ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಹೂಡಿಕೆಯ ಸುರಕ್ಷತೆತೆ ಕಡೆಗೆ ಗಮನ ಹರಿಸಬೇಕು. ನಾವು ಕಷ್ಟ ಪಟ್ಟು ದುಡಿದ ಮೊತ್ತ ಹೂಡಿಕೆ ಬಳಿಕ ನಮ್ಮ ಕೈಗೆ ಸಿಗದಿದ್ದರೆ ಏನು ಪ್ರಯೋಜನ ಅಲ್ವಾ?. ಹಾಗಿದ್ದಾಗ ನಾವು ಹೂಡಿಕೆ ಮಾಡುವಾಗ ಅತೀ ಎಚ್ಚರವಾಗಿರುವುದು ಮುಖ್ಯವಾಗುತ್ತದೆ.
ಹಣಕಾಸಿನ ಹೂಡಿಕೆಗಳ ವಿಚಾರದಲ್ಲಿ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯ, ವ್ಯಕ್ತಿಯ ಗುರಿಯನ್ನು ಅವಲಂಬಿಸಿ ವೈಯಕ್ತಿಕ ಆಯ್ಕೆಗಳ ವಿಷಯವಾಗಿದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಹೂಡಿಕೆ ಮಾಡುವಾಗ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿದಿರುವುದು ಅತೀ ಮುಖ್ಯವಾಗಿದೆ, ಇಲ್ಲಿದೆ ವಿವರ ಮುಂದೆ ಓದಿ...

1. ನೀವು ಹೂಡಿಕೆ ಮಾಡುವ ಮೊದಲು ವಿಮೆ ಮಾಡಿ
ಜೀವನಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ಹಾಗಿರುವಾಗ ನೀವು ಇತರೆಡೆ ಹೂಡಿಕೆ ಮಾಡುವ ಮೊದಲು ಮುಖ್ಯವಾಗಿ ವಿಮೆ ಮಾಡಿಸಿಕೊಳ್ಳಿ. ವಿಮೆಯು ನಿಮಗೆ ಹಣಕಾಸಿನ ತೊಂದರೆಗಳಿದ್ದಾಗ ಸಹಾಯ ಮಾಡುವುದು ಮಾತ್ರವಲ್ಲದೆ ವಿಮೆಯ ಸುರಕ್ಷತೆಯನ್ನು ಕೂಡಾ ನೀಡುತ್ತದೆ. ಅನಿಶ್ಚಿತತೆಯ ಈ ಕಾಲದಲ್ಲಿ ನಿಮ್ಮ ಸ್ವಂತ ಲಾಭಕ್ಕಾಗಿ ಅಲ್ಲ, ನಿಮ್ಮ ಆರ್ಥಿಕ ಅವಲಂಬಿತರಿಗೆ ಎಲ್ಲಾ ಹಣಕಾಸಿನ ಅಪಾಯಗಳ ವಿರುದ್ಧ ರಕ್ಷಣೆ ಪಡೆಯುವುದು ಅತೀ ಮುಖ್ಯ.
2. ಯೋಜನೆ ಇಲ್ಲದೆ ಹೂಡಿಕೆ ಮಾಡುವುದು ವ್ಯರ್ಥ
ಜನರು ಹೂಡಿಕೆಯ ಹೆಸರಿನಲ್ಲಿ ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ಯಾವುದೇ ಯೋಜನೆ ಅಥವಾ ತಂತ್ರವನ್ನು ಹೊಂದಿರಲ್ಲ. ಯಾವುದೇ ಯೋಜನೆಯಿಲ್ಲದೆಯೇ ಹೂಡಿಕೆ ಮಾಡುತ್ತಾರೆ. ಹಣಕಾಸಿನ ಗುರಿಗಳನ್ನು ಸಾಧಿಸಲು ಯೋಜನೆ ಅಥವಾ ಕಾರ್ಯತಂತ್ರವನ್ನು ಹೊಂದಿರುವುದು ಬಹಳ ಮುಖ್ಯ. ಯೋಜನೆ ಇಲ್ಲದೆ ಹೂಡಿಕೆ ಮಾಡುವುದು ವ್ಯರ್ಥ.
3. ಹೂಡಿಕೆ ಮಾಡಿದ ಷೇರುಗಳನ್ನು ಅತಿಯಾಗಿ ಪ್ರೀತಿಸಬೇಡಿ
ಹೂಡಿಕೆಯು ಮರಕ್ಕೆ ನೀರು ಹಾಕುವಂತೆ. ಆದರೆ ನಾವು ಸಾಮಾನ್ಯವಾಗಿ ಕೆಲವು ಮರಗಳಿಗೆ ಇತರ ಮರಗಳಿಗಿಂತ ಅಧಿಕ ನೀರು ಹಾಕುತ್ತೇವೆ. ನಾವು ಒಂದು ಷೇರಿನ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿದ್ದೇವೆ ಎಂದು ಅದೇ ಷೇರುಗಳ ಮೇಲೆ ಹೂಡಿಕೆ ಮಾಡುವುದು ಸರಿಯಲ್ಲ. ಇದರಿಂದ ನಷ್ಟವಾಗಬಹುದು. ನೀವು ಬೇರೆ ಬೇರೆ ಷೇರುಗಳಲ್ಲಿ ಹೂಡಿಕೆ ಮಾಡುವುದು ಅತೀ ಮುಖ್ಯವಾಗಿದೆ.
4. ಸಮಯಕ್ಕೆ ತಕ್ಕ ಬದಲಾವಣೆ
ಮಾರುಕಟ್ಟೆಯು ಬದಲಾವಣೆಯಾಗುತ್ತಲೇ ಇರುತ್ತದೆ. ತ್ರೈಮಾಸಿಕವಾಗಿ ಕೆಟ್ಟ ಪ್ರದರ್ಶನ, ಕೆಲವೊಂದು ಅಂಶಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತದೆ. ಹಾಗಿರುವಾಗ ನಾವು ಮಾರುಕಟ್ಟೆಯ ಬದಲಾವಣೆಗೆ ಸರಿಯಾಗಿ ಹೂಡಿಕೆಯಲ್ಲಿ ಕೂಡಾ ಬದಲಾವಣೆಯನ್ನು ಮಾಡಬೇಕು.
5. ಸ್ನೇಹಿತರು ಈ ಷೇರು ಖರೀದಿಸಿದರು, ನಾನು ಖರೀದಿಸುತ್ತೇನೆ!
"ನೀವು ಈ ಸ್ಟಾಕ್ ಅನ್ನು ಖರೀದಿ ಮಾಡಿದ್ದೀರಾ, ಹಾಗಾದರೆ ನಾನು ಕೂಡಾ ಈ ಷೇರನ್ನು ಖರೀದಿ ಮಾಡುತ್ತೇನೆ," ಎಂಬುವುದು ಸರಿಯಲ್ಲ. ನೀವು ಇನ್ನೊಬ್ಬರ ಆಯ್ಕೆಯನ್ನು ನಿಮ್ಮ ಆಯ್ಕೆಯನ್ನಾಗಿಸಬಾರದು. ತಜ್ಞರ ಅಭಿಪ್ರಾಯ ಪಡೆದು ಹೂಡಿಕೆ ಮಾಡಬೇಕು.
6. ಸಮಯಕ್ಕೆ ಸರಿಯಾಗಿ ಹೂಡಿಕೆ
ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯ ಸಮಯ ಮತ್ತು ಹೂಡಿಕೆ. ಇದು ಎಂದಿಗೂ ಕೂಡಾ ಭಿನ್ನವಾಗಿರುವುದಿಲ್ಲ. ನೀವು ಸಮಯಕ್ಕೆ ಸರಿಯಾಗಿ ಹೂಡಿಕೆ ಮಾಡಬೇಕಾಗುತ್ತದೆ. ಸಂಪತ್ತು ಬೆಳೆಯಬೇಕಾದರೆ ಸಮಯ ಬೇಕಾಗುತ್ತದೆ. ಆದ್ದರಿಂದಾಗಿ ಶೀಘ್ರ ಹೂಡಿಕೆ ಮಾಡಿ, ಉತ್ತಮ ರಿಟರ್ನ್ ಅನ್ನು ಸಮಯಕ್ಕೆ ಸರಿಯಾಗಿ ಪಡೆಯಿರಿ.
7. ಟ್ರೇಡರ್- ಹೂಡಿಕೆದಾರರು ಯಾವುದು?
ಷೇರಿನ ಬೆಲೆ ಏರಿದರೆ, ನಾನು ಅದನ್ನು ತ್ವರಿತವಾಗಿ ಮಾರಾಟ ಮಾಡುತ್ತೇನೆ. ಆದರೆ ಅದೇ ಷೇರಿನ ಬೆಲೆ ಕುಸಿದರೆ, ನಾನು ವರ್ಷಗಟ್ಟಲೆ ಅದೇ ಷೇರನ್ನು ಹೋಲ್ಡ್ ಮಾಡಿ, ಷೇರು ಬೆಲೆ ಏರಲು ಕಾಯುತ್ತೇನೆ ಎಂಬುವುದು ಗೊಂದಲಕಾರಿಯಾಗಿದೆ. ಇದು ವಿಜೇತರನ್ನು ಮಾರಾಟ ಮಾಡಿ, ಸೋತವರನ್ನು ನಮ್ಮ ಜೊತೆಯೇ ಉಳಿಸಿಕೊಳ್ಳುವಂತೆ ಆಗುತ್ತದೆ. ಆದ್ದರಿಂದಾಗಿ ಸರಿಯಾಗಿ ಪರಿಶೀಲನೆ ಮಾಡಿ, ಹೂಡಿಕೆ ಮಾಡಿ.
8. ಆಸ್ತಿ ಹಂಚಿಕೆಗೆ ಗಮನ ಕೊಡದಿರುವುದು
ಸರಿಯಾದ ಸ್ವತ್ತು ಹಂಚಿಕೆಯನ್ನು ಹೊಂದಿರುವುದು ಗರಿಷ್ಠ ಆದಾಯಕ್ಕೆ ಸಹಾಯ ಮಾಡುತ್ತದೆ. ಹಾಗೆಯೇ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ಆಸ್ತಿ ಹಂಚಿಕೆಯು ಈಕ್ವಿಟಿ, ಸಾಲ, ಚಿನ್ನ, ಇತ್ಯಾದಿಗಳಂತಹ ವಿವಿಧ ಆಸ್ತಿ ವರ್ಗಗಳನ್ನು ಹೊಂದಿರುವ ವೈವಿಧ್ಯಮಯ ಪೋರ್ಟ್‌ಫೋಲಿಯೊವನ್ನು ರಚಿಸಲು ಸಹಾಯ ಮಾಡುತ್ತದೆ. ಇದು ಕನಿಷ್ಠ ಆದಾಯದೊಂದಿಗೆ ಅಧಿಕ ಹಣ ಪಡೆಯಲು ಸಹಾಯ ಮಾಡುತ್ತದೆ.
9. ಸಾಕಷ್ಟು ಉಳಿತಾಯ ಮಾಡದಿರುವುದು, ದುಂದುವೆಚ್ಚ ಮಾಡುವುದು
ಖರ್ಚು ಮಾಡಿದ ಬಳಿಕ ಉಳಿದ ಮೊತ್ತವನ್ನು ನೀವು ಉಳಿತಾಯ ಮಾಡಬೇಡಿ. ಬದಲಾಗಿ ಉಳಿತಾಯ ಮಾಡಿದ ಬಳಿಕ ಖರ್ಚನ್ನು ಮಾಡಿ. ಜನರು ಸಾಮಾನ್ಯವಾಗಿ ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುವುದಿಲ್ಲ. ಒಟ್ಟಾರೆಯಾಗಿ ಖರ್ಚು ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿಯೂ ಅಗತ್ಯವಿಲ್ಲದ ಖರ್ಚುಗಳನ್ನು ಮಾಡಬೇಡಿ.
10. ಮಾರುಕಟ್ಟೆಯಲ್ಲಿ ತೊಡಗುವ ಸಮಯ
ಮಾರುಕಟ್ಟೆಯ ಸಮಯ ಮುಖ್ಯವಲ್ಲ, ನೀವು ಮಾರುಕಟ್ಟೆಯಲ್ಲಿ ಕಳೆಯುವ ಸಮಯದ ಪ್ರಮಾಣವು ಮುಖ್ಯವಾಗಿದೆ ಎಂದು ಮಾರುಕಟ್ಟೆಗಳು ಮತ್ತೆ ಮತ್ತೆ ಸಾಬೀತುಪಡಿಸಿವೆ. ಕಡಿಮೆ ಖರೀದಿ ಮಾಡಿ, ಹೆಚ್ಚು ಮಾರಾಟ ಮಾಡುವುದು ಸರಳ. ಆದರೆ ವಾಸ್ತವಕ್ಕೆ ಇದು ದೂರವಾಗಿದೆ. ಇದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಏಕೆಂದರೆ ಮಾರುಕಟ್ಟೆಯ ಏರಿಳಿತಗಳು ಪ್ರತಿದಿನ ಸಂಭವಿಸುತ್ತವೆ. ಮಾರುಕಟ್ಟೆಯ ದಿಕ್ಕನ್ನು ಯಾರೂ ಊಹಿಸಲು ಸಾಧ್ಯವಿಲ್ಲ.


Click it and Unblock the Notifications