ಹಿಂದುಳಿದ ರಾಷ್ಟ್ರಗಳಲ್ಲಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹುದೊಡ್ಡ ಸವಾಲೆಂದರೆ ಅದು ಬಡತನ. ಅದು ಕೇವಲ ಆರ್ಥಿಕ ವಿಚಾರವಾಗಿರದೆ ಮಾನವನ ಪರಿಸ್ಥಿತಿಯೂ ಆಗಿದೆ. ಬಡತನವು ನೋವು, ಹಸಿವು, ನರಳುವಿಕೆ ಮತ್ತು ಹರಾಶೆಯ ಪರಿಸ್ಥಿತಿಯಾಗಿದೆ. ಭಾರತ ಅಷ್ಟೇ ಅಲ್ಲ ಬಹುತೇಕ ರಾಷ್ಟ್ರಗಳಲ್ಲಿ ಬಡತನ ಎಂಬುದು ಒಂದು ಜ್ವಲಂತ ಸಮಸ್ಯೆಯಾಗಿದೆ.
ಬಡರಾಷ್ಟ್ರಗಳಲ್ಲಿ ಅನರಕ್ಷತೆ, ಹಸಿವು, ನೋವು, ನರಳುವಿಕೆ, ಮೂಲಭೂತ ಸೌಕರ್ಯಗಳ ಕೊರತೆ, ಅಪೌಷ್ಠಿಕತೆ ಸಾಮಾನ್ಯ ಪರಿಸ್ಥಿತಿಗಳಾಗಿವೆ. ಇಲ್ಲಿನ ಬಹುತೇಕ ಜನರು ನಿರುದ್ಯೋಗಿ ಆಗಿರುತ್ತಾರೆ. ಹಾಗಿದ್ರೆ ನೀವು ವಿಶ್ವದ ಟಾಪ್ ಶ್ರೀಮಂತ ರಾಷ್ಟ್ರಗಳ ಬಗ್ಗೆ ಇದುವರೆಗೆ ತಿಳಿದುಕೊಂಡಿರಬಹುದು. ಆದರೆ ಈ ಲೇಖನದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಜನರೇ ಹೆಚ್ಚಿರುವ ಬಡರಾಷ್ಟ್ರಗಳ ಬಗ್ಗೆ ತಿಳಿಸಲಾಗಿದೆ. ದೇಶದ ಒಟ್ಟು ಆದಾಯ ಮತ್ತು ತಲಾ ಆದಾಯ ಮೇಲೆ ಅರ್ಥಶಾಸ್ತ್ರಜ್ಞರು ಬಡರಾಷ್ಟ್ರಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಬಹುಪಾಲು ಆಫ್ರಿಕನ್ ದೇಶಗಳೇ ಆಗಿವೆ.. ಅವುಗಳ ಬಗ್ಗೆ ತಿಳಿಯಲು ಈ ಕೆಳಗಿನ ವಿವರಣೆ ಓದಿ.
1. ಬುರುಂಡಿ
ಪೂರ್ವ ಆಫ್ರಿಕಾಗೆ ಸೇರುವ ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯವಾಗಿದೆ. ಇದು ಗ್ರೇಟ್ ರಿಫ್ಟ್ ಕಣಿವೆ ಪ್ರದೇಶದಲ್ಲಿದ್ದು ಹಿಂಸಾಚಾರ ಮತ್ತು ಅಪಾರ ತೊಂದರೆಗಳಿಗೆ ಒಳಗಾದ ರಾಷ್ಟ್ರವಾಗಿದೆ ಹಾಗೂ ವ್ಯಾಪಕ ಬಡತನ ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಅಸಮರ್ಪಕ ದೇಶೀಯ ಉತ್ಪಾದನೆಯು ನಾಗರೀಕರ ಅಪೌಷ್ಠಿಕತೆಗೆ ಕಾರಣವಾಗಿದೆ.
2019ರಲ್ಲಿ ಅಂಕಿ-ಅಂಶಗಳ ಪ್ರಕಾರ ಬುರುಂಡಿಯಲ್ಲಿ 1 ಕೋಟಿ 17 ಲಕ್ಷದ 45,876 ಕೋಟಿ ಜನರಿದ್ದಾರೆ. 1962ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶದಲ್ಲಿ ಕಿತ್ತು ತಿನ್ನುವ ಬಡತನವಿದ್ದು ಬಹುತೇಕ ಜನರು ನಿರುದ್ಯೋಗಿಗಳಾಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಕೇವಲ 13.4 ಪರ್ಸೆಂಟ್ ಜನರು ನಗರದಲ್ಲಿ ವಾಸಿಸುತ್ತಿದ್ದು ಉಳಿದವರು ಹಳ್ಳಿಗಳಲ್ಲೇ ವಾಸಿಸುತ್ತಿದ್ದಾರೆ.
2. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
ನೈಸರ್ಗಿಕ ಸಂಪನ್ಮೂಲಗಳ ವಿಚಾರದಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಅಥವಾ ಮಧ್ಯ ಆಫ್ರಿಕಾದ ಗಣರಾಜ್ಯವು ಜಿಡಿಪಿ ವಿಷಯದಲ್ಲಿ 2ನೇ ಅತ್ಯಂತ ಬಡರಾಷ್ಟ್ರವಾಗಿದೆ. ಇಲ್ಲಿ ನಡೆಯುವ ಹಿಂಸಾಚಾರ ಮತ್ತು ಭ್ರಷ್ಟಾಚಾರವೇ ಈ ದೇಶದ ಬಡತನಕ್ಕೆ ಮೂಲ ಕಾರಣವಾಗಿದೆ.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ಗಡಿಯು ಉತ್ತರಕ್ಕೆ ಚಾಡ್, ಪೂರ್ವಕ್ಕೆ ದಕ್ಷಿಣ ಸುಡಾನಾ್, ಉತ್ತರಕ್ಕೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಹೊಂದಿದೆ. ಹೀಗೆ ಸುತ್ತಲೂ ಬಡರಾಷ್ಟ್ರಗಳಿಂದಲೇ ಕೂಡಿರುವ ಈ ದೇಶದಲ್ಲಿ ಜನರಿಗೆ ಸಿಗಬೇಕಾದ ಅತ್ಯಂತ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ. 2018ರಲ್ಲಿ ಅಂಕಿ-ಅಂಶಗಳ ಅಂದಾಜಿನ ಪ್ರಕಾರ ಇಲ್ಲಿ 50 ಲಕ್ಷ ಜನಸಂಖ್ಯೆಯಿದ್ದು, ಜನರು ಅನಕ್ಷರಾಗಿದ್ದು, ನಿರುದ್ಯೋಗ ತಾಂಡವಾಡುತ್ತಿದೆ.
3. ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊ
ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊ ನೈಸರ್ಗಿಕ ಸಂಪದ್ಬರಿತ ರಾಷ್ಟ್ರವಾಗಿದ್ದರೂ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಹಾಗೂ ದುರ್ಬಲ ಆಡಳಿತದಿಂದಾಗಿ ದೇಶ ಹಿಂದುಳಿದ ರಾಷ್ಟ್ರವಾಗಿಯೇ ಉಳಿದಿದೆ. ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿದ್ದರೂ ಈ ದೇಶ ಜಿಡಿಪಿ ಮಾತ್ರ ಕೆಳಗಿದೆ. ಇತ್ತೀಚಿನ ವರ್ಷಗಳಲ್ಲಂತೂ ರಾಜಕೀಯ ಅಶಾಂತಿ ವಾತಾವರಣೆ ಹೆಚ್ಚಾಗಿದೆ.
