For Quick Alerts
ALLOW NOTIFICATIONS  
For Daily Alerts

ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿಗೆ $ 2.1 ಬಿಲಿಯನ್ ದಂಡ ಹಾಕಿದ US ಕೋರ್ಟ್

|

ಕ್ಯಾನ್ಸರ್ ಗೆ ಕಾರಣವಾದ ಟಾಲ್ಕಂ ಪೌಡರ್ ಮಾರಾಟ ಮಾಡಿದ್ದ ಜಾನ್ಸನ್ ಅಂಡ್ ಜಾನ್ಸನ್ $ 2.1 ಬಿಲಿಯನ್ (15,887 ಕೋಟಿ ರುಪಾಯಿಗೂ ಹೆಚ್ಚು) ದಂಡ ವಿಧಿಸಿದ್ದ ಆದೇಶವನ್ನು ಯು.ಎಸ್. ಕೋರ್ಟ್ ಎತ್ತಿ ಹಿಡಿದಿದೆ. 2018ರಲ್ಲಿ ಇಪ್ಪತ್ತೆರಡು ಮಂದಿಗೆ 440 ಕೋಟಿ ಅಮೆರಿಕನ್ ಡಾಲರ್ ನೀಡುವಂತೆ ತಿಳಿಸಲಾಗಿತ್ತು. ಆ ಮೊತ್ತವನ್ನು ಅರ್ಧಕ್ಕೆ ಇಳಿಸಿ, ಈಗ ಮಿಸ್ಸೌರಿ ಕೋರ್ಟ್ ಆದೇಶ ನೀಡಿದೆ.

ಗ್ರಾಹಕರಿಗೆ ತೊಂದರೆ ಆಗುವ ವಸ್ತುಗಳನ್ನು ಒಳಗೊಂಡಿದೆ ಎಂಬುದು ತಿಳಿದೂ ಕಂಪೆನಿಯಿಂದ ಮಾರಾಟ ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಬಂದ ಕೋರ್ಟ್, ಮಂಗಳವಾರ ಇಷ್ಟು ಮೊತ್ತದ ಪರಿಹಾರಕ್ಕೆ ಸೂಚಿಸಿದೆ. ದೂರು ಬಂದಿರುವ ಕಂಪೆನಿಯು ದೊಡ್ಡದು, ನೂರಾರು ಕೋಟಿ ಮೌಲ್ಯದ್ದು. ಈ ಪ್ರಕರಣದ ಪರಿಣಾಮ ಕಾಣುವುದಕ್ಕೆ ದೊಡ್ಡ ಮೊತ್ತದ ನಷ್ಟ ಪರಿಹಾರ ಅಗತ್ಯ ಎಂದು ಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣ ದಾಖಲು ಮಾಡಿದವರಿಗೆ ಆಗಿರುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಘಾಸಿಯನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ ಎನ್ನಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ವಕ್ತಾರರು ಮಾತನಾಡಿ, ಸುಪ್ರೀಂ ಕೋರ್ಟ್ ನಲ್ಲಿ ಆದೇಶವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಜಾನ್ಸನ್ & ಜಾನ್ಸನ್ ಗೆ  $ 2.1 ಬಿಲಿಯನ್ ದಂಡ ಹಾಕಿದ US ಕೋರ್ಟ್

ಟಾಲ್ಕ್ ಆಧಾರಿತ ಉತ್ಪನ್ನಗಳಲ್ಲಿ ಇರುವ ವಸ್ತುಗಳಿಂದ ಕ್ಯಾನ್ಸರ್ ಅಪಾಯ ಇದೆ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಿಲ್ಲ ಎಂದು ಆರೋಪಿಸಿ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಾವಿರಾರು ಮಂದಿ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಟಾಲ್ಕ್ ಆಧಾರಿತ ಮಕ್ಕಳ ಪೌಡರ್ ಅನ್ನು ಯು.ಎಸ್. ಹಾಗೂ ಕೆನಡಾದಲ್ಲಿ ನಿಲ್ಲಿಸುವುದಾಗಿ ಕಳೆದ ತಿಂಗಳು ಕಂಪೆನಿ ಹೇಳಿತ್ತು. ಆದರೆ ವಿಶ್ವದ ಉಳಿದೆಡೆ ಮಾರಾಟ ಮುಂದುವರಿಸುವುದಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿ ತಿಳಿಸಿದೆ.

English summary

US Court Told Johnson And Johnson To Pay 2.1 Billion USD Who Suffered Cancer By It's Powder

Missouri court on Tuesday told Johnson and Johnson to pay 2.1 USD to whom caused cancer by it's talc powder.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X