿಗೆ ಹೋಗುವುದಿಲ್ಲ ಎಂದು ಹೇಳಿದರು. "ವೆಚ್ಚ ಕಡಿಮೆಯಾದಾಗ ನಾವು ಕಡಿಮೆ ನೇಮಕಾತಿ ಮಾಡುತ್ತೇವೆ. ಕಳೆದ 12 ರಿಂದ 14 ತಿಂಗಳುಗಳಲ್ಲಿ, ನಾವು ಕ್ಷೀಣತೆಯನ್ನು ನೋಡಿದ್ದೇವೆ. ಅದು ಎಷ್ಟು ಕಾಲ ಮುಂದುವರಿಯುತ್ತದೆ ಎಂದು ನಮಗೆ ತಿಳಿದಿಲ್ಲ," ಎದು ತಿಳಿಸಿದರು.
ಟಿಸಿಎಸ್ ಪಿಟಿಎ ಶೇ.9, ಆದಾಯ ಶೇ. 8 ರಷ್ಟು ಏರಿಕೆ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹಣಕಾಸು ವರ್ಷ 2024ರ ಸೆಪ್ಟೆಂಬರ್ 2023 ತ್ರೈಮಾಸಿಕದ ತನ್ನ ವರದಿಯನ್ನು ಬುಧವಾರ ಘೋಷಣೆ ಮಾಡಿದೆ. ಕಂಪನಿಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 2.4 ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ನೋಡಿದಾಗ ಶೇಕಡ 8.73 ರಷ್ಟು ಏರಿಕೆಯಾಗಿದೆ.
ಸಂಸ್ಥೆಯು 11,342 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಪ್ರಕಟಿಸಿದೆ. ಸಂಸ್ಥೆಯು ಷೇರುದಾರರಿಗೆ ಕಂಪನಿಯ ಲಾಭವನ್ನು ನೀಡಲಿದೆ. ಟಿಸಿಎಸ್ ನಿವ್ವಳ ಲಾಭವು ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ 11,074 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 10,431 ಕೋಟಿ ರೂಪಾಯಿ ಆಗಿದೆ.
ಕಾರ್ಯಾಚರಣೆಗಳಿಂದ ಅದರ ಏಕೀಕೃತ ಆದಾಯವು 59,692 ಕೋಟಿ ರೂಪಾಯಿಗಳಷ್ಟಿದ್ದು, ಶೇಕಡ 7.9 ರಷ್ಟು ಬೆಳವಣಿಗೆಯನ್ನು ಗಳಿಸಿದೆ. ಇನ್ನು ಟಿಸಿಎಸ್ ತ್ರೈಮಾಸಿಕ ವರದಿ ಪ್ರಕಟಿಸುವುದಕ್ಕೂ ಮುನ್ನ ಷೇರು ಬೆಲೆ ಸುಮಾರು 19 ರೂಪಾಯಿ ಅಥವಾ ಶೇಕಡ 0.52 ರಷ್ಟು ಕುಸಿದು 3,610.20 ರೂಪಾಯಿಗೆ ಕೊನೆಗೊಂಡಿದೆ.


Click it and Unblock the Notifications