ದೇಶದಲ್ಲಿನ ಅಂತರ್ಯುದ್ಧ, ನೈಸರ್ಗಿಕ ಸಂಪನ್ಮೂಲಗಳ ಲೂಟಿ ಮತ್ತು ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆಗಳಿಂದಾಗಿ ರಾಜಕೀಯ ಪ್ರಕ್ಷುಬ್ದತೆಯನ್ನು ಎದುರಿಸುತ್ತಿದೆ. ಮಧ್ಯ ಆಫ್ರಿಕಾದಲ್ಲಿರುವ ಈ ರಾಷ್ಟ್ರದಲ್ಲಿ 9 ಕೋಟಿಗೂ ಅಧಿಕ ಜನರಿದ್ದು, ಪದೇ ಪದೇ ಸರ್ಕಾರದ ವಿರುದ್ಧ ಜನರು ತಿರುಗಿ ಬೀಳುವುದು ಸಾಮಾನ್ಯವಾಗಿಬಿಟ್ಟಿದೆ.
4. ನೈಜರ್
ನೈಜರ್ ಪಶ್ಚಿಮ ಆಫ್ರಿಕಾದ ಒಂದು ರಾಷ್ಟ್ರವಾಗಿದೆ. ನೈಜರ್ ನದಿಯು ಇಲ್ಲಿ ಹರಿದು ಹೋಗುವುದರಿಂದ ಈ ಹೆಸರನ್ನೇ ದೇಶಕ್ಕೆ ನಾಮಕರಣ ಮಾಡಲಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಕನಿಷ್ಠ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ಸುಮಾರು 2.3 ಕೋಟಿ ಜನಸಂಖ್ಯೆಯನ್ನು ಹೊಂದಿರು ನೈಜರ್ ಯುಎನ್ ಅಭಿವೃದ್ಧಿ ಕಾರ್ಯಕ್ರಮದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸಾಕಷ್ಟು ಕಡಿಮೆ ಸ್ಥಾನದಲ್ಲಿದೆ.
ಈ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಂತರಿಕ ಸಮಸ್ಯೆಗಳು ದೇಶದ ಆರ್ಥಿಕತೆಯ ಮೇಲೆ ಒತ್ತಡವನ್ನು ತರುತ್ತಿವೆ. ಜನರು ನಿರುದ್ಯೋಗದಿಂದ ತತ್ತರಿಸಿದ್ದು ಆರ್ಥಿಕತೆಯು ಹಳ್ಳ ಹಿಡಿದಿದೆ.
5. ಲೈಬೀರಿಯಾ
ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಲೈಬೀರಿಯಾ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಡತನಕ್ಕೆ ಸಿಕ್ಕಿ ನರಳುತ್ತಿರುವ 5ನೇ ರಾಷ್ಟ್ರವಾಗಿದೆ. ಈ ದೇಶದ ಅಂತರ್ಯುದ್ಧವು 2003ರಲ್ಲಷ್ಟೇ ಕೊನೆಗೊಂಡಿತು. ಆದರೂ ರಾಷ್ಟ್ರವೂ ಇನ್ನೂ ಚೇತರಿಸಿಕೊಂಡಿಲ್ಲ. ಭ್ರಷ್ಟಾಚಾರ ಮತ್ತು ಸರ್ಕಾರದ ಸಂಘರ್ಷಗಳು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಪ್ರಮುಖ ಕಾರಣವಾಗಿದೆ.
2015ರ ಅಂಕಿ ಅಂಶಗಳ ಪ್ರಕಾರ ಸುಮಾರು 50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಲೈಬೀರಿಯಾ,ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಅತ್ಯಂಕ ಕೆಳಮಟ್ಟದಲ್ಲಿದೆ. ಹೀಗೆ ವಿಶ್ವದ ಟಾಪ್ 10 ಬಡರಾಷ್ಟ್ರಗಳಲ್ಲಿ ಬಹುಪಾಲು ಆಫ್ರಿಕನ್ ರಾಷ್ಟ್ರಗಳೇ ಆಗಿವೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications