ರಾಜ್ಯದಲ್ಲಿನ ಬೆಲೆ ಏರಿಕೆಯನ್ನು ಖಂಡಿಸಿ ಲಾರಿ ಮಾಲೀಕರು ಮುಷ್ಕರಕ್ಕೆ(lorry strike) ಕರೆಕೊಟ್ಟಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಮುಷ್ಕರ(strike)ಆರಂಭವಾಗಿದೆ.
ಹೌದು, ಕರ್ನಾಟಕದಲ್ಲಿ ಇತ್ತೀಚೆಗೆ ಮಾರಾಟ ತೆರಿಗೆ ಹೆಚ್ಚಳವನ್ನು ಹಿಂತೆಗೆದುಕೊಳ್ಳುವುದು, ಟೋಲ್ ಶುಲ್ಕವನ್ನು ತೆಗೆದುಹಾಕುವುದು, ಗಡಿ ಪ್ರದೇಶಗಳಲ್ಲಿನ RTO ಚೆಕ್‌ಪೋಸ್ಟ್‌ಗಳನ್ನು ಕಿತ್ತುಹಾಕುವುದು ಮತ್ತು ಫಿಟ್‌ನೆಸ್ ಪ್ರಮಾಣಪತ್ರ ನವೀಕರಣಕ್ಕಾಗಿ ಕೇಂದ್ರ ಸರ್ಕಾರದ 15,000 ರೂ.ಗಳ ಅಗತ್ಯವನ್ನು ರದ್ದುಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ಲಾರಿ ಮಾಲೀಕರು ಮತ್ತು ಬುಕಿಂಗ್ ಏಜೆಂಟ್‌ಗಳ ಸಂಘವು ಮುಷ್ಕರಕ್ಕೆ ಕರೆ ನೀಡಿದ್ದು, ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಿದೆ.ಲಾರಿಗಳು ರಸ್ತೆಗೆ ಇಳಿದಿಲ್ಲ.ಹಾಗಾಗಿ ಇಂದು (ಏ.15) ಬೆಳ್ಳಿಗ್ಗೆಯಿಂದ ಅಗತ್ಯ ವಸ್ತುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಮುಷ್ಕರದ ಬಿಸಿ ಬೇರೆ ರಾಜ್ಯಕ್ಕೂ ತಲುಲಿತ್ತಿದ್ದು,ಇಂದಿನಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಬಂದ್ ಆಗಿರುತ್ತದೆ. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಸಂಚಾರವನ್ನು ನಿಲ್ಲಿಸಿದೆ.
ತಮಿಳುನಾಡಿನಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಟ್ರಕ್ಕರ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿರುವ ಹಿನ್ನೆಲೆಯಲ್ಲಿ, ಆ ರಾಜ್ಯದ ಟ್ರಕ್‌ಗಳು ಕರ್ನಾಟಕಕ್ಕೆ ಪ್ರವೇಶಿಸುವುದನ್ನು ತಡೆಯಬೇಕು ಎಂದು ತಮಿಳುನಾಡು ಲಾರಿ ಮಾಲೀಕರ ಸಂಘ (FTNLOA)ದ ಅಧ್ಯಕ್ಷ ಸಿ. ಧನರಾಜ್ ಹೇಳಿದ್ದಾರೆ.
ತಮಿಳುನಾಡು ಟ್ರಕ್‌ಗಳು ಕರ್ನಾಟಕಕ್ಕೆ ಪ್ರವೇಶವಿಲ್ಲ
ಮುಷ್ಕರದಿಂದಾಗಿ ಬೆಂಗಳೂರಿನಲ್ಲಿ ತಮಿಳುನಾಡು ಟ್ರಕ್‌ಗಳಿಗೆ 'ಪ್ರವೇಶವಿಲ್ಲ' ನಿರ್ಬಂಧಗಳನ್ನು ಸಡಿಲಿಸುವಂತೆಯೂ ಅವರು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಟ್ರಕ್ ಮಾಲೀಕರು ಮತ್ತು ಬುಕಿಂಗ್ ಏಜೆಂಟ್ ಸಂಘಗಳ ಮುಷ್ಕರ ಬಗೆಹರಿಯುವವರೆಗೆ ತಮಿಳುನಾಡು ಟ್ರಕ್‌ಗಳು ಕರ್ನಾಟಕಕ್ಕೆ ಪ್ರವೇಶಿಸುವುದನ್ನು ತಡೆಯುತ್ತವೆ ಎಂದು ಧನರಾಜ್ ಹೇಳಿದ್ದಾರೆ.
ಲಾರಿ ಮುಷ್ಕರದಿಂದ ಏನೆಲ್ಲಾ ಇರುವುದಿಲ್ಲ?
- ಲಾರಿ ಮುಷ್ಕದಿಂದ ಅಗತ್ಯ ವಸ್ತುಗಳ ಸಿಗುವುದಲ್ಲ
- ಏರ್‌ಪೋರ್ಟ್ ಟ್ಯಾಕ್ಸಿ ಸಿಗುವುದು ಅನುಮಾನ
- ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ಸ್ಥಗಿತ
- ಟೂರಿಸ್ಟ್ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.
- ಜಲ್ಲಿ ಕಲ್ಲು, ಮರಳು ತುಂಬುವ ಲಾರಿಗಳು ಇರುವುದಿಲ್ಲ.
- ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆ ಇರುವುದಿಲ್ಲ
- ಎಲ್‌ಪಿಜಿ ಸಿಲಿಂಡರ್ ಸಿಗುವುದು ಅನುಮಾನ.
- ಇನ್ನೂ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ.
ಯಾವೆಲ್ಲಾ ಸೇವೆಗಳು ಇರುತ್ತಾವೆ..?
- ಪ್ರತಿನಿತ್ಯ ಬಳಕೆ ಮಾಡುವ ಹಾಲು ಲಭ್ಯವಿರುತ್ತದೆ.
- ಔಷಧಗಳ ಅಂಗಡಿಗಳ ಓಪನ್ ಇರುತ್ತಾವೆ.
- ಗೃಹ ಬಳಕೆ ಅಡುಗೆ ಅನಿಲ ಸಿಗುತ್ತದೆ
- ಆಂಬ್ಯುಲೆನ್ಸ್ ಸೇವೆಯಂತೂ ಇದ್ದೇ ಇರುತ್ತದೆ
- ಅಗ್ನಿಶಾಮಕ ಸೇವೆ ವಾಹನಗಳು ಸಹ ಇರುತ್ತಾವೆ.
ಬೇಡಿಕೆಗಳೇನು?
- ರಾಜ್ಯದ ಹೆದ್ದಾರಿ ಟೋಲ್ ಪ್ಲಾಜಾ ಮತ್ತು ಆರ್‌ಟಿಓ ಗಡಿ ಚೆಕ್‌ಪೋಸ್ಟ್ ರದ್ದು.
- ಎಫ್‌ಸಿ ಶುಲ್ಕ ಕಡಿಮೆ ಮಾಡಬೇಕು.
- ನಗರ ಪ್ರವೇಶಿಸಲು ಸರಕು ವಾಹನಕ್ಕೆ 5 ಗಂಟೆಗಳ ಕಾಲಾವಕಾಶದ ಆದೇಶ ರದ್ದು ಮಾಡಬೇಕು.
- ಟೋಲ್ ಶುಲ್ಕ ಕಡಿಮೆ ಮಾಡಬೇಕು.
- ಪೆಟ್ರೋಲ್ ಡಿಸೇಲ್ ದರವನ್ನು ಕಡಿಮೆ ಮಾಡಬೇಕು.
ಇಂದು ಪೆಟ್ರೋಲ್ ಡಿಸೇಲ್ ಸಿಗುತ್ತಾ..?
ಲಾರಿ ಮಾಲೀಕರು ಮಷ್ಕರದ ತಮ್ಮ ನಿಲುವನ್ನು ಖಚಿತಪಡಿಸಿಲ್ಲ. ಹೀಗಾಗಿ ಪೆಟ್ರೋಲ್ ಡಿಸೇಲ್ ಸೇವೆ ಲಭ್ಯವಿರುತ್ತದೆ.
ಮುಷ್ಕರದ ಬಗ್ಗೆ ಎಫ್‌ಕೆಎಸ್‌ಎಲ್‌ಒಎ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಮಾತನಾಡಿ ಸುಮಾರು ಆರು ಲಕ್ಷ ಟ್ರಕ್‌ಗಳು ಮುಷ್ಕರಕ್ಕೆ ಬೆಂಬಲ ಕೊಟ್ಟಿವೆ ಎಂದು ಹೇಳಿದ್ದಾರೆ. ನಮ್ಮ ನಿರ್ಧಾರ ದೃಢವಾಗಿದೆ, ಸರ್ಕಾರ ಡೀಸೆಲ್ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.
ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿ ರಾಜ್ಯವ್ಯಾಪಿ ಬೆಂಬಲ ಸಿಕ್ಕಿದೆ. ಕೆಲ ಬಣದ ನಾಯಕರು ಸರ್ಕಾರದ ಜೊತೆ ಕೈಜೋಡಿಸಿದ್ದು, ವಿರೋಧ ಮಾಡುತ್ತಿದ್ದಾರೆ. 24 ರಾಜ್ಯಗಳ 60 ಕ್ಕೂ ಹೆಚ್ಚು ಸಾರಿಗೆ ಸಂಘಗಳು ಪ್ರತಿಭಟನೆಗಳಿಗೆ ಬೆಂಬಲ ನೀಡುವುದಾಗಿ ಹೇಳಿವೆ. ಈ ರಾಜ್ಯಗಳ ಟ್ರಕ್‌ಗಳು ಆಂದೋಲನದ ಸಮಯದಲ್ಲಿ ಕರ್ನಾಟಕದೊಳಗೆ ಬರುವುದಿಲ್ಲ.
ಈ ಕುರಿತು ಸರ್ಕಾರ ಯಾವ ನಿರ್ಧಾರವನ್ನು ಕೈಗೊಳ್ಳತ್ತದೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications