ಇತ್ತೀಚೆಗೆ ಆಹಾರ ಡೆಲಿವರಿ ಮಾಡುವ ಸಂಸ್ಥೆಯಾದ ಜೊಮ್ಯಾಟೊ ಭಾರೀ ಸುದ್ದಿಯಾಗುತ್ತಿದೆ. ಕಳೆದ ಶುಕ್ರವಾರ ಜೊಮ್ಯಾಟೊ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಸಂಸ್ಥೆಯ ನಿವ್ವಳ ಲಾಭವು ಎರಡು ಕೋಟಿ ರೂಪಾಯಿ ದಾಟಿದೆ. ಈ ಬೆನ್ನಲ್ಲೇ ಸೋಮವಾರ ಜೊಮ್ಯಾಟೊ ಸ್ಟಾಕ್ ಷೇರು ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಆದರೆ ಈಗ ಈ ಆಪ್ ಬಳಕೆ ಮಾಡುವವರಿಗೆ ಶಾಕ್ ನೀಡಲು ಸಂಸ್ಥೆ ಮುಂದಾಗಿದೆ.
ಜೊಮ್ಯಾಟೊ ಪ್ಲಾಟ್‌ಫಾರ್ಮ್‌ನಲ್ಲಿ 2 ರೂಪಾಯಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. ಕಾರ್ಟ್ ಮೌಲ್ಯವನ್ನು ಲೆಕ್ಕಿಸದೆಯೇ ಪ್ರತಿ ಆರ್ಡರ್‌ಗೆ ಶುಲ್ಕವನ್ನು ವಿಧಿಸಲಾಗುತ್ತದೆ. ಜೊಮ್ಯಾಟೊ ಗೋಲ್ಡ್ ಲಾಯಲ್ಟಿ ಪ್ರೋಗ್ರಾಂನಲ್ಲಿ ದಾಖಲಾದವರು ಸೇರಿದಂತೆ ಎಲ್ಲಾ ಬಳಕೆದಾರರಿಗೆ ಅನ್ವಯಿಸುತ್ತದೆ. ಪ್ಲಾಟ್‌ಫಾರ್ಮ್ ಶುಲ್ಕವು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ, ಇದನ್ನು ಎಲ್ಲಾ ಬಳಕೆದಾರರಿಗೆ ಜಾರಿ ತರಲಾಗುತ್ತದೆಯೇ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಹೊಸ ಪ್ಲಾಟ್‌ಫಾರ್ಮ್ ಶುಲ್ಕ ಪರಿಚಯ
ಆಯ್ದ ಮಾರುಕಟ್ಟೆಗಳಲ್ಲಿ ಪ್ರತಿ ಆರ್ಡರ್‌ಗೆ ಎರಡು ರೂಪಾಯಿ ಶುಲ್ಕವನ್ನು ಜೊಮ್ಯಾಟೊ ಪರಿಚಯಿಸಿದೆ. ಲಾಭ ಪಡೆಯಲು ಹೊಸ ಮಾರ್ಗವನ್ನು ಹುಟ್ಟಿಹಾಕಲು ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸುವ ಗುರಿಯನ್ನು ಈ ಶುಲ್ಕವು ಹೊಂದಿದೆ ಎಂದು ಕಂಪನಿ ಹೇಳಿದೆ. ಆದರೆ ಈಗ ಇದು ಪ್ರಯೋಗ ಹಂತದಲ್ಲಿದ್ದು, ಬಳಕೆದಾರರ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಜೊಮ್ಯಾಟೊ ಶುಲ್ಕವನ್ನು ಕಡಿಮೆ ಮಾಡುವ ಮುನ್ನ ಅದರ ಪರಿಣಾಮ ಹೇಗಿದೆ ಎಂದು ನೋಡಿಕೊಳ್ಳುತ್ತದೆ.
ಜೊಮ್ಯಾಟೊ ಪ್ಲಾಟ್‌ಫಾರ್ಮ್ ಶುಲ್ಕವನ್ನು ಏಕೆ ವಿಧಿಸುತ್ತಿದೆ?
ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜೊಮ್ಯಾಟೊ ಮೊದಲ ಬಾರಿಗೆ 2 ಕೋಟಿ ರೂಪಾಯಿಗಳ ಲಾಭವನ್ನು ಕಂಡಿದೆ. ಆದರೆ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚಗಳು 1,768 ಕೋಟಿ ರೂಪಾಯಿಯಿಂದ 2,612 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ. ವರದಿ ಪ್ರಕಾರ ಜೊಮ್ಯಾಟೊ ಈಗ ವೆಚ್ಚವನ್ನು ಸರಿದೂಗಿಸಿ ಲಾಭವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗವನ್ನು ಹುಡುಕುತ್ತಿದೆ.
ಇತ್ತೀಚೆಗೆ, ಜೊಮ್ಯಾಟೊ ಸಿಎಫ್‌ಒ, ಅಕ್ಷಾಂತ್ ಗೋಯಲ್, ಪ್ಲಾಟ್‌ಫಾರ್ಮ್ ಶುಲ್ಕವನ್ನು ಜಾರಿಗೆ ತರಬೇಕೆ ಎಂದು ಕಂಪನಿಯು ನಿರ್ಧರಿಸಿಲ್ಲ ಎಂದು ಹೇಳಿದರು. ಆದಾಗ್ಯೂ, ಇಟಿ ಪ್ರಕಾರ, ಪ್ರಾಯೋಗಿಕ ಆಧಾರದ ಮೇಲೆ ಜೊಮ್ಯಾಟೊ ಬಳಕೆದಾರರಿಗೆ ಸಣ್ಣ ಶುಲ್ಕವನ್ನು ವಿಧಿಸಲು ಪ್ರಾರಂಭಿಸುತ್ತದೆ.
ದೇಶದಲ್ಲಿ ಅತೀ ಜನಪ್ರಿಯವಾದ ಆಹಾರ ಡೆಲಿವರಿ ಸಂಸ್ಥೆಯಾದ ಜೊಮ್ಯಾಟೊ ಶುಕ್ರವಾರ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಇದಾದ ಬೆನ್ನಲ್ಲೇ ಎರಡು ದಿನಗಳ ವಾರಾಂತ್ಯದ ರಜಾ ದಿನದ ಬಳಿಕ ಸೋಮವಾರ ಜೊಮ್ಯಾಟೊ ಷೇರು ಮಾರುಕಟ್ಟೆಯಲ್ಲಿ ಶೈನ್ ಆಗಿದೆ. ಸೋಮವಾರ ವಹಿವಾಟಿನ ಆರಂಭವಾಗುತ್ತಿದ್ದಂತೆ ಜೊಮ್ಯಾಟೊ ಷೇರು ಸುಮಾರು ಶೇಕಡ 5ರಷ್ಟು ಏರಿಕೆ ಕಂಡು 100 ರೂಪಾಯಿಯ ಗಡುವನ್ನು ದಾಟಿದೆ.
100 ರೂಪಾಯಿಯ ಗಡುವನ್ನು ದಾಟಿದ ಜೊಮ್ಯಾಟೊ ಷೇರು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಬಿಎಸ್‌ಇಯಲ್ಲಿ 52 ವಾರಗಳ ನೂತನ ಗರಿಷ್ಠ ಮಟ್ಟವನ್ನು ತಲುಪಿದೆ. ನಿನ್ನೆ ಆರಂಭಿಕ ವಹಿವಾಟಿನಲ್ಲಿ ಜೊಮ್ಯಾಟೊ ಷೇರು ದರ ಸುಮಾರು ಶೇಕಡ 5ರಷ್ಟು ಜಿಗಿತ ಕಂಡು 102.85 ರೂಪಾಯಿಗೆ ತಲುಪಿದೆ. ಈ ಸಮಯಕ್ಕೆ ಜೊಮ್ಯಾಟೊ ಷೇರು ಸುಮಾರು ಶೇಕಡ 3.33ರಷ್ಟು ಇಳಿಕೆಯಾಗಿ, 94.35 ರೂಪಾಯಿಗೆ ತಲುಪಿದೆ.
ಜೊಮ್ಯಾಟೊ ಒಟ್ಟು ನಿವ್ವಳ ಲಾಭವು ಜೂನ್ 2023ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ 2 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಜೊಮ್ಯಾಟೊ ಸುಮಾರು 186 ಕೋಟಿ ರೂಪಾಯಿ ನಷ್ಟವನ್ನು ಕಂಡಿತ್ತು. ಇನ್ನು ಮಾರ್ಚ್ ತ್ರೈಮಾಸಿಕದಲ್ಲಿ ಸಂಸ್ಥೆಯಲ್ಲಿ 189 ಕೋಟಿ ರೂಪಾಯಿ ನಷ್ಟವನ್ನು ಜೊಮ್ಯಾಟೊ ಸಂಸ್ಥೆಯು ಕಂಡಿದೆ.
More From GoodReturns

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications