For Quick Alerts
ALLOW NOTIFICATIONS  
For Daily Alerts

ಬಿಜಿನೆಸ್‌ನಲ್ಲಿ ಯಶಸ್ಸು ಸಾಧಿಸಲು 10 ಸೂತ್ರಗಳು

|

ಬಿಜಿನೆಸ್ ಆರಂಭಿಸಬೇಕು ಎಂದು ಬಹುತೇಕ ಜನರು ಕನಸು ಕಾಣುತ್ತಾರೆ. ಆದರೆ ಹಾಕಿಕೊಂಡ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಹಲವಾರು ವರ್ಷಗಳೇ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಬಿಜಿನೆಸ್ ಅಂದರೆ ಕಂಪ್ಯೂಟರ್ ಇರಿಸಿ, ಅಂಗಡಿಯ ಬಾಗಿಲು ತೆರೆದೆರೆ ಸಾಕು ಹಣ ಹುಡುಕಿಕೊಂಡು ಬರುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ.

 

ಈಗಿನ ಆಧುನಿಕ ಯುಗದಲ್ಲಿ ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಅಲ್ಲಿ ಸ್ಪರ್ಧೆ ಇದ್ದೇ ಇದೆ. ಆದರೆ ಉದ್ಯೋಗ, ಬಿಸಿನೆಸ್ ಮಾಡಿಕೊಂಡು ಜೀವನ ನಡೆಸುತ್ತೇನೆ ಎನ್ನುವ ಆಶಾವಾದಿಗಳಿಗೆ ಪೂರಕವಾಗಿರುವ ಸೂಕ್ತ ವಾತಾವರಣವು ಇದೆ. ಹಾಗಿದ್ದರೆ ಅಂದುಕೊಂಡಂತೆ ಬಿಜಿನೆಸ್ ಆರಂಭಿಸಿದ ಮೇಲೆ ಯಶಸ್ಸು ಸಾಧಿಸಲು ಹೇಗೆ ಸಾಧ್ಯ. ಯಾವ ಕ್ರಮಗಳನ್ನು ಅನುಸರಿಸಿದರೆ ಬಿಜಿನೆಸ್‌ನಲ್ಲಿ ಲಾಭಗಳಿಸಬಹುದು ಎಂಬುದಕ್ಕೆ ಕೆಲವು ಸೂತ್ರಗಳನ್ನು ಈ ಕೆಳಗೆ ನೀಡಲಾಗಿದೆ ಓದಿ.

1. ಮೊದಲು ಸಂಘಟಿತರಾಗಿ ಕೆಲಸ ಮಾಡಿ

1. ಮೊದಲು ಸಂಘಟಿತರಾಗಿ ಕೆಲಸ ಮಾಡಿ

ಯಾವುದೇ ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ನೀವು ಮೊದಲು ಸಂಘಟಿತರಾಗಿರಬೇಕು. ನೀವು ಅಂದುಕೊಂಡ ಕಾರ್ಯಗಳನ್ನು ಮತ್ತು ಮಾಡಬೇಕಿರುವ ಕೆಲಸಗಳನ್ನು ಪೂರ್ಣಗೊಳಿಸಲು ನೀವು ಮಾಡಬೇಕಾದ ಕಾರ್ಯವೆಂದರೆ ಪ್ರತಿದಿನ ನೀವು ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಬೇಕು.

ಈ ರೀತಿಯಲ್ಲಿ ಮಾಡಿದ ಪಟ್ಟಿಯಲ್ಲಿ ಪ್ರತಿಯೊಂದನ್ನು ಪೂರ್ಣಗೊಳಿಸಿದ ಬಳಿಕ ಅದನ್ನು ಪರಿಶೀಲಿಸಬೇಕು. ಈ ಮೂಲಕ ಯಾವುದೇ ದಿನ ಮಾಡುವ ಕೆಲಸವನ್ನು ಮರೆಯದೇ ಇರಲು ಸಾಧ್ಯವಾಗುತ್ತದೆ.

