'ಸ್ಕಿಲ್ ಇಂಡಿಯಾ ಅಭಿಯಾನವನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಮಹಿಳೆಯರಿಗಾಗಿ 2023 ನೇ ಸಾಲಿನ "ಟೊಯೊಟಾ ಕೌಶಲ್ಯ ಕಾರ್ಯಕ್ರಮ" ಪ್ರವೇಶವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ತರಬೇತಿ ಮಹಾನಿರ್ದೇಶಕರ (ಡಿಜಿಟಿ) ಸಹಯೋಗದೊಂದಿಗೆ ಈ ಕಾರ್ಯಕ್ರಮವು ಕರ್ನಾಟಕದ ಯುವ ಸೌಲಭ್ಯ ವಂಚಿತ ಮಹಿಳೆಯರಿಗೆ ಆಟೋಮೋಟಿವ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನನ್ಯ ಅವಕಾಶವನ್ನು ನೀಡಲು ಟೊಯೊಟಾ ಸಂಸ್ಥೆ ಸಜ್ಜಾಗಿದೆ.

ಟಿಕೆಎಂನ "ಕೌಶಲ್ಯ ಕಾರ್ಯಕ್ರಮ" ಗ್ರಾಮೀಣ ಕರ್ನಾಟಕದ ವಿದ್ಯಾರ್ಥಿಗಳನ್ನು ನುರಿತ ಉದ್ಯಮಕ್ಕೆ ಸಿದ್ಧವಾದ ತಂತ್ರಜ್ಞರ ಗುಂಪನ್ನು ಬೆಳೆಸಲು ಗಮನ ಹರಿಸುತ್ತದೆ. ಇದಕ್ಕೂ ಮೊದಲು ಜೂನ್ 23 ತಿಂಗಳಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಘೋಷಿಸಲಾಗಿತ್ತು.
ಆ ಮೂಲಕ, ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಶೈಕ್ಷಣಿಕವಾಗಿ ಆಧಾರಿತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಅಲ್ಲಿ ಶಿಕ್ಷಣದ ವೆಚ್ಚವನ್ನು ಟಿಕೆಎಂ ಭರಿಸಿತ್ತು. ಪ್ರಸ್ತುತ ಈ ಕಾರ್ಯಕ್ರಮವು ಇಲ್ಲಿಯವರೆಗೆ ಶೇ.8 ರಷ್ಟು ಯುವತಿಯರಿಗೆ ಅವಕಾಶ ಕಲ್ಪಿಸಿದೆ. 2025ರ ಅಂತ್ಯದ ವೇಳೆಗೆ 30% ಯುವತಿಯರಿಗೆ ಪ್ರವೇಶ ನೀಡುವ ಗುರಿಯನ್ನು ಹೊಂದಿದೆ.
ಇದಕ್ಕೆ ಪ್ರವೇಶ ಪಡೆಯಲು ಇರುವ ಮಾನದಂಡ ಮತ್ತು ಸ್ಟೈಫಂಡ್ ಮಾಹಿತಿ ಈ ರೀತಿಯಿದೆ:
- 18-22 ವರ್ಷ ವಯಸ್ಸಿನ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ.
- ಕನಿಷ್ಠ ಶೈಕ್ಷಣಿಕ ಅರ್ಹತೆ: 10 ನೇ ತರಗತಿ ತೇರ್ಗಡೆ / 12 ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ.
- ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಭಾಷೆಯಲ್ಲಿ ಪ್ರಾವೀಣ್ಯತೆ ಮತ್ತು ಕರ್ನಾಟಕದಲ್ಲಿ ವಾಸವಿರಬೇಕು
- ಆಯ್ಕೆಯಾದ ಸ್ಪರ್ಧಿಗಳು ತರಗತಿ ಮತ್ತು ಕೆಲಸದ ಅಭಿವೃದ್ಧಿ ಎರಡನ್ನೂ ಒಳಗೊಂಡಿರುವ ಸಮಗ್ರ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು.
- ಈ ಕಾರ್ಯಕ್ರಮವು 2.5 ತಿಂಗಳ ತರಗತಿಯ ತರಬೇತಿಯನ್ನು ಒಳಗೊಂಡಿದೆ ಮತ್ತು ನಂತರ 21.5 ತಿಂಗಳ ಶಾಪ್ ಫ್ಲೋರ್ ಪ್ರಾಯೋಗಿಕ ತರಬೇತಿಯನ್ನು ಹೊಂದಿದೆ.
- ಹೆಚ್ಚುವರಿಯಾಗಿ, ಆಸಕ್ತರಿಗೆ ಒಂದು ವರ್ಷದ ಅಪ್ರೆಂಟಿಸ್ಶಿಪ್ ಅವಕಾಶ ಲಭ್ಯವಿದೆ.
- ಮೊದಲ ವರ್ಷ ರೂ.14,505 ಮತ್ತು ಎರಡನೇ ವರ್ಷ ರೂ.15,560 ಸ್ಟೈಫಂಡ್.
- ಇಎಸ್ಐ, ಸಮವಸ್ತ್ರ, ಕ್ಯಾಂಟೀನ್ ಮತ್ತು ಪಿಎಫ್ ಸೌಲಭ್ಯ.
- 24*7 ಭದ್ರತೆಯೊಂದಿಗೆ ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯ
- ಇನ್ ಡೋರ್ ಮತ್ತು ಔಟ್ ಡೋರ್ ಗೇಮ್ಸ್, ಕಂಪ್ಯೂಟರ್ ಕೊಠಡಿ, ಫಿಟ್ ನೆಸ್ ಕೇಂದ್ರ, ಗ್ರಂಥಾಲಯ, ಕ್ಲಿನಿಕ್ ಮತ್ತು ಕ್ಯಾಂಟೀನ್ ಸೌಲಭ್ಯ.
- ಕೋರ್ಸ್ ಪೂರ್ಣಗೊಳಿಸುವ ಪ್ರಮಾಣಪತ್ರ, ರಾಷ್ಟ್ರೀಯ ತರಬೇತಿ ಪ್ರಮಾಣಪತ್ರ, ಮತ್ತು ಕೌಶಲ್ಯ ಅಭಿವೃದ್ಧಿ ಪ್ರಮಾಣಪತ್ರ (ಎ ಎಸ್ ಡಿಸಿ).
- ಆಯ್ಕೆ ಪ್ರಕ್ರಿಯೆಯು ನೋಂದಣಿ, ಮುಖಾಮುಖಿ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು, ಹಿನ್ನೆಲೆ ಪರಿಶೀಲನೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಗೆ ಕುಟುಂಬ ಭೇಟಿ ಮತ್ತು ಕಾರ್ಯಕ್ರಮಕ್ಕೆ ಸೇರುವುದನ್ನು ಒಳಗೊಂಡಿರುತ್ತದೆ.


Click it and Unblock the Notifications