ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವ್ರತವನ್ನು ಮಾಡಿ, ಮುತ್ತೈದೆಯರಿಗೆ ಹರಿಶಿಣ, ಕುಂಕುಮ ನೀಡಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಈ ದಿನದಂದು ಮಹಿಳೆಯರು ತಮ್ಮ ಭವಿಷ್ಯಕ್ಕಾಗಿಯೂ ಹಣ ಉಳಿತಾಯ ಮಾಡದಿದ್ದರೆ ಹೇಗೆ ಹೇಳಿ?. ಹೌದು, ಈ ದಿನ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಮಹಿಳೆಯರು ಯೋಚನೆ ಮಾಡಬೇಕಾಗುತ್ತದೆ. ಈ ದಿನ ಲಕ್ಷ್ಮೀಯನ್ನು ಪೂಜೆ ಮಾಡುವ ಕಾರಣದಿಂದಾಗಿ ಸಂಪತ್ತು ವೃದ್ಧಿ ಪ್ರತೀಕವಾಗಿ ಹೂಡಿಕೆ ಮಾಡಲಾಗುತ್ತದೆ. ಆರ್ಥಿಕ ಸ್ವಾತಂತ್ರ್ಯ ಇರಬೇಕಾದರೆ ಮಹಿಳೆಯರು ಕೂಡಾ ಹೂಡಿಕೆ ಮಾಡುವುದು ಮುಖ್ಯವಾಗಿದೆ. ಇಲ್ಲಿದೆ ನಿಮಗೆ ಹತ್ತು ಹೂಡಿಕೆ ಆಯ್ಕೆಗಳು ಮುಂದೆ ಓದಿ...

ಹತ್ತು ಹೂಡಿಕೆ ಆಯ್ಕೆಗಳು ಇಲ್ಲಿದೆ
1. ಚಿನ್ನ: ಮಹಿಳೆಯರು ಎಂದಿಗೂ ಕೂಡಾ ತಮ್ಮ ಉಳಿತಾಯವನ್ನು ಖರ್ಚು ಮಾಡುವುದೇ ಚಿನ್ನದ ಮೇಲೆ ಹೂಡಿಕೆ ಮಾಡಿ. ಚಿನ್ನವು ಭಾರತದಲ್ಲಿ ಒಂದು ಪವಿತ್ರ ನಂಟನ್ನು ಹೊಂದಿರುವ ಜೊತೆಗೆಯೇ, ಯಾವುದೇ ಕಷ್ಟ ಬಂದರೂ ಚಿನ್ನ ಸಹಾಯಕ್ಕೆ ಬರಲಿದೆ ಎಂದು ಆಲೋಚಿಸಿ ಹೂಡಿಕೆ ಮಾಡುವ ಮಹಿಳೆಯರು ಎಷ್ಟೋ ಮಂದಿ ಇದ್ದಾರೆ. ನೀವು ನೇರವಾಗಿ ಚಿನ್ನ ಖರೀದಿಸಬಹುದು, ಚಿನ್ನದ ಸ್ಕೀಮ್‌ಗೆ ಹೂಡಿಕೆ ಮಾಡಬಹುದು, ಅಥವಾ ಇಟಿಎಫ್, ಸವರನ್ ಗೋಲ್ಡ್ ಬಾಂಡ್ ಖರೀದಿಸಬಹುದು.
2. ಫಿಕ್ಸಿಡ್ ಡೆಪಾಸಿಟ್: ನಿಮ್ಮಲ್ಲಿ ಕೊಂಚ ಅಧಿಕ ಪ್ರಮಾಣದಲ್ಲಿ ಹಣವಿದ್ದರೆ, ಅದನ್ನು ದುಂದುವೆಚ್ಚ ಮಾಡಬೇಡಿ. ಈ ವರಮಹಾಲಕ್ಷ್ಮೀ ಹಬ್ಬದ ದಿನವೇ ಆ ಮೊತ್ತವನ್ನು ಫಿಕ್ಸಿಡ್ ಡೆಪಾಸಿಟ್ ಮಾಡಿಬಿಡಿ. ಕೆಲವು ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಎಫ್‌ಡಿ ಮೇಲೆ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ಎಲ್ಲಿ ಅಧಿಕ ಬಡ್ಡಿದರ ನೀಡಲಾಗುತ್ತದೆ ಎಂದು ನೋಡಿಕೊಂಡು ಹೂಡಿಕೆ ಮಾಡಿ.
3. ಎಲ್‌ಐಸಿ: ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಮಗವು ಮಹಿಳೆಯರಿಗಾಗಿಯೇ ಹಲವಾರು ವಿಮಾ + ಉಳಿತಾಯ ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ವಿಮಾ ಸುರಕ್ಷತೆ ಜೊತೆಗೆ ಹಣವನ್ನು ಉಳಿತಾಯ ಕೂಡಾ ಮಾಡಲು ಸಾಧ್ಯವಾಗುತ್ತದೆ.
4. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್: ಎನ್‌ಎಸ್‌ಸಿಯು ಮಹಿಳೆಯರಿಗಾಗಿ ಇರುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದನ್ನು 2023ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಘೋಷಣೆ ಮಾಡಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ಎರಡು ವರ್ಷದ ಅವಧಿಯಲ್ಲಿ ನೀವು ಮಾಡಿದ ಹೂಡಿಕೆಗೆ ಶೇಕಡ 7.5ರಷ್ಡು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.
5. ನ್ಯಾಷನಲ್ ಪೆನ್ಷನ್ ಸ್ಕೀಮ್: ಎನ್‌ಪಿಎಸ್ ಒಂದು ನಿವೃತ್ತಿ ಯೋಜನೆಯಾಗಿದೆ. ನಿವೃತ್ತಿ ವೇಳೆ ನಿಮಗೆ ಯಾವುದೇ ಹಣಕಾಸು ಸಮಸ್ಯೆ ಉಂಟಾಗದೆ ಇರಬೇಕಾದರೆ ನೀವು ಇಂತಹ ಯೋಜನೆಗಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗುತ್ತದೆ. ಎನ್‌ಪಿಎಸ್‌ಗೆ ನೀವು ವಾರ್ಷಿಕವಾಗಿ ಶೇಕಡ 9ರಿಂದ ಶೇಕಡ 12ರಷ್ಟು ಬಡ್ಡಿದರ ಪಡೆಯಬಹುದು. ಈ ವರಮಹಾಲಕ್ಷ್ಮೀ ದಿನ ನಿಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಿ.
6. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಪಿಪಿಎಫ್ ಸರ್ಕಾರ ನಿರ್ವಹಣೆ ಮಾಡುವ ಯೋಜನೆಯಾಗಿದೆ. ನೀವು ಇದರಲ್ಲಿ ತೆರಿಗೆ ಪ್ರಯೋಜನ ಪಡೆಯಬಹುದು. ನೀವು ಈ ಯೋಜನೆಯಲ್ಲಿ 15 ವರ್ಷ ಹೂಡಿಕೆ ಮಾಡಬಹುದು, ಹಾಗೆಯೇ 5 ವರ್ಷಗಳ ಕಾಲ ವಿಸ್ತರಣೆ ಮಾಡಿಕೊಳ್ಳಬಹುದು.
7. ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್: ಇಎಲ್‌ಎಸ್‌ಎಸ್ ಹೂಡಿಕೆ ಮಾಡಿದರೆ ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಯಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಈ ಹೂಡಿಕೆ ಆಯ್ಕೆಯಲ್ಲಿ 3 ವರ್ಷದ ಲಾಕಿನ್ ಅವಧಿ ಇರುತ್ತದೆ. ಅಂದರೆ ಮೂರು ವರ್ಷ ನೀವು ಮಾಡಿದ ಹೂಡಿಕೆಯನ್ನು ಹಿಂಪಡೆಯುವ ಆಯ್ಕೆ ಇರುವುದಿಲ್ಲ.
8. ರಿಯಲ್ ಎಸ್ಟೇಟ್: ರಿಯಲ್ ಎಸ್ಟೇಟ್ ಎಂದಾಗ ಹಲವಾರು ಮಂದಿ ಇದು ಪುರುಷರ ಹೂಡಿಕೆ ಆಯ್ಕೆ ಅಂದುಕೊಳ್ಳುತ್ತಾರೆ. ಆದರೆ ರಿಯಲ್ ಎಸ್ಟೇಟ್ ಕೇವಲ ಪುರುಷರ ಹೂಡಿಕೆಯ ಆಯ್ಕೆಯಲ್ಲ. ಮನೆ ಖರೀದಿ, ಆಸ್ತಿ ಖರೀದಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮಹಿಳೆಯರು ಕೂಡಾ ಹೂಡಿಕೆ ಮಾಡಬಹುದು.
9. ಕಾರ್ಪೊರೇಟ್ ಬಾಂಡ್‌ಗಳು: ಸಾಮಾನ್ಯವಾಗಿ ಸಂಸ್ಥೆಗಳು ಬಂಡವಾಳ ಸಂಗ್ರಹಕ್ಕಾಗಿ ಕಾರ್ಪೊರೇಟ್ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತವೆ. ಈ ವರಮಹಾಲಕ್ಷ್ಮಿ ಹಬ್ಬದ ದಿನದಂದು ಮಹಿಳೆಯರು ಬಾಂಡ್ ಖರೀದಿಸಬಹುದು. ಆದರೆ ಸಂಸ್ಥೆಯ ಬಗ್ಗೆ ಮಾಹಿತಿ ತಿಳಿದಿರುವುದು ಮುಖ್ಯ.
10. ಮ್ಯೂಚುಯಲ್ ಫಂಡ್: ಕೊಂಚ ರಿಸ್ಕ್ ಪಡೆದು ಹೂಡಿಕೆ ಮಾಡಲು ಬಯಸುವ ಮಹಿಳೆಯರು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಡೆಪ್ಟ್, ಈಕ್ವಿಟಿ, ಹೈಬ್ರಿಡ್ ಫಂಡ್ ಸೇರಿದಂತೆ ಹಲವು ಬಗೆಯ ಹೂಡಿಕೆ ಆಯ್ಕೆಗಳನ್ನು ಮ್ಯೂಚುಯಲ್ ಫಂಡ್‌ಗಳು ನಿಮಗೆ ನೀಡುತ್ತದೆ.


Click it and Unblock the Notifications