ಹೇಗೋ ಕಷ್ಟಪಟ್ಟು ಬೇಸ್ ಬಾಲ್ ಆಟವನ್ನಾದರೂ ಅರ್ಥ ಮಾಡಿಕೊಂಡು ಬಿಡಬಹುದು. ಹಣಕಾಸು ಅಥವಾ ಇನ್ವೆಸ್ಟ್ ಮೆಂಟ್ ಅಂದರೆ ಬಹಳ ಕಷ್ಟದ 'ವಿಷಯ' ಅನ್ನೋರೇ ಜಾಸ್ತಿ. ಹೀಗೆ ಹೇಳುವವರು ಜಾಸ್ತಿ ಇದ್ದಾರೆ ಅನ್ನೋದನ್ನು ಶೇರ್ ಖಾನ್ ಬ್ರೋಕರೇಜ್ ಸಂಸ್ಥೆ ಚೆನ್ನಾಗಿ ಅರ್ಥ ಮಾಡಿಕೊಂಡಂತಿದೆ. ಆದ್ದರಿಂದಲೇ ವಿಶ್ವದ ಮೊದಲ ಹಣಕಾಸು ಸಿನಿಮಾಗಳ ಪ್ಲಾಟ್ ಫಾರ್ಮ್ ಅನ್ನು ಶುರು ಮಾಡಿದೆ.
ಈ ಮೂಲಕ ಹಣಕಾಸು ವಿಚಾರಗಳ ಕಲಿಕೆಯನ್ನು ಹೆಚ್ಚು ಆಸಕ್ತಿಕರವಾಗಿಯೂ ಹಾಗೂ ಎಂಜಾಯ್ ಮಾಡುವಂತೆಯೂ ನೋಡಿಕೊಳ್ಳುವುದು ಇದರ ಉದ್ದೇಶ. MoneyFLIX ಎಂದು ಆ ಪ್ಲಾಟ್ ಫಾರ್ಮ್ ಗೆ ಹೆಸರಿಡಲಾಗಿದೆ. ಇನ್ಫೋಗ್ರಾಫಿಕ್ಸ್, ಸಿನಿಮಾಗಳು ಇನ್ನೂ ಏನೇನೋ ಇದರಲ್ಲಿದೆ. ಹಣಕಾಸು ಹೂಡಿಕೆ ಎಂಬುದು ಕಬ್ಬಿಣದ ಕಡಲೆ ಎಂದು ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಮಿಥ್ಯೆಯನ್ನು ತೆಗೆದುಹಾಕುವುದು ಇದರ ಗುರಿ.
ಈಗಷ್ಟೇ ಹೂಡಿಕೆ ಶುರು ಮಾಡಿರುವ ಯುವಜನರಿಂದ ಆರಂಭಗೊಂಡು, ಸಾಂಪ್ರದಾಯಿಕವಾಗಿ ಹೂಡಿಕೆ ಮಾಡಿಕೊಂಡು ಬರುತ್ತಿರುವ ಅನುಭವಿಗಳ ತನಕ MoneyFLIX ಏನಾದರೂ ನೀಡುತ್ತದಂತೆ. ಟ್ರೇಡಿಂಗ್ ಮತ್ತು ಹೂಡಿಕೆ, ಮ್ಯೂಚುವಲ್ ಫಂಡ್ಸ್, ಪರ್ಸನಲ್ ಫೈನಾನ್ಸ್ ಗೆ ಸಂಬಂಧಿಸಿದ ಇನ್ಷೂರೆನ್ಸ್ ಮುಂತಾದವುಗಳನ್ನು ತಿಳಿದುಕೊಳ್ಳಬಹುದು.

ಈಗಾಗಲೇ MoneyFLIXನಲ್ಲಿ ಹತ್ತಿರಹತ್ತಿರ 100 ವಿಡಿಯೋ ಇದೆ. ಅದರಲ್ಲಿ ಕಡಿಮೆ ಅವಧಿಯ 5 ನಿಮಿಷದಿಂದ 30 ನಿಮಿಷದ ತನಕ ವಿಡಿಯೋ ಇದೆ. ಇದರಲ್ಲಿರುವ ಬಹುತೇಕ ವಿಷಯಗಳು 'ಸಿನಿಮಾ' ಫಾರ್ಮಾಟ್ ನಲ್ಲಿವೆ. ವಿವಿಧ ಪಾತ್ರಗಳು, ಪೂರ್ಣಪ್ರಮಾಣದ ಸ್ಟೋರಿ ಎಲ್ಲವೂ ಕಾಣಲು ಸಿಗುತ್ತವೆ.
ಅತ್ಯಂತ ಸರಳವಾದ ಹೂಡಿಕೆಯಿಂದ ಶುರುವಾಗಿ ಕಠಿಣ ಟ್ರೇಡಿಂಗ್ ಸಿದ್ಧಾಂತಗಳನ್ನು ಬಾಲಿವುಡ್ ಶೈಲಿಯಲ್ಲಿ ಈ ಸಿನಿಮಾಗಳು ದಾಟಿಸುತ್ತವೆ ಎಂದು ಕಂಪೆನಿ ಹೇಳಿದೆ. ಹಣಕಾಸು ಸ್ಟೇಟ್ ಮೆಂಟ್ ಗಳನ್ನು ಸುಲಭವಾಗಿ ಓದಿ, ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ಆಯ್ಕೆಗೆ ಟಾಪ್ 9 ಸಂಗತಿಗಳು, ಷೇರುಗಳು ಆಯ್ಕೆ ಸುಲಭ ಮಾಡಿಕೊಳ್ಳಿ, ಟ್ರೆಂಡ್ ಬದಲಾಗುವ ಎಚ್ಚರಿಕೆ ಹೀಗೆ ವಿವಿಧ ವಿಷಯಗಳ ಸಿನಿಮಾ ಈ MoneyFLIXನಲ್ಲಿವೆ.
ವಿಶಿಷ್ಟ ಫೀಚರ್ ಗಳು
MoneyFLIX ಕೆಲವು ವಿಶಿಷ್ಟ ಫೀಚರ್ ಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಈ ಪ್ಲಾಟ್ ಫಾರ್ಮ್ ನೋಡುಗರಿಗೆ 'ವಾಯ್ಸ್ ಹೊಂದಾಣಿಕೆ ಇರುವ ನೋಟ್ ಪ್ಯಾಡ್' ವ್ಯವಸ್ಥೆ ನೀಡಿದೆ. ಧ್ವನಿ ಮೂಲಕ ಮುಖ್ಯ ಅಂಶಗಳನ್ನು ನೋಟ್ ಮಾಡಿಕೊಳ್ಳಬಹುದು. ಅದೇ ರೀತಿ ಸಬ್ ಟೈಟಲ್ ಗಳು ವಿವಿಧ ಸ್ಥಳೀಯ ಭಾಷೆಗಳಲ್ಲಿ ಲಭ್ಯ ಇವೆ. ಅತ್ಯಂತ ಕನಿಷ್ಠ ಪ್ರಮಾಣದ ಇಂಟರ್ ನೆಟ್ ಸೌಲಭ್ಯ ಇರುವ ದೂರ ಪ್ರದೇಶದ ಜನರು ಸಹ ಈ ವಿಡಿಯೋಗಳನ್ನು ನೋಡಬಹುದು.
ಅಂದ ಹಾಗೆ MoneyFLIX ವಾರ್ಷಿಕ ಚಂದಾದಾರರಾಗಲು 1990+ ತೆರಿಗೆ ಪಾವತಿಸಬೇಕು. ಇನ್ನು ತಿಂಗಳ ಚಂದಾದಾರರಾಗಲು 990+ ತೆರಿಗೆ ಕಟ್ಟಬೇಕು. ಪ್ರತಿ ತಿಂಗಳು ಹಣಕಾಸಿಗೆ ಸಂಬಂಧಿಸಿದ ಸಿನಿಮಾಗಳು ಸೇರ್ಪಡೆ ಆಗುತ್ತಲೇ ಇರುತ್ತದಂತೆ.


Click it and Unblock the Notifications