ಇದೇ ಮೊದಲ ಬಾರಿಗೆ ದೇಶದ ಗಡಿಯಾಚೆಗೂ ಸೇವೆಯನ್ನು ವಿಸ್ತರಿಸಿದೆ ಭಾರತೀಯ ರೈಲ್ವೆ. ಇದು ವಿಶೇಷವಾದ ಪಾರ್ಸೆಲ್ ರೈಲಾಗಿತ್ತು. ಬಾಂಗ್ಲಾದೇಶದ ಬೇನಾಪೋಲ್ ಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಡ್ಡಿಪಲೆಂನಿಂದ ಒಣಮೆಣಸಿನಕಾಯಿ ಹೊತ್ತೊಯ್ದಿತು. ಈ ವಿಶೇಷ ಪಾರ್ಸೆಲ್ ರೈಲು 16 ವ್ಯಾನ್ ಗಳಿದ್ದವು. 384 ಟನ್ ಒಣ ಮೆಣಸಿನಕಾಯಿ ಸಾಗಿಸಲಾಯಿತು.
ಒಂದು ಟನ್ ಮೆಣಸಿನಕಾಯಿ ಸಾಗಾಟಕ್ಕೆ 4,608 ರುಪಾಯಿ ವೆಚ್ಚ ಆಗಿದೆ. ಇದನ್ನೇ ರಸ್ತೆ ಸಾರಿಗೆ ಮೂಲಕ ಸಾಗಾಟ ನಡೆಸಿದ್ದರೆ ಪ್ರತಿ ಟನ್ ಗೆ 7,000 ರುಪಾಯಿ ವೆಚ್ಚ ಬರುತ್ತಿತ್ತು. ಅದಕ್ಕೆ ಹೋಲಿಸಿದರೆ ರೈಲಿನಲ್ಲಿ ಸಾಗಾಟ ಮಾಡಿರುವುದರಿಂದ ಶೇಕಡಾ 30 ಪರ್ಸೆಂಟ್ ಗೂ ಹೆಚ್ಚು ಹಣ ಉಳಿತಾಯ ಆಗಿದೆ.

ಸಣ್ಣ ಪ್ರಮಾಣದಲ್ಲಿ ಗುಂಟೂರು ಸುತ್ತಮುತ್ತಲ ಪ್ರದೇಶದಿಂದ ರಸ್ತೆ ಮೂಲಕ ಬಾಂಗ್ಲಾದೇಶ್ ಗೆ ಸಾಗಾಟ ಆಗುವ ಈ ಮೆಣಸಿನಕಾಯಿಗಾಗಿ ರೈತರು ಹಾಗೂ ವರ್ತಕರು ಹಣ ನೀಡುತ್ತಾರೆ. ಲಾಕ್ ಡೌನ್ ಅವಧಿಯನ್ನು ಪೂರೈಕೆಗೆ ದೊಡ್ಡ ಹೊಡೆತ ಬಿದ್ದಿದೆ. ಕೊರೊನಾ ಅವಧಿಯಲ್ಲಿ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಪಾರ್ಸೆಲ್ ರೈಲುಗಳ ಓಡಾಟವನ್ನು ಹೆಚ್ಚು ಮಾಡಲು ಕ್ರಮ ಕೈಗೊಂಡಿದೆ.
ಅಗತ್ಯ ವಸ್ತುಗಳಾದ ವೈದ್ಯಕೀಯ ಸಲಕರಣೆ, ಆಹಾರ ಪದಾರ್ಥ ಇತ್ಯಾದಿಗಳನ್ನು ಶೀಘ್ರವಾಗಿ ಸಾಗಾಟ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯ್ದ ಮಾರ್ಗಗಳಲ್ಲಿ ಪಾರ್ಸೆಲ್ ರೈಲುಗಳು 4304 ಬಾರಿ ಸಂಚರಿಸಿವೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications