2020ರಲ್ಲಿ ದೇಶದ ಖಾಸಗಿ ಕಂಪನಿಗಳಲ್ಲಿ 7 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಎಂಪ್ಲಾಯ್‌ಮೆಂಟ್ ಟ್ರೆಂಡ್ ಸರ್ವೆ (MSETS) ಸಮೀಕ್ಷೆ ತಿಳಿಸಿದೆ. ಈ ಮೂಲಕ ಐಟಿ ಕಂಪನಿಗಳಲ್ಲಿ ಹೆಚ್ಚು ಉದ್ಯೋಗವಕಾಶ ಲಭ್ಯವಾಗಲಿದೆ.
ಖಾಸಗಿ ವಲಯದ ಬಹುತೇಕ ಕಂಪನಿಗಳು ಹೊಸ ನೇಮಕಾತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿವೆ ಎಂದು ಮೈಹೈರಿಂಗ್ ಡಾಟ್‌ಕಾಂ ಮತ್ತು ಸರ್ಕಾರಿ ನೌಕರಿ ಡಾಟ್ ಇನ್ಫೊ ಕಂಪನಿಗಳು ನಡೆಸಿರುವ ಎಂಪ್ಲಾಯ್‌ಮೆಟಂಟ್ ಟ್ರೆಂಡ್ ಸರ್ವೆ(MSETS)2020ರಲ್ಲಿ ತಿಳಿಸಲಾಗಿದೆ.

ಖಾಸಗಿ ವಲಯದ ಕಂಪನಿಗಳು 2020ರಲ್ಲಿ 7 ಲಕ್ಷದಷ್ಟು ಉದ್ಯೋಗವಕಾಶ ಸೃಷ್ಠಿಸಲಿದ್ದು, ಒಟ್ಟಾರೆ ವೇತನದಲ್ಲಿ 8 ಪರ್ಸೆಂಟ್ ಹೆಚ್ಚಳವಾಗಲಿದೆ ಎಂದು ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿವೆ.
''2020ರ ಹೊಸ ಕ್ಯಾಲೆಂಡರ್ ವರ್ಷದಲ್ಲಿ ಸುಮಾರು 7 ಲಕ್ಷ ಉದ್ಯೋಗ ಸೃಷ್ಠಿಯಾಗುವ ನಿರೀಕ್ಷೆಯಿದೆ. ಸ್ಟಾರ್ಟ್ ಅಪ್ ಕಂಪನಿಗಳು ಪ್ರಮುಖ ಕೊಡುಗೆದಾರರಾಗಿದ್ದು, ಹೆಚ್ಚಿನ ಉದ್ಯೋಗಗಳು ಸೃಷ್ಠಿಯಾಗುವ ನಿರೀಕ್ಷೆಯಿದೆ'' ಎಂದು ಮೈಹೈರಿಂಗ್ ಡಾಟ್‌ಕಾಂ ಮತ್ತು ಸರ್ಕಾರಿ ನೌಕರಿ ಡಾಟ್ ಇನ್ಫೊ ಸಿಇಓ ರಾಜೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು, ಮುಂಬೈ, ದೆಹಲಿ ಮತ್ತು ಎನ್‌ಸಿಆರ್, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್, ಅಹಮದಾಬಾದ್ ಮತ್ತು ಪುಣೆಯಲ್ಲಿ 5,14,900 ಉದ್ಯೋಗ ಸೃಷ್ಠಿಯಾಗಲಿದ್ದು, ಇನ್ನುಳಿದಂತೆ ಎರಡು ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಇರಲಿವೆ. ವೆಚ್ಚ ನಿಯಂತ್ರಣ ಮಾಡುವ ದೃಷ್ಠಿಯಿಂದ ಕಂಪನಿಗಳು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳತ್ತ ಮುಖಮಾಡಲಿವೆ. ಹೀಗಾಗಿ ಈ ನಗರಗಳಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಠಿಯಾಗಲಿವೆ.
ಈ ಸಮೀಕ್ಷೆಯು ದೇಶದ 42 ಪ್ರಮುಖ ನಗರಗಳಲ್ಲಿ 12 ಉದ್ಯಮ ಕ್ಷೇತ್ರಗಳಲ್ಲಿ 4,278 ಕಂಪನಿಗಳನ್ನು ಒಳಗೊಂಡಿದೆ.


Click it and Unblock the Notifications