ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ 45 ನಿಮಿಷಗಳ ಕಾಲ ವ್ಯವಹಾರ ಸ್ಥಗಿತ ಮಾಡಲಾಗಿದೆ. ನಿಫ್ಟಿ 50 ಹಾಗೂ ಸೆನ್ಸೆಕ್ಸ್ ಎರಡೂ ಸೂಚ್ಯಂಕವು ದಿನದ ಆರಂಭದ ವಹಿವಾಟಿನಲ್ಲೇ 10 ಪರ್ಸೆಂಟ್ ಇಳಿಕೆ ದಾಖಲಿಸಿದ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ. ಕಳೆದ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಷೇರು ಮಾರುಕಟ್ಟೆ ವ್ಯವಹಾರ ಸ್ಥಗಿತ ಮಾಡಿದೆ.
ಬಿಎಸ್ ಇ ಮತ್ತು ಎನ್ ಎಸ್ ಇ ಸೂಚ್ಯಂಕವು ಒಂದೋ ಮೇಲ್ಮುಖವಾಗಿ ಅಥವಾ ಕೆಳಮುಖವಾಗಿ 10, 15 ಮತ್ತು 20 ಪರ್ಸೆಂಟ್ ಚಲಿಸಿದರೆ ಆಗ ವಹಿವಾಟು ಸ್ಥಗಿತಗೊಳಿಸಲಾಗುತ್ತದೆ. ದೇಶದಾದ್ಯಂತ ಈಕ್ವಿಟಿ, ಈಕ್ವಿಟಿ ಡೆರಿವೇಟಿವ್ ವ್ಯವಹಾರವನ್ನು ಸ್ಥಗಿತಗೊಳಿಸಲಾಗುತ್ತದೆ.

3000 ಪಾಯಿಂಟ್ ಕುಸಿದ ಸೆನ್ಸೆಕ್ಸ್, ನಿಫ್ಟಿ ವ್ಯವಹಾರ 45 ನಿಮಿಷ ಸ್ಥಗಿತ
ಯಾವ ಸಂದರ್ಭಗಳಲ್ಲಿ ಮಾರುಕಟ್ಟೆ ವಹಿವಾಟನ್ನು ಸ್ಥಗಿತಗೊಳಿಸಲಾಗುತ್ತದೆ?
* ಮಧ್ಯಾಹ್ನ 1 ಗಂಟೆಯ ವಹಿವಾಟಿನೊಳಗೆ 10% ಚಲನೆ ಕಂಡುಬಂದಲ್ಲಿ 45 ನಿಮಿಷ ವಹಿವಾಟು ಸ್ಥಗಿತ
* ಮಧ್ಯಾಹ್ನ 1 ಅಥವಾ 2.30ರೊಳಗೆ 10% ಚಲನೆ ಕಂಡುಬಂದಲ್ಲಿ 15 ನಿಮಿಷ ವಹಿವಾಟು ಸ್ಥಗಿತ
* ಮಧ್ಯಾಹ್ನ 2.30ರ ನಂತರ 10% ಚಲನೆ ಕಂಡುಬಂದಲ್ಲಿ ವ್ಯವಹಾರ ಸ್ಥಗಿತ ಮಾಡುವುದಿಲ್ಲ
* ಮಧ್ಯಾಹ್ನ 1 ಗಂಟೆಗೂ ಮುಂಚೆ 15% ಚಲನೆ ಕಂಡುಬಂದಲ್ಲಿ 1 ಗಂಟೆ 45 ನಿಮಿಷ ವ್ಯವಹಾರ ಸ್ಥಗಿತಗೊಳಿಸಲಾಗುತ್ತದೆ.
* ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ಗಂಟೆಗೆ ಮುಂಚೆ 15% ಚಲನೆ ಕಂಡುಬಂದಲ್ಲಿ 45 ನಿಮಿಷ ವ್ಯವಹಾರ ಸ್ಥಗಿತಗೊಳಿಸಲಾಗುತ್ತದೆ.
* ಮಧ್ಯಾಹ್ನ 2 ಗಂಟೆ ಹಾಗೂ ಆ ನಂತರ 15% ಚಲನೆ ಕಂಡುಬಂದಲ್ಲಿ ಆ ದಿನದ ಬಾಕಿ ಅವಧಿಗೆ ವ್ಯವಹಾರ ಸ್ಥಗಿತಗೊಳಿಸಲಾಗುತ್ತದೆ.
* 20% ಚಲನೆ ದಿನದ ಯಾವುದೇ ಸಮಯದಲ್ಲಿ ಬಂದರೂ ದಿನದ ಬಾಕಿ ಅವಧಿಯ ವ್ಯವಹಾರ ಸ್ಥಗಿತವಾಗುತ್ತದೆ.
ಹಿಂದಿನ ದಿನದ ವ್ಯವಹಾರ ಪೂರ್ಣಗೊಂಡಿರುತ್ತದಲ್ಲಾ ಅದರ ಆಧಾರದಲ್ಲಿ ಒಂದು ದಿನದಲ್ಲಿ 10, 15 ಹಾಗೂ 20 ಪರ್ಸೆಂಟ್ ಏರಿಕೆ ಅಥವಾ ಇಳಿಕೆ ಆದಲ್ಲಿ ಈ ನಿಯಮ ಅನ್ವಯಿಸುತ್ತದೆ.


Click it and Unblock the Notifications