Ayodhya: ಕರ್ನಾಟಕದಿಂದ ಶ್ರೀರಾಮನ ಅಯೋಧ್ಯೆಗೆ 11 ರೈಲುಗಳ ಸಂಚಾರ, ವಿವರ

ಬೆಂಗಳೂರು, ಜನವರಿ 12: ಕರ್ನಾಟಕದಿಂದ ಅಯೋಧ್ಯೆಗೆ 11 ವಿಶೇಷ ರೈಲುಗಳು ಫೆಬ್ರವರಿಯಿಂದ ಸಂಚರಿಸುವ ಸಾಧ್ಯತೆಯಿದೆ ಎಂದು ಡಿಎಚ್‌ ವರದಿ ಮಾಡಿದೆ.

11 ವಿಶೇಷ ರೈಲುಗಳ ಪೈಕಿ ಮೂರು ರೈಲುಗಳು ಬೆಂಗಳೂರಿನಿಂದ, ತಲಾ ಎರಡು ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಿಂದ ಮತ್ತು ತಲಾ ಒಂದು ಶಿವಮೊಗ್ಗ ಮತ್ತು ಬೆಳಗಾವಿಯಿಂದ ಹೊರಡಲಿವೆ ಎಂದು ನೈಋತ್ಯ ರೈಲ್ವೆಯ ಮೂಲಗಳು ತಿಳಿಸಿವೆ.

ಕರ್ನಾಟಕದಿಂದ ಶ್ರೀರಾಮನ ಅಯೋಧ್ಯೆಗೆ 11 ರೈಲು

ಅಯೋಧ್ಯೆಗೆ ರೈಲುಗಳನ್ನು ಐಆರ್‌ಸಿಟಿಸಿಯಿಂದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ ಕಾಯ್ದಿರಿಸಬೇಕು. ಇವು ಸಾಮಾನ್ಯ ರೈಲುಗಳಾಗಿರುವುದಿಲ್ಲ. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ. ಹಾಗೆಯೇ ಯಾವುದೇ ಕೊನೆಯ ನಿಮಿಷದ ಬುಕಿಂಗ್‌ಗಳು ಇರುವುದಿಲ್ಲ" ಎಂದು ತಿಳಿದು ಬಂದಿದೆ.

ದರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಯ ವಿವರಗಳನ್ನು ಇನ್ನೂ ನಿರ್ಧರಿಸಲಾಗುತ್ತಿದೆ. ಜನವರಿ 22 ರಂದು ನಿಗದಿಪಡಿಸಲಾದ ಅಯೋಧ್ಯೆಯ ರಾಮ ಮಂದಿರದಲ್ಲಿ ಶಂಕುಸ್ಥಾಪನೆ ಸಮಾರಂಭದ ಒಂದು ತಿಂಗಳೊಳಗೆ ರೈಲುಗಳು ಓಡಲು ಪ್ರಾರಂಭಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ರೈಲ್ವೆಯು ಪ್ರಸ್ತುತ ಅಯೋಧ್ಯಾ ಧಾಮ್, ಅಯೋಧ್ಯಾ ಕಂಟೋನ್ಮೆಂಟ್ ಮತ್ತು ಸಲಾರ್‌ಪುರ ನಿಲ್ದಾಣಗಳಲ್ಲಿನ ಯಾರ್ಡ್‌ಗಳನ್ನು ಮರುರೂಪಿಸುತ್ತಿದೆ. ಈ ಸ್ಥಳಗಳಿಂದ ಎರಡು ಬೆಂಗಳೂರು ರೈಲುಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಯಾರ್ಡ್ ಪುನರ್ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಈ ರೈಲುಗಳನ್ನು ಪರಿಚಯಿಸಿದ ನಂತರ ಐಆರ್‌ಸಿಟಿಸಿ ತನ್ನ ಕರ್ನಾಟಕ ಭಾರತ್ ಗೌರವ್ ಯಾತ್ರಾ ರೈಲುಗಳನ್ನು ನಿಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನವರಿ 20 ರಂದು ಬೆಂಗಳೂರಿನಿಂದ ಅಯೋಧ್ಯೆಗೆ ಏಕಮುಖ ವಿಮಾನಕ್ಕೆ ಟಿಕೆಟ್ ದರ 24,000 ರೂಪಾಯಿ ಆಗಿದೆ. ಇದು ಕಡಿಮೆಯೇ ಇದಕ್ಕಿಂತಲೂ ಭಾರೀ ದರ ಏರಿಕೆಯಾಗಿದೆ. ಶಂಕುಸ್ಥಾಪನಾ ದಿನ ಹತ್ತಿರವಾದಂತೆ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಜನವರಿ 20 ರಂದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡುವ ಮತ್ತು ಅಹಮದಾಬಾದ್‌ನಲ್ಲಿ ಐದು ಗಂಟೆಗಳ ರೆಸ್ಟ್ ಟೈಮ್ ನಂತರ ರಾತ್ರಿ 11 ಗಂಟೆಗೆ ಅಯೋಧ್ಯೆಗೆ ತಲುಪುವ ವಿಮಾನಕ್ಕೆ ಟಿಕೆಟ್ ದರವು ಶೇಕಡ 395 ರಷ್ಟು ಹೆಚ್ಚಳವಾಗಿ, ಬೆಲೆಯು 29,700 ರೂಪಾಯಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+