ಜಾಗತಿಕವಾಗಿ ಜನಪ್ರಿಯವಾದ ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ಟ್ವಿಟ್ಟರ್ ಬ್ಲ್ಯೂಟಿಕ್ ಹೊರತಾಗಿ ಬೇರೆ ಬೇರೆ ಬಣ್ಣಗಳ ವೆರಿಫೀಕೇಷನ್ ಟಿಕ್ ಅನ್ನು ಆರಂಭಿಸಿದೆ. ಟ್ವಿಟ್ಟರ್ ಅನ್ನು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಸಂಸ್ಥೆಯಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾಗಿದೆ. ಹಾಗೆಯೇ ತಾನು ಈ ಹಿಂದೆ ಹೇಳಿದಂತೆ ಸಂಸ್ಥೆಯಲ್ಲಿ ಎಲಾನ್ ಮಸ್ಕ್ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಈ ಹಿಂದೆ ಕೊಂಚ ರಿಯಾಯಿತಿ ದರದಲ್ಲಿ ಮಸ್ಕ್‌ನ ಸಂಸ್ಥೆ ಟ್ವಿಟ್ಟರ್ ಬ್ಲ್ಯೂ ಟಿಕ್ ಅನ್ನು ಪರಿಚಯಿಸಿದ್ದು, ಈಗ ಗೋಲ್ಡ್ ಟಿಕ್‌ಗಳ ಬಗ್ಗೆ ಸುದ್ದಿಯಾಗುತ್ತಿದೆ.
ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್‌ಗಾಗಿ ಸಂಸ್ಥೆಗಳಿಗೆ ಮಾಸಿಕವಾಗಿ ಸುಮಾರು 1,000 ಯುಎಸ್ ಡಾಲರ್ ವಿಧಿಸಬಹುದು ಮತ್ತು ಹೆಚ್ಚುವರಿಯಾಗಿ ಪ್ರತಿ ಸಂಬಂಧಿತ ಖಾತೆಗೆ 50 ಯುಎಸ್ ಡಾಲರ್ ಅನ್ನು ವಿಧಿಸಬಹುದು ಎಂದು ವರದಿಯಾಗಿದೆ. ಇಂಟರ್‌ನೆಟ್ ದುನಿಯಾದಲ್ಲಿ ಅತೀ ಹೆಚ್ಚು ನಂಬಿಕಾರ್ಹ ಆಪ್ ಇದಾಗಿದೆ ಎಂದು ಸಾಧಿಸುವುದು ಟ್ವಿಟ್ಟರ್‌ನ ಪ್ರಮುಖ ಗುರಿಯಾಗಿದೆ ಎಂದು ಕೂಡಾ ವರದಿಯಾಗಿದೆ. ಟ್ವಿಟ್ಟರ್ ತನ್ನ ವೆರಿಫಿಕೇಷನ್ ಯೋಜನೆಗಳ ಬಗ್ಗೆ ಮಾರ್ಚ್ 24ರಂದೇ ಮಾಹಿತಿಯನ್ನು ನೀಡಿದೆ. ಪ್ಲ್ಯಾನ್‌ಗಳ ಬಗ್ಗೆ ತಿಳಿಸಿದೆ.

ಟ್ವಿಟ್ಟರ್‌ನಲ್ಲಿ ವಿಂಡಿಂಗ್ ಡೌನ್ ಪ್ಲ್ಯಾನ್ ಆರಂಭದ ಬಗ್ಗೆಯೂ ತಿಳಿಸಿದೆ. ಅಂದರೆ ತನ್ನ ಈ ಹಿಂದಿನ ವೆರಿಫಿಕೇಷನ್ ವ್ಯವಸ್ಥೆಯು ಏಪ್ರಿಲ್ 1ರಿಂದ ಆರಂಭವಾಗಲಿದೆ ಎಂದು ಹೇಳಿದೆ. ಇನ್ನು ಡಿಸೆಂಬರ್‌ನಲ್ಲಿ ಗೋಲ್ಡ್ ಬ್ಯಾಡ್ಜ್ ಆರಂಭ ಮಾಡಲಾಯಿತು. ಶುಕ್ರವಾರ ಎಲಾನ್ ಮಸ್ಕ್ ಪರಿಶೀಲನೆಗೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳ ವೈಯಕ್ತಿಕ ಖಾತೆಗಳು ವೆರಿಫಿಕೇಷನ್ ಬ್ಯಾಡ್ಜ್‌ನ ಪ್ರಯೋಜನವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಸಂಸ್ಥೆಗಳಿಗೆ ಇರುವ ವೆರಿಫಿಕೇಷನ್ ಅನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಟ್ವಿಟ್ಟರ್ ಬ್ಯುಜಿನೆಟ್ ಹೇಳಿದೆ.
