ಹಲವಾರು ಸಂಸ್ಥೆಗಳು ನಷ್ಟವನ್ನು ಕಂಡಿದೆ. ಇದಕ್ಕಾಗಿ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಜೊಮ್ಯಾಟೊದಲ್ಲಿ ಹಣಕಾಸು ವರದಿಯು ಸಂಸ್ಥೆಯು ಭಾರೀ ನಷ್ಟ ಉಂಟಾಗಿದೆ ಎಂದು ತಿಳಿಸಿದೆ. ಇದರ ನಡುವೆ ಸಂಸ್ಥೆಯು 225 ಸಣ್ಣ ನಗರಗಳಿಗೆ ಜೊಮ್ಯಾಟೊ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ನಗರಗಳಲ್ಲಿ ಹೆಚ್ಚಿನ ವಹಿವಾಟು ಇಲ್ಲ ಎಂದು ಹೇಳಿದೆ.
ಡಿಸೆಂಬರ್‌ನಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಜೊಮ್ಯಾಟೊ ನಷ್ಟವನ್ನು ಕಂಡಿದೆ. 346.6 ಕೋಟಿ ರೂಪಾಯಿ ಆಗಿದೆ. ಆಹಾರ ವಿತರಣೆ ವಹಿವಾಟಿನಲ್ಲಿ ನಷ್ಟ ಉಂಟಾದ ಕಾರಣದಿಂದಾಗಿ ಉದ್ಯೋಗ ಕಡಿತದ ಜೊತೆಗೆ, ಕೆಲವು ನಗರಗಳಲ್ಲಿ ವಹಿವಾಟು ಸ್ಥಗಿತವನ್ನು ಕೂಡಾ ಮಾಡಿದೆ. ಆದರೆ ಯಾವೆಲ್ಲ ನಗರಗಳಲ್ಲಿ ವಹಿವಾಟನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಬಗ್ಗೆ ಜೊಮ್ಯಾಟೊ ಈವರೆಗೆ ಮಾಹಿತಿ ನೀಡಿಲ್ಲ.
ಕಳೆದ ತ್ರೈಮಾಸಿಕದಲ್ಲಿ ಈ ನಗರಗಳಲ್ಲಿ ಉತ್ತಮ ವಹಿವಾಟು ನಡೆದಿಲ್ಲ ಎಂದು ಸಂಸ್ಥೆಯು ಹೇಳಿದೆ. ಹಾಗೆಯೇ ಈ ಸಂಸ್ಥೆಯಲ್ಲಿ ಮಾಡಿದ ಹೂಡಿಕೆಗೆ ತಕ್ಕುದಾದ ರಿಟರ್ನ್ ಲಭ್ಯವಾಗಿಲ್ಲ ಎಂದು ಹೇಳಿದೆ. ನೂತನ ವರದಿಯ ಪ್ರಕಾರ ಜೊಮ್ಯಾಟೊ ಆದಾಯವು ಅಕ್ಟೋಬರ್‌ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 75ರಷ್ಟು ಅಂದರೆ 1948 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದರೆ ಐದು ಬಾರಿ ನಷ್ಟವು ಏರಿಕೆಯಾಗಿದೆ. ಇನ್ನು ಈ 225 ನಗರಳಲ್ಲಿ ಬರೀ ಶೇಕಡ 0.3ರಷ್ಟು ಆರ್ಡರ್ ಮೌಲ್ಯವಿದೆ.

800 ಮಂದಿಯ ನೇಮಕಾತಿ ಘೋಷಿಸಿದ ಸಿಇಒ
ತನ್ನ ಲಾಭವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಇತ್ತೀಚೆಗೆ ತನ್ನ ಗೋಲ್ಡ್ ಚಂದಾದಾರಿಕೆಯನ್ನು ಭಾರತದಲ್ಲಿ ಮತ್ತೆ ಆರಂಭ ಮಾಡಿದೆ. ಈ ಯೋಜನೆಯಡಿಯಲ್ಲಿ ಒಟ್ಟಾಗಿ 9 ಲಕ್ಷ ಸದಸ್ಯರು ಚಂದಾದಾರಿಕೆಯನ್ನು ಮಾಡಿದ್ದಾರೆ. ಇನ್ನು ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿರುವಾಗ ಜೊಮ್ಯಾಟೊ ಸಿಇಒ ದೀಪೆಂದರ್ ಗೋಯಲ್ ಸಂಸ್ಥೆಯಲ್ಲಿ ನೇಮಕಾತಿ ಮಾಡುವ ಘೋಷಣೆಯನ್ನು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಜೊಮ್ಯಾಟೊ ಸಿಇಒ ದೀಪೆಂದರ್ ಗೋಯಲ್, ಸಂಸ್ಥೆಯಲ್ಲಿ 800 ಮಂದಿಯನ್ನು ನೇಮಕಾತಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಲಿಂಕ್ಡಿನ್‌ನಲ್ಲಿ ದೀಪೆಂದರ್ ಗೋಯಲ್ ಉದ್ಯೋಗ ನೇಮಕಾತಿಯ ಬಗ್ಗೆ ವಿವರಣೆ ನಿಡಿದ್ದಾರೆ. ಸಿಇಒ, ಜೆನರಲಿಸ್ಟ್, ಗ್ರೋತ್ ಮ್ಯಾನೆಜರ್, ಪ್ರೊಡಕ್ಟ್ ಓನರ್, ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಘೋಷಣೆ ಮಾಡಿದೆ.
ಜೊಮ್ಯಾಟೊ ಗೋಲ್ಡ್ ಮೆಂಬರ್‌ಶಿಪ್
ಈ ಗೋಲ್ಡ್ ಮೆಂಬರ್‌ಶಿಪ್ ಹೊಂದಿದ್ದರೆ ಜೊಮ್ಯಾಟೊ ಬಳಕೆದಾರರು ಅಧಿಕ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ. ಹಾಗೆಯೇ ಉಚಿತ ಡೆಲಿವರಿ, ಅಧಿಕ ರಿಯಾಯಿತಿ, ಉಚಿತ ಆಹಾರ ಹಾಗೂ ಪಾನೀಯ, ಮೊದಲಾದ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಇನ್ನು ಈ ಹಿಂದೆ ಸಂಸ್ಥೆಯು ಜೊಮ್ಯಾಟೊ ಪ್ರೋ ಪ್ಲಸ್ ಮೆಂಬರ್‌ಶಿಪ್ ಕಾರ್ಯಕ್ರಮವನ್ನು ಕೂಡಾ ಆರಂಭ ಮಾಡಿದೆ. ಇದರಿಂದಾಗಿ ಅಧಿಕ ಲಾಭವನ್ನು ಪಡೆಯಲು ಸಾಧ್ಯವಾಗಿದೆ. ಆದರೆ ಸಂಸ್ಥೆಯು ಕಳೆದ ಆಗಸ್ಟ್‌ನಿಂದ ಪ್ರೋ ಹಾಗೂ ಪ್ರೋ ಪ್ಲಸ್ ಕಾರ್ಯಕ್ರಮಕ್ಕೆ ಹೊಸ ಮೆಂಬರ್‌ಶಿಪ್ ಅನ್ನು ನೀಡುವುದನ್ನು ಸ್ಥಗಿತ ಮಾಡಿತು.
ತಮ್ಮ ಅವಧಿ ಮುಗಿದ ಮೆಂಬರ್‌ಶಿಪ್ ಅನ್ನು ಮತ್ತೆ ರಿನಿವಲ್ ಮಾಡುವ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಿರುವ ಜೊಮ್ಯಾಟೊ, "ಜೊಮ್ಯಾಟೊ ಪ್ರೋ ಯೋಜನೆಯ ಭಾಗವಾಗಿರುವುದಕ್ಕೆ ನಿಮಗೆ ಧನ್ಯವಾದಗಳು. ನಾವು ನಿಮಗೆ ಉತ್ತಮ ಹಾಗೂ ಅಪ್‌ಡೇಟೆಡ್ ವ್ಯವಸ್ಥೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಸ್ತುತ ಮೆಂಬರ್‌ಶಿಪ್ ಅನ್ನು ರಿನಿವಲ್ ಮಾಡಲು ಸಾಧ್ಯವಾಗುವುದಿಲ್ಲ. ಲೇಟೆಸ್ಟ್ ಆಫರ್ ಬಗ್ಗೆ ತಿಳಿಯಲು ನಮ್ಮ ಆಪ್ ಅನ್ನು ಚೆಕ್ ಮಾಡಿ," ಎಂದು ತಿಳಿಸಿದೆ.


Click it and Unblock the Notifications