For Quick Alerts
ALLOW NOTIFICATIONS  
For Daily Alerts

ಐಸ್‌ಕ್ರೀಂ ಬಿಜಿನೆಸ್ ಆರಂಭಿಸಿದ ಹಾಲಿವುಡ್‌ನ ಸೂಪರ್‌ಸ್ಟಾರ್ 'ROCK'

|

ಹಾಲಿವುಡ್‌ನ ಸೂಪರ್‌ಸ್ಟಾರ್‌, WWE ಮಾಜಿ ಚಾಂಪಿಯನ್ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್‌ ಇದೀಗ ಸಿನಿಮಾ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅಮೆರಿಕಾ ಮೂಲದ ಐಸ್‌ಕ್ರೀಂ ಕಂಪನಿ ಸಾಲ್ಟ್‌ ಮತ್ತು ಸ್ಟ್ರಾದಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಐಸ್‌ಕ್ರೀಂ ಬಿಜಿನೆಸ್ ಶುರುಮಾಡಿದ್ದಾರೆ.

 

ಇತ್ತೀಚೆಗಷ್ಟೇ ಬಿಡುಗಡೆಗೊಂಡ ಜುಮಾಂಜಿ: ದಿ ನೆಕ್ಸ್ಟ್ ಲೆವೆಲ್‌ (Jumanji: The next level) ಚಿತ್ರದ ಯಶಸ್ಸಿನಲ್ಲಿ ಸಂಭ್ರಮಿಸುತ್ತಿರುವ ದಿ ರಾಕ್‌ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಅಮೆರಿಕಾದ ಪೋರ್ಟ್‌ಲ್ಯಾಂಡ್ ಮೂಲದ ಐಸ್‌ ಕ್ರೀಂ ಕಂಪನಿ ಸಾಲ್ಟ್‌ ಮತ್ತು ಸ್ಟ್ರಾದಲ್ಲಿ ಹೂಡಿಕೆ ಮಾಡಿದ್ದು ರಾಕ್‌ಗೆ ಬಿಜಿನೆಸ್ ಪಾರ್ಟನರ್ ಆಗಿ ಸಾಥ್ ನೀಡಿರುವುದು ಬೇರೆ ಯಾರು ಅಲ್ಲ ಆತನ ಮಾಜಿ ಪತ್ನಿ, ಚಿತ್ರ ನಿರ್ಮಾಪಕಿ ಡೇನಿ ಗ್ರೇಸಿಯಾ.

 
ಐಸ್‌ಕ್ರೀಂ ಬಿಜಿನೆಸ್ ಆರಂಭಿಸಿದ ಹಾಲಿವುಡ್‌ನ ಸೂಪರ್‌ಸ್ಟಾರ್ 'ROCK'

ಡ್ವೇನ್ ಜಾನ್ಸನ್(ರಾಕ್) ಹಾಗೂ ಡೇನಿ ಗ್ರೇಸಿಯಾ 2007ರಲ್ಲಿ ವಿವಾಹವಾಗಿ ಸುಖ ಸಂಸಾರ ನಡೆಸಿದ್ದರು. ಆದರೆ ಕೆಲವು ಭಿನ್ನಾಭಿಪ್ರಾಯದಿಂದಾಗಿ 2008ರಲ್ಲಿ ಡಿವೋರ್ಸ್ ಪಡೆದು ಬೇರ್ಪಟ್ಟರು. ಹೀಗೆ ಬೇರೆ ಆದ ಮೇಲೂ ಉತ್ತಮ ಸ್ನೇಹಿತರಾಗಿರುವ ಈ ಜೋಡಿ, 2011ರಲ್ಲಿ ಸ್ಥಾಪನೆಗೊಂಡ ಸಾಲ್ಟ್ ಮತ್ತು ಸ್ಟ್ರಾ ಕಂಪನಿಯ ಐಸ್‌ಕ್ರೀಂನ ಫ್ಯಾನ್ ಕೂಡ ಆಗಿದ್ದಾರೆ. ಇತ್ತೀಚೆಗಷ್ಟೇ ಕಂಪನಿಯು ಹೊರಡಿಸಿರುವ ಪ್ರಕಟಣೆಯಲ್ಲಿ ಡ್ವೇನ್ ಜಾನ್ಸನ್ ಹಾಗೂ ಡೇನಿ ಗ್ರೇಸಿಯಾ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

2011ರಲ್ಲಿ ಅಮೆರಿಕಾದ ಪೋರ್ಟ್‌ಲ್ಯಾಂಡ್‌ನಲ್ಲಿ ಟೈಲರ್ ಮಾಲೆಕ್ ಹಾಗೂ ಕಿಮ್ ಮಾಲೆಕ್ ಒಟ್ಟುಗೂಡಿ ಸಾಲ್ಟ್ ಮತ್ತು ಸ್ಟ್ರಾ ಕಂಪನಿಯನ್ನು ಸ್ಥಾಪಿಸಿದ್ರು. ಈ ಕಂಪನಿಗೆ ಇದೀಗ ರಾಕ್ ಹಾಗೂ ಆತನ ಮಾಜಿ ಪತ್ನಿ ಉದ್ಯಮ ಪಾಲುದಾರರಾಗಿದ್ದಾರೆ.

'ದಿ ರಾಕ್' ಎಂಬ ಬ್ರ್ಯಾಂಡ್‌ನಲ್ಲಿ ಇಯರ್‌ಫೋನ್, ಹೆಡ್‌ಸೆಟ್‌ ಹಾಗೂ ಶೂ ಪರಿಚಯಿಸಿರುವ ಸೂಪರ್‌ಸ್ಟಾರ್ ಡ್ವೇನ್ ಜಾನ್ಸನ್, ಇದೀಗ ಮತ್ತೊಂದು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. 2019ರಲ್ಲಿ ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಲಿವುಡ್‌ ನಟರಲ್ಲಿ ಡ್ವೇನ್ ಜಾನ್ಸನ್ ಮೊದಲಿಗರಾಗಿದ್ದಾರೆ.

English summary

'The Rock' Dwayne Johnson And Dany Gracia Invested Ice Cream Company

Hollywood Superstar Dwayne 'The Rock' johnson and america producer Dancy gracia invest in hip ice cream chain salt and straw
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X