ಅಮೆರಿಕ ಮತ್ತು ಚೀನಾ ಮಧ್ಯದ ವ್ಯಾಪಾರ ಒಪ್ಪಂದ ಮತ್ತು ಫೆಡರಲ್ ರಿಸರ್ವ್ ನಿಂದ ಸಾಲು ಸಾಲಾಗಿ ಬಡ್ಡಿ ದರ ಕಡಿತ ಇವೆಲ್ಲದರಿಂದಾಗಿ ಅಲ್ಪಾವಧಿಯಲ್ಲಿ ಜಗತ್ತಿನ ಆರ್ಥಿಕ ಸ್ಥಿತಿ ಉತ್ತಮಗೊಂಡಿವೆ ಎಂದು ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
"ಬೆಳವಣಿಗೆ ವಿಚಾರದಲ್ಲಿ ಫೆಡ್ ಬಹಳ ಸೂಕ್ಷ್ಮ ಸಂವೇದನೆ ಹೊಂದಿದೆ" ಎಂದು ಬ್ಲೂಮ್ ಬರ್ಗ್ ಟೀವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. "ಅದು ಸಾಲಾಗಿ ಇನ್ಷೂರೆನ್ಸ್ ಕಡಿತ ಮಾಡಿದೆ. ಇದರಿಂದ ಮಾರುಕಟ್ಟೆಗೆ ಭರವಸೆ ಸಿಕ್ಕಂತಾಗಿದ್ದು, ವ್ಯಾಪಾರ ಬಿಕ್ಕಟ್ಟಿನ ಮಧ್ಯೆಯೂ ಪರಿಹಾರ ಸಿಗಬಹುದಾ ಎಂದು ಅವರು ಕಾಯುತ್ತಿದ್ದರು" ಎಂದಿದ್ದಾರೆ ರಾಜನ್.
ಕಳೆದ ತಿಂಗಳು ಫೆಡ್ ನಿಂದ ಈ ವರ್ಷದಲ್ಲಿ ಮೂರನೇ ಬಾರಿಗೆ ಬಡ್ಡಿ ದರ ಕಡಿತ ಮಾಡಿದೆ. ವ್ಯಾಪಾರ- ನೀತಿ ನಿರೂಪಣೆಯಲ್ಲಿನ ಅನಿಶ್ಚಿತತೆ, ಜಾಗತಿಕ ಪ್ರಗತಿಯ ಹಿಂಜರಿತ, ಗುರಿಗಿಂತ ಕಡಿಮೆ ಹಣದುಬ್ಬರ ಈ ಎಲ್ಲವನ್ನೂ ಪರಿಗಣಿಸಿ ಬಡ್ಡಿ ದರ ಇಳಿಸಿದೆ. ನಿಯಮಿತ ವ್ಯಾಪಾರ ಒಪ್ಪಂದವನ್ನು ಅಮೆರಿಕ ಹಾಗೂ ಚೀನಾ ಚೌಕಾಶಿ ಮಾಡುತ್ತಿವೆ. ಇದು ಡಿಸೆಂಬರ್ ತನಕ ಅಂತಿಮವಾಗಲ್ಲ. ಏಕೆಂದರೆ, ಈ ವ್ಯವಹಾರಕ್ಕೆ ಸಹಿ ಮಾಡುವುದು ಎಲ್ಲಿ ಎಂಬುದು ನಿರ್ಧಾರ ಆಗಬೇಕಿದೆ.

ವ್ಯಾಪಾರ ಒಪ್ಪಂದದಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿಯಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಜತೆಗೆ ಹಲವರಿಗೆ ಹೀಗಾಗುವುದು ಬೇಕಾಗಿಲ್ಲ ಎಂದು ರಾಜನ್ ಹೇಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೀವಿ. ಕಳೆದ ವರ್ಷದ ಕೊನೆಗೆ ಇದ್ದ ಪರಿಸ್ಥಿತಿಗಿಂತ ಪರವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂದರ್ಶನದಲ್ಲಿ ರಾಜನ್ ಹೇಳಿದ ಪ್ರಮುಖ ವಿಚಾರಗಳು ಹೀಗಿವೆ:
* ಯುರೋಪಿಯನ್ ಕೇಂದ್ರ ಬ್ಯಾಂಕ್ ನಿಂದ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಲು ಬಹಳ ಕಡಿಮೆ ಅವಕಾಶ ಇದೆ. ಇದೀಗ ಪ್ರಗತಿಗೆ ಮತ್ತೆ ಜೀವ ನೀಡಿ, ಉದ್ಯೋಗ ಸೃಷ್ಟಿ ಮಾಡುವುದು ರಾಜಕಾರಣಿಗಳ ಕೈಲಿದೆ.
* ಸರ್ಕಾರವೇ ಹಣ ಖರ್ಚು ಮಾಡಿ, ಪ್ರಗತಿಗೆ ಅಥವಾ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು ಅದರದೇ ರೀತಿಯಲ್ಲಿ ಅಪಾಯಕಾರಿ ಆದದ್ದು. ಕೆಲವು ದೇಶಗಳಿಗೆ ಇದರಿಂದ ಭಾರಿ ಪ್ರಮಾಣದ ಸಾಲವಾಗಿದೆ.
* ಬ್ರೆಕ್ಸಿಟ್ ಗೆ ಯು. ಕೆ. ಸಿದ್ಧವೇ ಆಗಿಲ್ಲ. ಯುರೋಪಿಯನ್ ಒಕ್ಕೂಟದಿಂದ ಹೊರಬರುವುದು ಅದಕ್ಕೆ ಒಳ್ಳೆಯದಲ್ಲ.
* ಬ್ಯಾಂಕ್ ಆಫ್ ಇಂಗ್ಲೆಂಡ್ ನ ಗವರ್ನರ್ ಆಗಿ ಕಾರ್ಯ ನಿರ್ವಹಿಸುವುದಕ್ಕೆ ನನ್ನ ಹೆಸರು ಕೇಳಿಬಂದಿದೆ. ಆದರೆ ಅದು ಬಹಳ ಕಷ್ಟದ ಕೆಲಸ. ಕೇಂದ್ರ ಬ್ಯಾಂಕ್ ನ ಜವಾಬ್ದಾರಿಯಲ್ಲಿ ಈಗ ರಾಜಕೀಯದ ಪಾತ್ರ ಹೆಚ್ಚಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಆಗುವವರಿಗೆ ಸ್ಥಳೀಯ ರಾಜಕಾರಣದ ಸನ್ನಿವೇಶದ ಗೊತ್ತಿರಬೇಕು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications