ಬಜೆಟ್ 2021: ಎನ್‌ಆರ್‌ಐಗಳಿಗೆ ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಅವಕಾಶ

ನವದೆಹಲಿ, ಫೆಬ್ರವರಿ 1: ಭಾರತದ ಉದ್ಯಮ ವಹಿವಾಟುಗಳಲ್ಲಿ ನೇರ ಪಾತ್ರ ವಹಿಸಲು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಅವಕಾಶ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲಕ ಅನಿವಾಸಿ ಭಾರತೀಯ ಉದ್ಯಮಶೀಲರು ದೇಶದಲ್ಲಿ ಏಕ ವ್ಯಕ್ತಿ ಕಂಪೆನಿಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.

ಇದರಲ್ಲಿ ಪಾವತಿಸಲಾಗುವ ಬಂಡವಾಳ ಮತ್ತು ಒಟ್ಟಾರೆ ವಹಿವಾಟಿನ ಮೇಲೆ ನಿರ್ಬಂಧವಿರುವುದಿಲ್ಲ. ಒಂದಕ್ಕಿಂತ ಹೆಚ್ಚು ಏಕ ವ್ಯಕ್ತಿ ಕಂಪೆನಿಗಳನ್ನು ಒಳಗೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ವಾಸವಿರಬೇಕಾದ ದಿನಗಳನ್ನು 182 ರಿಂದ 120 ದಿನಗಳಿಗೆ ಇಳಿಸುವ ಮೂಲಕ ಏಕ-ವ್ಯಕ್ತಿ ಕಂಪೆನಿಯನ್ನು ಇನ್ನೊಂದು ಮಾದರಿಗೆ ಪರಿವರ್ತಿಸಲು ಅನುಮತಿ ನೀಡಲಾಗುತ್ತದೆ.

ಬಜೆಟ್ 2021: ಎನ್‌ಆರ್‌ಐಗಳಿಗೆ ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಅವಕಾಶ

ಭಾರತದಲ್ಲಿ ನೆಲೆಸಿರದ ವ್ಯಕ್ತಿಗಳು ಭಾರತದಲ್ಲಿ ಏಕ ವ್ಯಕ್ತಿ ಕಂಪೆನಿಗಳನ್ನು ಆರಂಭಿಸಲು ಇದು ಅನುಮತಿ ನೀಡಲಿದೆ. ಕಂಪೆನಿ ಕಾಯ್ದೆ 2013ರಲ್ಲಿ ಏಕ ವ್ಯಕ್ತಿ ಕಂಪೆನಿ ಪರಿಕಲ್ಪನೆಯನ್ನು ಅಡಕಮಾಡಲಾಗಿತ್ತು. ಇದು ಉದ್ಯಮಶೀಲರಿಗೆ ಪ್ರಾಥಮಿಕವಾಗಿ ಪ್ರಯೋಜನ ನೀಡಲಿದ್ದು, ಸಾಂಸ್ಥಿಕ ಸ್ಥಾಪನೆಯ ಮೂಲಕ ಅನುದಾನದ ಮೂಲಗಳನ್ನು ಹುಡಕಲು ಅನುಕೂಲವಾಗುವಂತೆ ಮಾಡಲಾಗಿದೆ. ಭಾರತವಲ್ಲದೆ ಅಮೆರಿಕ, ಚೀನಾ ಮತ್ತು ಸಿಂಗಪುರ ಸೇರಿದಂತೆ ಅನೇಕ ದೇಶಗಳು ಒಪಿಸಿ ಸ್ವರೂಪದಲ್ಲಿ ಉದ್ಯಮ ಸಂರಚನೆ ಹೊಂದಲು ಅವಕಾಶ ನೀಡಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+