2022ರಲ್ಲಿ ಹಲವಾರು ಐಪಿಒಗಳು ಆರಂಭವಾಗಿದ್ದು, ಎಲ್‌ಐಸಿ ಸೇರಿದಂತೆ ಪ್ರಮುಖ ಸಂಸ್ಥೆಗಳು ಸಾರ್ವಜನಿಕ ಹೂಡಿಕೆಗೆ ತೆರೆದುಕೊಂಡಿದೆ. ಈಗಾಗಲೇ ನಾವು 2023ರ ಆರು ತಿಂಗಳುಗಳನ್ನು ಕಳೆದಿದ್ದೇವೆ. ಅಂದರೆ ಅರ್ಧ ವರ್ಷವಾಗಿದೆ. ಹೊಸ ವರ್ಷದಲ್ಲಿ ಹಲವಾರು ಐಪಿಒಗಳು ಆರಂಭವಾಗಿದೆ. ಈ ನಡುವೆ ಜುಲೈ ತಿಂಗಳ ಈ ಎರಡನೇ ವಾರದಲ್ಲಿ ಬರೋಬ್ಬರಿ ನಾಲ್ಕು ಐಪಿಒಗಳು ಪ್ರಾರಂಭವಾಗಲಿದೆ.
ಜುಲೈ 12ರಿಂದ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ವರದಿ ಪ್ರಕಟವಾಗಲಿದೆ. ಈ ವರದಿ ಹಾಗೂ ಐಪಿಒಗಳ ನಡುವೆ ಈ ವಾರ ದಲಾಲ್ ಸ್ಟ್ರೀಟ್ ಅತೀ ಬ್ಯುಜಿ ಆಗಿರಲಿದೆ. ಈ ವಾರದಲ್ಲಿ ಒಟ್ಟಾಗಿ ನಾಲ್ಕು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇರಲಿದೆ. ಈ ಪೈಕಿ ಮೂರು ಎಸ್‌ಎಂಇ ಐಪಿಒಗಳಾಗಿದ್ದರೆ, ಒಂದು ಖಾಸಗಿ ಸಂಸ್ಥೆ ನಡೆಸುವ ಐಪಿಒ (main board IPO) ಆಗಿದೆ. ಈ ಐಪಿಒಗಳ ಬಗಗ್ಎ ಇಲ್ಲಿದೆ ವಿವರ ಮುಂದೆ ಓದಿ...

ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಐಪಿಒ
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒ ಮೂಲಕ ಸುಮಾರು 500 ಕೋಟಿ ರೂಪಾಯಿ ಪಡೆಯುವ ಗುರಿಯನ್ನು ಹೊಂದಿದೆ. 200,000,000 ಈಕ್ವಿಟಿ ಷೇರುಗಳನ್ನು ಐಪಿಒಗೆ ತೆರೆಯಲಾಗುತ್ತಿದ್ದು, ಪ್ರತಿ ಷೇರಿನ ಮುಖ ಬೆಲೆ 10 ರೂಪಾಯಿ ಆಗಿದೆ. ಜುಲೈ 12, 2023ರಿಂದ ಚಂದಾದಾರಿಕೆಯು ಆರಂಭವಾಗಲಿದ್ದು, ಜುಲೈ 14, 2023ರಂದು ಕೊನೆಯಾಗಲಿದೆ. ಪ್ರತಿ ಷೇರಿಗೆ 23ರಿಂದ 25 ರೂಪಾಯಿಯಂತೆ ದರವನ್ನು ನಿಗದಿ ಮಾಡಲಾಗಿದೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒದಲ್ಲಿ ಗರಿಷ್ಠವಾಗಿ ಓರ್ವ ವ್ಯಕ್ತಿಯು 600 ಷೇರುಗಳನ್ನು ಖರೀದಿಸಬಹುದು. ರಿಟೇಲ್ ಹೂಡಿಕೆದಾರರು ಚಂದಾದಾರಿಕೆ ಮಾಡಲು ಕನಿಷ್ಠವಾಗಿ 15 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಜುಲೈ 24, 2023ರಂದು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಲೀಸ್ಟಿಂಗ್ ಆಗುವ ಸಾಧ್ಯವಿದೆ. ಷೇರು ಹಂಚಿಕೆಯು ಬುಧವಾರ, 19, ಜುಲೈ 2023ರಂದು ನಡೆಯಲಿದೆ. ಜುಲೈ 11ರಂದು ಆಂಕರ್ ಹೂಡಿಕೆದಾರರ ಆಕ್ಷನ್ ನಡೆಯಲಿದೆ.
ಕಾಕಾ ಇಂಡಸ್ಟ್ರೀಸ್ ಲಿಮಿಟೆಡ್ ಐಪಿಒ
ಕಾಕಾ ಇಂಡಸ್ಟ್ರೀಸ್ ಲಿಮಿಟೆಡ್ ಐಪಿಒ ಒಂದು ಎಸ್‌ಎಂಇ ಐಪಿಒ ಆಗಿದ್ದು, 21.23 ಕೋಟಿ ರೂಪಾಯಿಯ ಆರಂಭಿಕ ಸಾರ್ವಜನಿಕ ಕೊಡುಗೆ ಇದಾಗಿದೆ. 3,660,000 ಈಕ್ವಿಟಿ ಷೇರುಗಳನ್ನು ಐಪಿಒಗೆ ತೆರೆಯಲಾಗುತ್ತಿದ್ದು, ಪ್ರತಿ ಷೇರಿನ ಮುಖ ಬೆಲೆ 10 ರೂಪಾಯಿ ಆಗಿದೆ. ಈ ಐಪಿಒ ಚಂದಾದಾರಿಕೆ ಇಂದು (ಜುಲೈ 10) ಆರಂಭವಾಗಲಿದ್ದು ಜುಲೈ 12 ರವರೆಗೆ ಚಂದಾದಾರಿಕೆಗೆ ಅವಕಾಶವಿದೆ. ಪ್ರತಿ ಷೇರಿಗೆ 55 ರೂಪಾಯಿಯಿಂದ 58 ರೂಪಾಯಿಯಂತೆ ದರವನ್ನು ನಿಗದಿ ಮಾಡಲಾಗಿದೆ.
ಗುರುವಾರ, 20 ಜುಲೈ 2023ರಂದು ಬಿಎಸ್‌ಇಯಲ್ಲಿ ಈ ಕಂಪನಿ ಲೀಸ್ಟಿಂಗ್ ಆಗಲಿದೆ. ಸೋಮವಾರ, 17 ಜುಲೈ 2023ರಂದು ಷೇರು ಹಂಚಿಕೆ ಮಾಡಲಾಗುತ್ತದೆ. ಕಾಕಾ ಇಂಡಸ್ಟ್ರೀಸ್ ಲಿಮಿಟೆಡ್ ಐಪಿಒದಲ್ಲಿ ನೀವು ಗರಿಷ್ಠವಾಗಿ 2000 ಷೇರುಗಳನ್ನು ಖರೀದಿ ಮಾಡಬಹುದಾಗಿದೆ. ರಿಟೇಲ್ ಹೂಡಿಕೆದಾರರು ಚಂದಾದಾರಿಕೆಗಾಗಿ ಕನಿಷ್ಠವಾಗಿ 116,000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಅಹಸೋಲರ್ ಟೆಕ್ನಾಲಜೀಸ್ ಲಿಮಿಟೆಡ್ ಐಪಿಒ
ಅಹಸೋಲರ್ ಟೆಕ್ನಾಲಜೀಸ್ ಲಿಮಿಟೆಡ್ ಐಪಿಒ ಎಸ್‌ಎಂಇ ಐಪಿಒ ಆಗಿದ್ದು, ಸುಮಾರು 12.85 ಕೋಟಿ ರೂಪಾಯಿ ಗಾತ್ರದ ಐಪಿಒ ಇದಾಗಿದೆ. 818,400 ಈಕ್ವಿಟಿ ಷೇರುಗಳನ್ನು ಐಪಿಒಗೆ ತೆರೆಯಲಾಗುತ್ತಿದ್ದು, ಪ್ರತಿ ಷೇರಿನ ಮುಖ ಬೆಲೆ 10 ರೂಪಾಯಿ ಆಗಿದೆ. ಈ ಐಪಿಒ ಚಂದಾದಾರಿಕೆ ಇಂದು (ಜುಲೈ 10) ಆರಂಭವಾಗಲಿದ್ದು ಜುಲೈ 13 ರವರೆಗೆ ಚಂದಾದಾರಿಕೆಗೆ ಅವಕಾಶವಿದೆ. ಪ್ರತಿ ಷೇರಿಗೆ 157 ರೂಪಾಯಿಯಂತೆ ದರವನ್ನು ನಿಗದಿ ಮಾಡಲಾಗಿದೆ.