 

2. ನಿರಂತರ ಪರಿಶ್ರಮ ಪಡಬೇಕು

2. ನಿರಂತರ ಪರಿಶ್ರಮ ಪಡಬೇಕು

ನಮ್ಮ ಬಿಜಿನೆಸ್ ಯಾವುದು ಅನ್ನುವುದು ಖಚಿತ ಆದ ಮೇಲೆ ನಾವು ಗುರಿ ಸಾಧಿಸುವ ಸಲುವಾಗಿ ಬದ್ಧರಾಗಿ ಕೆಲಸ ಮಾಡಬೇಕು. ನಿರಂತರ ಪರಿಶ್ರಮದಿಂದ ಮಾತ್ರ ನಾವು ಮುಂದೆ ಸಾಗಬಹುದು. ಏನೇ ಬಂದರು ಎದುರಿಸಿ ಕೈ ಹಿಡಿದ ಕೆಲಸ ಮಾಡೇ ತೀರುತ್ತೇನೆ ಅನ್ನುವ ಒಂದು ಮೊಂಡುತನ ಇರಬೇಕು. ಹೀಗಿದ್ದರೆ ಮಾತ್ರ ಮೊದಲಲ್ಲಿ ಎದುರಾಗುವ ಸೋಲು, ನಿರಾಶೆಗಳನ್ನು ದಾಟಿ ಮುಂದೆ ಹೋಗಲು ಸಾಧ್ಯ.

3. ಬಿಜಿನೆಸ್ ಕುರಿತು ವಿವರವಾದ ದಾಖಲೆಗಳನ್ನು ಇಟ್ಟುಕೊಳ್ಳಿ
 

3. ಬಿಜಿನೆಸ್ ಕುರಿತು ವಿವರವಾದ ದಾಖಲೆಗಳನ್ನು ಇಟ್ಟುಕೊಳ್ಳಿ

ಯಾರೇ ಯಶಸ್ವಿ ಉದ್ದಿಮೆದಾರರು ಆಗಿದ್ದರೆ ಅವರ ಬಳಿ ಬಿಜಿನೆಸ್‌ನ ವಿವರವಾದ ದಾಖಲೆಗಳು ಇರುತ್ತವೆ. ಹೀಗಾಗಿ ವಿವರವಾದ ದಾಖಲೆಗಳನ್ನು ಇಟ್ಟುಕೊಂಡರೆ ನಿಮ್ಮ ವ್ಯವಹಾರವು ಆರ್ಥಿಕವಾಗಿ ಎಲ್ಲಿದೆ ಮತ್ತು ನೀವು ಭವಿಷ್ಯದಲ್ಲಿ ಸಂಭಾವ್ಯ ಸವಾಲುಗಳನ್ನು ಎದುರಿಸಬಹುದು ಎಂದು ತಿಳಿಯಲು ಸಾಧ್ಯವಾಗುತ್ತದೆ. ಜೊತೆಗೆ ಈ ಸವಾಲುಗಳನ್ನು ನಿವಾರಿಸಲು ತಂತ್ರಗಳನ್ನು ರಚಿಸಲು ನಿಮಗೆ ಸಮಯ ಸಿಕ್ಕಂತಾಗುತ್ತದೆ.

4. ನಿಮಗೆ ಸ್ಪರ್ಧೆಯೊಡ್ಡುವವರನ್ನು ವಿಶ್ಲೇಷಿಸಿ

4. ನಿಮಗೆ ಸ್ಪರ್ಧೆಯೊಡ್ಡುವವರನ್ನು ವಿಶ್ಲೇಷಿಸಿ

ಯಾವುದೇ ಬಿಜಿನೆಸ್ ಆದರೂ ಸ್ಪರ್ಧೆಯಿಲ್ಲದಿದ್ದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಬಿಜಿನೆಸ್‌ ಸ್ಪರ್ಧೆಯಿದ್ದರೆ , ನಿಮ್ಮ ಪ್ರತಿಸ್ಪರ್ದಿಗಳಿಂದ ಅಧ್ಯಯನ ಮಾಡಲು ಮತ್ತು ಕಲಿಯಲು ನೀವು ಹೆದರುವುದಿಲ್ಲ. ಆ ಮೂಲಕ ನಿಮ್ಮ ವ್ಯವಹಾರದಲ್ಲಿ ಹೊಸ ಕಾರ್ಯತಂತ್ರಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಜೊತೆಗೆ ಹೆಚ್ಚು ಹಣ ಮಾಡಲು ಸಾಧ್ಯ.

5. ಮುಂಬರುವ ಅಪಾಯಗಳನ್ನು ಅರ್ಥಮಾಡಿಕೊಳ್ಳಿ

5. ಮುಂಬರುವ ಅಪಾಯಗಳನ್ನು ಅರ್ಥಮಾಡಿಕೊಳ್ಳಿ

ಬಿಜಿನೆಸ್‌ನಲ್ಲಿ ಕೇವಲ ಲಾಭ ಗಳಿಸುವುದಷ್ಟೇ ಅಲ್ಲ ಭವಿಷ್ಯದಲ್ಲಿ ಎದುರಾಗುವ ರಿಸ್ಕ್‌ಗಳನ್ನು ಅರಿತಿರಬೇಕು. ಯಾವ ಹೆಜ್ಜೆಯು ನಮ್ಮನ್ನು ಪಾತಾಳಕ್ಕೆ ಬೀಳಿಸಬಹುದು ಎಂದು ಅರಿತರೆ, ನೀವು ಹುಷಾರಾಗಿ ಕಾರ್ಯತಂತ್ರ ಹೆಣೆಯಲು ಸಾಧ್ಯ. ಹಾಗೆಯೇ ಹೆಚ್ಚು ಲಾಭ ಗಳಿಸಬಹುದು.

6. ಕ್ರಿಯೆಟಿವ್ ಆಗಿರಿ

6. ಕ್ರಿಯೆಟಿವ್ ಆಗಿರಿ

ನಿಮ್ಮ ವ್ಯವಹಾರವನ್ನು ಸುಧಾರಿಸಲು ಮತ್ತು ಸ್ಪರ್ಧೆಯಿಂದ ಎದ್ದು ಕಾಣುವಂತೆ ಯಾವಾಗಲೂ ಪ್ರಯತ್ನಿಸಿ. ಹೆಚ್ಚು ಕ್ರಿಯೆಟಿವ್ ಆಗಿ ನಿಮ್ಮ ವ್ಯವಹಾರವನ್ನು ಸುಧಾರಿಸಲು ಮಾರ್ಗಗಳನ್ನು ಹುಡುಕುತ್ತಿರಿ. ನಿಮಗೆ ಎಲ್ಲವೂ ತಿಳಿದಿಲ್ಲ ಎಂಬ ಮನೋಭಾವನೆಯಲ್ಲಿಯೇ ಹೊಸ ಹೊಸ ಆಲೋಚನೆಗಳಿಗೆ ಹಾಗೂ ವಿಧಾನಗಳಿಗೆ ಮುಕ್ತರಾಗಿರಿ. ಈ ಮೂಲಕ ಆಧುನಿಕ ಯುಗದಲ್ಲಿ ಸ್ಪರ್ಧೆಯೊಂದಿಗೆ ಹೆಜ್ಜೆಯಿಡಲು ಸಾಧ್ಯ.

7. ನಿಮ್ಮ ಗಮನವು ಕೇಂದ್ರೀಕೃತವಾಗಿರಲಿ

7. ನಿಮ್ಮ ಗಮನವು ಕೇಂದ್ರೀಕೃತವಾಗಿರಲಿ

ರೋಮ್ ಅನ್ನು ಒಂದು ದಿನದಲ್ಲಿ ನಿರ್ಮಿಸಲಾಗಿಲ್ಲ ಎಂಬ ಹಳೆಯ ಮಾತು ಇಲ್ಲಿ ಅನ್ವಯಿಸುತ್ತದೆ. ನೀವು ಯಾವುದೇ ಬಿಜಿನೆಸ್ ಆರಂಭಿಸಿದ ತಕ್ಷಣ ಹಣ ಸಂಪಾದಿಸಲು ಪ್ರಾರಂಭಿಸಿದ್ದೀರಿ ಎಂದಲ್ಲ. ನೀವು ಬಿಜಿನೆಸ್‌ನಲ್ಲಿ ಹಣ ಮಾಡಲು, ಲಾಭ ಗಳಿಸಲು ಸಮಯ ಬೇಕಾಗುತ್ತದೆ. ಹೀಗಾಗಿ ನಿಮ್ಮ ಅಲ್ಪಾವದಿಯ ಗುರಿಗಳನ್ನು ಸಾಧಿಸುವತ್ತ ನಿಮ್ಮ ಗಮನಹರಿಸಿ. ಹಣ ಬರುತ್ತಿಲ್ಲ ಎಂದು ಕೊರಗಿ ನಿರಾಶೆಗೊಳ್ಳದೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ.

