ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರು ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುವಾಗ ನೀಡಿದ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಆಹಾರ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಎಕ್ಸ್ ಬಳಕೆದಾರ ಆಕಾಶ್ ಕೇಸರಿ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರೈಲಿನಲ್ಲಿ ನೀಡಲಾದ ಊಟವು ಹಲಸಿರುವ, ಅದರ ಬಗ್ಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿರುವ ಎರಡು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಭಾರತೀಯ ರೈಲ್ವೇ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಟ್ಯಾಗ್ ಮಾಡಿರುವ ಆಕಾಶ್ ಕೇಸರಿ ಈ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ತಮಗೆ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
"ಹಾಯ್ ಸರ್, ನಾನು ಎನ್‌ಡಿಎಲ್‌ಎಸ್‌ನಿಂದ ಬಿಎಸ್‌ಬಿಗೆ ರೈಲು ಸಂಖ್ಯೆ 22416 ರಲ್ಲಿ ಪ್ರಯಾಣಿಸುತ್ತಿದ್ದೇನೆ. ಈಗ ನೀಡಲಾದ ಆಹಾರವು ವಾಸನೆ ಬರುತ್ತಿದೆ ಮತ್ತು ತುಂಬಾ ಕೊಳಕಾಗಿದೆ. ಆಹಾರದ ಗುಣಮಟ್ಟವು ಕಳಪೆಯಾಗಿದೆ. ದಯವಿಟ್ಟು ನನ್ನ ಸಂಪೂರ್ಣ ಮೊತ್ತವನ್ನು ಹಿಂತಿರುಗಿಸಿ. ಈ ವ್ಯಾಪಾರಿಗಳು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೆಸರನ್ನು ಹಾಳು ಮಾಡುತ್ತಿದ್ದಾರೆ," ಎಂದು ಆಕಾಶ್ ಕೇಸರಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಒಂದು ವಿಡಿಯೋದಲ್ಲಿ ಹಲವಾರು ಪ್ರಯಾಣಿಕರು ತಮ್ಮ ಆಹಾರದ ಟ್ರೇಗಳನ್ನು ತೆಗೆದುಕೊಂಡು ಹೋಗುವಂತೆ ರೈಲು ಸಿಬ್ಬಂದಿ ಹೇಳುತ್ತಿರುವುದು ಕಂಡು ಬಂದಿದೆ. ಎರಡನೇ ವಿಡಿಯೋದಲ್ಲಿ ಕ್ಲಿಪ್ ಟಿನ್ ಫಾಯಿಲ್ ಪ್ಯಾಕೇಜಿಂಗ್‌ನಲ್ಲಿ ಬಡಿಸಿದ ಆಹಾರದ ದೃಶ್ಯವಿದೆ.
ದೂರಿಗೆ ಪ್ರತಿಕ್ರಿಯೆಯಾಗಿ, ರೈಲ್‌ಮದಾದ್‌ನಲ್ಲಿ ದೂರನ್ನು ಅಧಿಕೃತವಾಗಿ ದಾಖಲಿಸಲಾಗಿದೆ ಎಂದು ರೈಲ್ವೇ ಸೇವಾ ಕೇಸರಿಗೆ ಭರವಸೆ ನೀಡಿದ್ದಾರೆ. ಲಿಂಕ್ ಮೂಲಕ ಪ್ರಗತಿಯನ್ನು ಪತ್ತೆಹಚ್ಚಲು ಸೂಚನೆ ನೀಡಿದ್ದಾರೆ. ಹಾಗೆಯೇ ಆಕಾಶ್‌ಗೆ ದೂರ ಸಂಖ್ಯೆಯನ್ನು ಒದಗಿಸಲಾಗಿದೆ.
ಹೆಚ್ಚಿನ ಸಹಾಯಕ್ಕಾಗಿ ನೇರ ಸಂದೇಶ (ಡಿಎಂ) ಮೂಲಕ ಅವರ ಪಿಎನ್‌ಆರ್ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಲು ರೈಲ್ವೆ ಅಧಿಕಾರಿಗಳು ಕೇಸರಿಗೆ ಹೇಳಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಹಲವಾರು ದೂರುಗಳು ಕಳೆದ ವರ್ಷದಿಂದ ಬರುತ್ತಿದೆ.
ಕಳೆದ ವರ್ಷವೂ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೋ, ಲೇಖನಗಳು ವೈರಲ್ ಆಗಿದೆ. ಹಾಗೆಯೇ ಉದ್ಘಾಟನೆಯಾದಾಗ ಇದ್ದ ಆಹಾರ ಮತ್ತು ಈಗಿನ ಆಹಾರದ ವಿಡಿಯೋ, ಫೋಟೋಗಳನ್ನು ಕೂಡಾ ಹಂಚಿಕೊಳ್ಳಲಾಗುತ್ತಿದೆ.
ಭೋಪಾಲ್-ಗ್ವಾಲಿಯರ್ ವಂದೇ ಭಾರತ್ ರೈಲಿನಲ್ಲಿ, ದೂರು ನೀಡಿದ ಪ್ರಯಾಣಿಕರೊಬ್ಬರ ಊಟದ ಪ್ಯಾಕ್‌ನಲ್ಲಿ ಜಿರಳೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಕಳೆದ ವರ್ಷ ದೆಹಲಿ-ಭೋಪಾಲ್ ರೈಲಿನಲ್ಲಿ ನೀಡಲಾದ ಆಹಾರದ ಪ್ಯಾಕೆಟ್‌ನಲ್ಲಿ ಪಾಲಿಥಿನ್ (ಪ್ಲಾಸ್ಟಿಕ್) ತುಂಡು ಕಂಡುಬಂದಿದೆ ಎಂದಿದ್ದಾರೆ.


Click it and Unblock the Notifications