ಅಹಸೋಲರ್ ಟೆಕ್ನಾಲಜೀಸ್ ಲಿಮಿಟೆಡ್ ಐಪಿಒದಲ್ಲಿ ನೀವು ಗರಿಷ್ಠವಾಗಿ 800 ಷೇರುಗಳನ್ನು ಖರೀದಿ ಮಾಡಬಹುದಾಗಿದೆ. ರಿಟೇಲ್ ಹೂಡಿಕೆದಾರರು ಚಂದಾದಾರಿಕೆಗಾಗಿ ಕನಿಷ್ಠವಾಗಿ 125,600 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಶುಕ್ರವಾರ, 21 ಜುಲೈ 2023ರಂದು ಬಿಎಸ್‌ಇಯಲ್ಲಿ ಈ ಕಂಪನಿ ಲೀಸ್ಟಿಂಗ್ ಆಗಲಿದೆ. ಮಾರುಕಟ್ಟೆದಾರರಿಗೆ ಶೇಕಡ 5.18ರಷ್ಟು ಅಥವಾ 42,400 ಷೇರುಗಳನ್ನು, ರಿಟೇಲ್ ಹೂಡಿಕೆದಾರರಿಗೆ ಶೇಕಡ 47.41ರಷ್ಟು ಅಥವಾ 388,000 ಷೇರುಗಳನ್ನು ಮತ್ತು ಇತರರಿಗೆ ಶೇಕಡ 47.41ರಷ್ಟು ಅಥವಾ 388,000ರಷ್ಟು ಷೇರನ್ನು ಹಂಚಿಕೆ ಮಾಡಲಾಗುತ್ತದೆ.
ಸರ್ವಿಸ್ ಕೇರ್ ಐಪಿಒ
ಸರ್ವಿಸ್ ಕೇರ್ ಐಪಿಒ ಎಸ್‌ಎಂಇ ಐಪಿಒ ಆಗಿದ್ದು, 30,86,000 ಈಕ್ವಿಟಿ ಷೇರುಗಳನ್ನು ಐಪಿಒಗೆ ತೆರೆಯಲಾಗುತ್ತಿದೆ. ಈ ಐಪಿಒ ಚಂದಾದಾರಿಕೆ ಜುಲೈ 14 ಆರಂಭವಾಗಲಿದ್ದು ಜುಲೈ 18 ರವರೆಗೆ ಚಂದಾದಾರಿಕೆಗೆ ಅವಕಾಶವಿದೆ. ಎನ್‌ಎಸ್‌ಇಯಲ್ಲಿ ಬುಧವಾರ 26, ಜುಲೈ 2023ರಂದು ಈ ಕಂಪನಿಯು ಲೀಸ್ಟಿಂಗ್ ಆಗುವ ಸಾಧ್ಯತೆಯಿದೆ. ಈ ಐಪಿಒನ ದರ, ಗರಿಷ್ಠ ಖರೀದಿ ಷೇರು, ಐಪಿಒ ಗಾತ್ರವನ್ನು ಇನ್ನೂ ತಿಳಿಸಲಾಗಿಲ್ಲ. ಜುಲೈ 21ರಂದು ಷೇರು ಹಂಚಿಕೆ ನಡೆಯಲಿದೆ.


Click it and Unblock the Notifications