ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಬಹುತೇಕ ಎಲ್ಲಾ ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗಿಗಳಲ್ಲಿ ಅನಿಶ್ಚಿತತೆ ಕಾಡುಕಾಡುತ್ತಿದೆ. ಆದರೆ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ವಿಷೆನೆಟ್ ಇಂಡಿಯಾ ಈ ವರ್ಷ 1,500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಶುಕ್ರವಾರ ಪ್ರಕಟಿಸಿದೆ.
ಕಂಪನಿಯು ಈಗಾಗಲೇ 2019 ರಲ್ಲಿ ಸುಮಾರು 2,000 ವೃತ್ತಿಪರರನ್ನು ನೇಮಕ ಮಾಡಿಕೊಂಡಿದೆ ಎಂದು ಹೇಳಿದೆ. ಈ ವರ್ಷ ಅಡಮಾನ ವ್ಯವಹಾರ ಪ್ರಕ್ರಿಯೆ ನಿರ್ವಹಣೆ (ಬಿಪಿಎಂ) ಕೆಲಸಕ್ಕಾಗಿ ಅಸೋಸಿಯೇಟ್ಸ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ.

"ಪ್ರಪಂಚದಾದ್ಯಂತ, ಜನರು ಈ ಬಿಕ್ಕಟ್ಟಿನಲ್ಲಿ ಆರ್ಥಿಕ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ, ಮತ್ತು ಇದೆಲ್ಲಾ ಸರಿ ಆಗುವವರೆಗೂ ಇರುವ ವೇಗವನ್ನೇ ಉಳಿಸಿಕೊಳ್ಳುವುದು ಬಹಳ ಮುಖ್ಯ" ಎಂದು ವಿಷೆನೆಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಲೋಕ್ ಬನ್ಸಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಈ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ನಾವು 1,500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಆಯ್ಕೆ ಮಾಡಿಕೊಳ್ಳುತ್ತೇವೆ. ನಮ್ಮ ಆರ್ಥಿಕತೆಯಲ್ಲಿನ ಪ್ರತಿಭೆಯ ಗುಣಮಟ್ಟದ ಬಗ್ಗೆ ನಮಗೆ ವಿಶ್ವಾಸವಿದೆ ಮತ್ತು ವಿಷನ್‌ನೆಟ್‌ನೊಂದಿಗೆ ಅವರಿಗೆ ವೃತ್ತಿ ಅವಕಾಶಗಳನ್ನು ನೀಡಲು ಸಂತೋಷವಾಗಿದೆ "ಎಂದು ಬನ್ಸಾಲ್ ಹೇಳಿದರು.
ಮುಂದಿನ ಎರಡು ವಾರಗಳಲ್ಲಿ ಈ ಹೆಚ್ಚಿನ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ವಿಷನ್ಸೆಟ್ ಇತ್ತೀಚೆಗೆ ತನ್ನ ಹೊಸ ಕಚೇರಿ ಸ್ಥಳವನ್ನು ಬೆಂಗಳೂರಿನಲ್ಲಿ ತೆರೆಯುವುದಾಗಿ ಘೋಷಿಸಿತು, ಅದು 3,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಷೆನೆಟ್ ಇಂಡಿಯಾ ಬಿಎಫ್‌ಎಸ್‌ಐ ಉದ್ಯಮದ ಕೆಲವು ಪ್ರಮುಖ ಸವಾಲುಗಳಿಗೆ ಉತ್ತರಿಸಲು ಇತ್ತೀಚಿನ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಪ್ರಮುಖ ಪರಿಹಾರಗಳನ್ನು ನೀಡುತ್ತದೆ.


Click it and Unblock the Notifications