ಟಿಪಿಜಿ ಹಾಗೂ ಪಿ.ಇ. ಸಂಸ್ಥೆಯ ಎಲ್ ಕ್ಯಾಟರ್ ಟನ್ ನಿಂದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಶನಿವಾರ ರಿಲಯನ್ಸ್ ಘೋಷಣೆ ಮಾಡಿದೆ. ಅಲ್ಲಿಗೆ ಒಟ್ಟಾರೆಯಾಗಿ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 22.38 ಪರ್ಸೆಂಟ್ ಪಾಲನ್ನು ಮಾರಿ, 1.04 ಲಕ್ಷ ಕೋಟಿ ಸಂಗ್ರಹಿಸಲಾಗಿದೆ.
ಯಾವ ಜಾಗತಿಕ ಕಂಪೆನಿಯಿಂದ ಎಷ್ಟು ಮೊತ್ತ ಹೂಡಿಕೆ ಬಂದಿದೆ ಎಂಬುದರ ವಿವರ ಹೀಗಿದೆ.
ಟಿಪಿಜಿ 4,546.80 ಕೋಟಿ ರುಪಾಯಿ
ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ 5,683.5 ಕೋಟಿ
ಸಿಲ್ವರ್ ಲೇಕ್ 4,547 ಕೋಟಿ
ಮುಬದಾಲ 9,093 ಕೋಟಿ
ಕೆಕೆಆರ್ 11,367 ಕೋಟಿ
ಜನರಲ್ ಅಟ್ಲಾಂಟಿಕ್ 6,598 ಕೋಟಿ
ವಿಸ್ಟಾ 11,367 ಕೋಟಿ
ಸಿಲ್ವರ್ ಲೇಕ್ 5,656 ಕೋಟಿ
ಫೇಸ್ ಬುಕ್ 43,574 ಕೋಟಿ

ಮಾರ್ಚ್ 31, 2021ರೊಳಗೆ ರಿಲಯನ್ಸ್ ಇಂಡಸ್ಟ್ರಿಯ ಎಲ್ಲ ಸಾಲಗಳನ್ನು ತೀರಿಸಲು ಮುಕೇಶ್ ಅಂಬಾನಿ ನೇತೃತ್ವದಲ್ಲಿ ಆಡಳಿತದಲ್ಲಿ ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಭಾರತದಲ್ಲಿ ಅತಿ ದೊಡ್ಡ ರೈಟ್ಸ್ ಇಶ್ಯೂ (53,125 ಕೋಟಿ) ಈಚೆಗಷ್ಟೇ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಇನ್ನು ರಿಲಯನ್ಸ್ ಇಂಡಸ್ಟ್ರಿ ನಡೆಸುವ ತೈಲದಿಂದ ಟೆಲಿಕಾಂ ತನಕದ ಎಲ್ಲ ವ್ಯವಹಾರದಲ್ಲೂ ಸೌದಿ ಅರಾಮ್ಕೋದಿಂದ ಹತ್ತು ಪರ್ಸೆಂಟ್ ಪಾಲು ಖರೀದಿಸುವ ಒಪ್ಪಂದ ಕೂಡ ಆಗಬೇಕಿದೆ. ಅದು ಕೂಡ ಆದಲ್ಲಿ ರಿಲಯನ್ಸ್ ಇಂಡಸ್ಟ್ರಿ ಸಾಲದ ಮೊತ್ತ ಶೂನ್ಯ ಮಾಡುವ ಗುರಿ ಈಡೇರುವುದು ಕಷ್ಟವೇನಲ್ಲ.


Click it and Unblock the Notifications