ಭಾರತದ ಮೊದಲ ಹೊಸ 787-9 ಡ್ರೀಮ್ ಲೈನರ್ ವಿಮಾನವನ್ನು ವಿಸ್ತಾರ ಸಂಸ್ಥೆ ಬಹಿರಂಗ ಮಾಡಿದೆ. ಎಕಾನಮಿ ಕ್ಲಾಸ್ ನಲ್ಲಿಯೇ 12 ಇಂಚಿನ ಸೀಟ್ ಹಿಂದಿನ ಮನರಂಜನೆ ವ್ಯವಸ್ಥೆ, 31 ಇಂಚಿನ ಸೀಟ್ ಪಿಚ್ ಮತ್ತು ಹೆಡ್ ರೆಸ್ಟ್ ಇತ್ಯಾದಿ ಅದ್ಭುತ ವ್ಯವಸ್ಥೆಗಳಿವೆ. ಬೋಯಿಂಗ್ ನಿಂದ ಆರು ವಿಮಾನಗಳನ್ನು ಆರ್ಡರ್ ಮಾಡಿದ್ದು, ಇದು ಮೊದಲ ವಿಮಾನವಾಗಿದೆ. ಅಂತರರಾಷ್ಟ್ರೀಯ ಪ್ರಯಾಣಗಳಿಗೆ ವಿಸ್ತಾರದಿಂದ ಈ ವಿಮಾನ ಬಳಕೆಯಾಗುತ್ತದೆ.
ವಿಮಾನದೊಳಗೆ ವೈಫೈ ಸೇವೆ ಹೊಂದಿರುವ ಭಾರತದ ಮೊದಲ ವಿಮಾನ ಇದಾಗಲಿದೆ. ಈ ವಿಮಾನದೊಳಗೆ ಬಿಜಿನೆಸ್ ಕ್ಲಾಸ್ ನಲ್ಲಿ ಒಂದು ಸಾಲಿನಿಂದ ಮತ್ತೊಂದು ಸಾಲಿನ ಸೀಟ್ ಮಧ್ಯೆ 44 ಇಂಚಿನ ಅಂತರ ಇರುತ್ತದೆ. ವಾಷಿಂಗ್ಟನ್ ನ ಎವೆರೆಟ್ ನಿಂದ ಫೆಬ್ರವರಿ 29ನೇ ತಾರೀಕಿನಂದು ಈ ವಿಮಾನ ದೆಹಲಿಗೆ ಬಂದಿದೆ.

ಬಿಜಿನೆಸ್ ಕ್ಲಾಸ್ ನಲ್ಲಿ 18 ಇಂಚಿನ ಮಾನಿಟರ್ ಇರುತ್ತದೆ. ಮೂವತ್ತು ಸೀಟು ಹೊಂದಿದ್ದು, 1-2-1ರ ಲೆಕ್ಕಾಚಾರದಲ್ಲಿ ಸೀಟುಗಳನ್ನು ಹೊಂದಿಸಲಾಗಿದೆ. ಈ ಡ್ರೀಮ್ ಲೈನರ್ ವಿಮಾನದ ಬಿಜಿನೆಸ್ ಕ್ಲಾಸ್ ನಲ್ಲಿ ಇನ್ನೂ ಹಲವು ವಿಲಾಸಿ ಸೌಲಭ್ಯಗಳು ಒಳಗೊಂಡಿವೆ.

299 ಸೀಟುಗಳು ಈ ವಿಮಾನದಲ್ಲಿ ಇದ್ದು, ಪ್ರತಿ ಸೀಟ್ ನಲ್ಲೂ ಯುಎಸ್ ಬಿ ಪೋರ್ಟ್, 3 ಪಿನ್ ಚಾರ್ಜಿಂಗ್ ಪಾಯಿಂಟ್ ಇರುತ್ತದೆ. ಈ ವಿಮಾನವನ್ನು ಭಾರತ ಮತ್ತು ಯುರೋಪ್ ಅಥವಾ ಜಪಾನ್ ಮಧ್ಯೆ ಹಾರಾಟಕ್ಕೆ ಬಳಸಲಾಗುತ್ತದೆ.

ಬಿಜಿನೆಸ್ ಕ್ಲಾಸ್ ನಲ್ಲಿ 30 ಸೀಟ್, ಪ್ರೀಮಿಯಂ ಎಕಾನಮಿ ಕ್ಲಾಸ್ ನಲ್ಲಿ 21 ಸೀಟ್ ಮತ್ತು ಎಕಾನಮಿ ಕ್ಲಾಸ್ ನಲ್ಲಿ 248 ಸೀಟ್ ಗಳಿರುತ್ತವೆ. ವಿಮಾನದೊಳಗೆ ಮನರಂಜನೆ ಸಲುವಾಗಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳ 150ರಷ್ಟು ಸಿನಿಮಾಗಳು ಲಭ್ಯವಿರುತ್ತವೆ.


Click it and Unblock the Notifications