8. ತ್ಯಾಗ ಮಾಡಲು ತಯಾರಿರಿ

8. ತ್ಯಾಗ ಮಾಡಲು ತಯಾರಿರಿ

ಬಿಜಿನೆಸ್ ಆರಂಭಿಸಿದ ಎದುರಾಗುವ ಕಠಿಣ ಸವಾಲು ಎಂದರೆ ನಿಮ್ಮ ಕುಟುಂಬದರವರಿಗೆ, ಸ್ನೇಹಿತರಿಗೆ ನಿಮ್ಮ ಸಮಯವನ್ನು ಕೊಡಲು ಸಾಧ್ಯವಾಗುವುದಿಲ್ಲ. ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ನೀವು ದುಡಿಯುತ್ತಿದ್ದರೆ ನೀವು ಹೆಚ್ಚಿನ ಸಮಯವನ್ನೇ ಹಾಕಬೇಕಾಗುತ್ತದೆ. ಇದರರ್ಥ ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಡಿಮೆ ಸಮಯವನ್ನೇ ಕಳೆಯಬೇಕಾಗುತ್ತದೆ.

9. ಉತ್ತಮ ಸೇವೆಯನ್ನು ಒದಗಿಸಿ

9. ಉತ್ತಮ ಸೇವೆಯನ್ನು ಒದಗಿಸಿ

ಯಾವುದೇ ಬಿಜಿನೆಸ್ ಆಗಿರಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಕ್ಕೆ ಮೊದಲ ಆದ್ಯತೆ ನೀಡುವುದನ್ನು ಮರೆಯಬಾರದು. ನಿಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸದರೆ ಅವರು ಮತ್ತೆ ನಿಮ್ಮಲ್ಲಿಯೇ ಹುಡುಕಿಕೊಂಡು ಬರುತ್ತಾರೆ. ಜೊತೆಗೆ ಮತ್ತಷ್ಟು ಜನರನ್ನು ಕರೆತರಲು ಒಲವು ತೋರುತ್ತಾರೆ. ಹೀಗಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು.

10. ನಿಮ್ಮ ಬಿಜಿನೆಸ್‌ನಲ್ಲಿ ಸ್ಥಿರತೆ ಇರಲಿ

10. ನಿಮ್ಮ ಬಿಜಿನೆಸ್‌ನಲ್ಲಿ ಸ್ಥಿರತೆ ಇರಲಿ

ಬಿಜಿನೆಸ್‌ನಲ್ಲಿ ಹಣ ಸಂಪಾದಿಸಲು ಸ್ಥಿರತೆ ಕೂಡ ಒಂದು ಪ್ರಮುಖ ಅಂಶವಾಗಿದೆ. ಪ್ರತಿದಿನ ಯಶಸ್ವಿಯಾಗಲು ನೀವು ಅಗತ್ಯವಾದುದನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು. ಇದು ದೀರ್ಘಾವಧಿಯಲ್ಲಿ ಸಕಾರಾತ್ಮಕ ಅಭ್ಯಾಸವನ್ನು ಸೃಷ್ಠಿಸುವುದರ ಜೊತೆಗೆ ಹಣ ಸಂಪಾದಿಸಲು ಸಹಾಯ ಮಾಡುತ್ತದೆ.

ನೀವು ಯಾವುದೇ ಉದ್ಯಮವನ್ನು ಆರಂಭಿಸಲು ಬಯಸುತ್ತೀರೋ ಅದರಲ್ಲಿ ಈ 10 ಸೂತ್ರಗಳನ್ನು ಬಳಸಿದರೆ ಬಿಜಿನೆಸ್‌ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.

 

English summary

10 Tips For Growing a Successful Business

If you are planning to start business These are the 10 Tips for Successful Business
Story first published: Saturday, January 4, 2020, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X