For Quick Alerts
ALLOW NOTIFICATIONS  
For Daily Alerts

ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡ ಕಾರ್ಪೋರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್‌

|

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕುಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿದೆ. ಈ ಮೂಲಕ ಯೂನಿಯನ್ ಬ್ಯಾಂಕ್ ದೇಶದ ಐದನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಮಾರ್ಪಟ್ಟಿದೆ ಎಂದು ಬುಧವಾರ ಹೇಳಿದೆ.

 

''ಇಂದಿನಂತೆ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್‌ನ ಎಲ್ಲಾ ಉದ್ಯೋಗಿಗಳು, ಗ್ರಾಹಕರು ಮತ್ತು ಶಾಖೆಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕುಟುಂಬದ ಭಾಗವಾಗಲಿವೆ'' ಎಂದು ಬ್ಯಾಂಕ್ ಪ್ರಕಟಿಸಿದೆ.

ಕಾರ್ಪೋರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್‌ ವಿಲೀನ

ಈ ವಿಲೀನದ ಬಳಿಕ ಬ್ಯಾಂಕ್‌ನ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಈ ಮೂರು ಬ್ಯಾಂಕಿನ ಎಟಿಎಂ ಬಳಸಿ ಹಣ ವಿತ್‌ಡ್ರಾ ಮಾಡಬಹುದು. ಈ ಮೂರು ಬ್ಯಾಂಕುಗಳು 13,500ಕ್ಕೂ ಹೆಚ್ಚು ಎಟಿಎಂ ಹಾಗೂ 9,500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ.

ಇನ್ನು ಗ್ರಾಹಕರ ಮೂಲ ಬ್ಯಾಂಕಿನ ಖಾತೆ ಸಂಖ್ಯೆ ಹಾಗೂ IFSC ಕೋಡ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಾಹಕರು ತಮ್ಮ ಹಳೆಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕವೇ ವ್ಯವಹಾರ ನಡೆಸಬಹುದು. ಇಂಟರ್‌ನೆಟ್‌ ಬ್ಯಾಂಕ್‌ನಲ್ಲೂ ಯಾವುದೇ ವ್ಯತ್ಯಾಸ ಇರುವುದಿಲ್ಲ.

English summary

Union Bank Merger With Andra Bank, Corporation Bank

Union Bank on Wednesday said it has become the country's fifth largest public sector lender after amalgamating Andhra and Corporation Bank into itself.
Story first published: Thursday, April 2, 2020, 9:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X