ಜನವರಿಯಲ್ಲಿ ಟ್ವಿಟ್ಟರ್ ಬ್ಯುಜಿನೆಸ್ ಸಂಸ್ಥೆಗಳಿಗೆ ತನ್ನ ವೆರಿಫೀಕೇಷನ್ ಅನ್ನು ಬಿಡುಗಡೆಮಾಡಿದೆ. ಟ್ವಿಟ್ಟರ್ ಬ್ಯುಜಿನೆಸ್, "ನಾವು ಶೀಘ್ರವೇ ಸಂಸ್ಥೆಗಳಿಗೆ ವೆರಿಫಿಕೇಷನ್ ಅನ್ನು ಬಿಡುಗಡೆ ಮಾಡಲಿದ್ದೇವೆ. ಅದನ್ನು ಈ ಹಿಂದೆ ಬ್ಲ್ಯೂ ಫಾರ್ ಬ್ಯುಜಿನೆಸ್ ಎಂದು ಕರೆಯಲಾಗುತ್ತಿತ್ತು," ಎಂದು ತಿಳಿಸಿದೆ. ಇನ್ನೊಂದು ಟ್ವೀಟ್‌ನಲ್ಲಿ ಸಂಸ್ಥೆಯು, "ನೀವು ಚಂದಾದಾರಾಗಿ ನಿಮ್ಮ ಮತ್ತು ನಿಮ್ಮ ಉದ್ಯಮಕ್ಕೆ ಉದ್ಯಮ ಖಾತೆ ಮತ್ತು ಅಫೀಲಿಯೇಷನ್ ಬ್ಯಾಡ್ಜ್ ಲಭ್ಯವಾಗಲಿದೆ," ಎಂದು ಹೇಳಿಕೊಂಡಿದೆ.
ಇನ್ನು ಮಾಹಿತಿ ಪ್ರಕಾರ ಟ್ವಿಟ್ಟರ್ ಉದ್ಯಮಗಳಿಗೆ ವೆರಿಫೈಡ್ ಬ್ಯಾಡ್ಜ್ ಅನ್ನು ಆರಂಭಿಸಲಿದೆ, ಮಾಸಿಕವಾಗಿ ವೆರಿಫಿಕೇಷನ್ ಬೆಲೆ 1000 ಯುಎಸ್ ಡಾಲರ್ ಆಗಿರಬಹುದು ಎಂದು ಸಾಮಾಜಿಕ ಜಾಲತಾಣದ ತಜ್ಞರಾದ ಮತ್ ನವಾರಾ ಕಳೆದ ತಿಂಗಳೇ ಟ್ವೀಟ್ ಮಾಡಿದ್ದಾರೆ. ಆದರೆ ಈವರೆಗೂ ಟ್ವಿಟ್ಟರ್ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿಲ್ಲ.
ಟ್ವಿಟ್ಟರ್ ಬ್ಲ್ಯೂ ಟಿಕ್ ಮಾಹಿತಿ
ಏಪ್ರಿಲ್ 1ರಿಂದ ಈ ಹಿಂದೆ ಟ್ವಿಟ್ಟರ್‌ನ ಖಾತೆಗಳಿಗೆ ನೀಡಲಾಗಿದ್ದ ಬ್ಯಾಡ್ಜ್‌ಗಳು ಇರಲಾರದು. ತಮ್ಮ ಬ್ಲ್ಯೂ ಟಿಕ್ ಉಳಿಸಿಕೊಳ್ಳಬೇಕಾದರೆ ಮತ್ತೆ ಪ್ರೀಮಿಯಂ ಪ್ಲ್ಯಾನ್ ಅನ್ನು ಖರೀದಿ ಮಾಡಿ ಎಂದು ಮೈಕ್ರೋಬ್ಲಾಗಿಂಗ್ ಆಪ್ ಮನವಿ ಮಾಡಿದೆ. ಆದ್ದರಿಂದಾಗಿ ಏಪ್ರಿಲ್ 1ರಿಂದ ಬ್ಲ್ಯೂ ಟಿಕ್ ಇರಲಾರದು. ಸೆಲೆಬ್ರೆಟಿಗಳು, ರಾಜಕಾರಣಿಗಳು, ಪ್ರಮುಖ ವ್ಯಕ್ತಿಗಳಿಗೆ ಟ್ವಿಟ್ಟರ್ ನೀಡುವ ಅಥಂಟಿಫಿಕೇಷನ್ ಬ್ಲ್ಯೂ ಟಿಕ್ ಆಗಿದೆ. ಹಾಗೆಯೇ ಈ ಖಾತೆಯನ್ನು ಟ್ವಿಟ್ಟರ್ ವೆರಿಫೈ ಮಾಡಿದೆ ಎಂಬುವುದಕ್ಕೆ ಈ ಬ್ಲ್ಯೂ ಟಿಕ್ ಸಾಕ್ಷಿಯಾಗಿದೆ. ಈ ಖಾತೆ ಸ್ಪಾಮ್ ಅಲ್ಲ, ನಕಲಿ ಅಲ್ಲ ಎಂಬುವುದಕ್ಕೂ ಇದು ಸಾಕ್ಷಿಯಾಗಿದೆ.


Click it and Unblock the Notifications